More

    ಅಕ್ರಮ ಮಳಿಗೆ ನೆಲಸಮಕ್ಕೆ ಪಟ್ಟು

    ಚಿತ್ರದುರ್ಗ: ನಗರದ ನೀಲಕಂಠೇಶ್ವರ ದೇವಾಲಯ ಸಮೀಪದ ಜಾಗದಲ್ಲಿ ಕೆಲ ರಾಜಕಾರಣಿಗಳು ಅನಧಿಕೃತ ಕಟ್ಟಡ ನಿರ್ಮಾಣ ಮಾಡುತ್ತಿದ್ದಾರೆ ಎಂದು ಜೈ ಕನಕ ಭಾರತೀ ಕ್ಲಬ್ ಅಸೋಷಿಯೇಷನ್ ಪ್ರಧಾನ ಕಾರ್ಯದರ್ಶಿ ಬಿ.ಎಚ್.ಗೌಡ್ರು ಆರೋಪಿಸಿದರು.

    ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ದೇವಾಲಯ ಸಮೀಪದ ಜನತಾ ಬಜಾರ್ ಎದುರಿರುವ ಎರಡು ಜಾಗಗಳು, 2016-17ರ ವರೆಗೆ ನಗರಸಭೆ ದಾಖಲೆಗಳಲ್ಲಿ ಕಾಂಗ್ರೆಸ್ ಕಚೇರಿ ಎಂದಿದ್ದು, ಕೆಲವರು ಅಧಿಕಾರ ದುರ್ಬಳಕೆ ಮಾಡಿ (ಓ) ಎಂದು ಖಾತೆ ನಮೂದಿಸಿ ಅನಧಿಕೃತವಾಗಿ ಮಳಿಗೆ ನಿರ್ಮಾಣ ಮಾಡುತ್ತಿದ್ದಾರೆ ಎಂದು ದೂರಿದರು.

    ಈ ಕಾಮಗಾರಿ ತಡೆಯುವಂತೆ ನಗರಸಭೆ ಆಡಳಿತಾಧಿಕಾರಿ ಆಗಿರುವ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದು, ನಗರಸಭೆ ಆಯುಕ್ತರು, ಅಧ್ಯಕ್ಷರು ಕಾಂಗ್ರೆಸ್ (ಓ) ಹೆಸರಿಗೆ ನೋಟಿಸ್ ನೀಡಿ ದಾಖಲೆ ಸಲ್ಲಿಸಲು ಕೋರಿದ್ದರು. ಆದರೆ, ಆಯುಕ್ತರಿಗೆ ಯಾವುದೇ ದಾಖಲೆಗಳು ನಮಗೆ ಸಲ್ಲಿಕೆ ಆಗಿಲ್ಲವೆಂದು ಆಯುಕ್ತರು ತಿಳಿಸಿದ್ದಾರೆ ಎಂದರು.

    ಕೋಟ್ಯಂತರ ರೂ. ಮೌಲ್ಯದ ಸ್ವತ್ತಿನ ದುರ್ಬಳಕೆಗೆ ಕೆಲವರು ಮುಂದಾಗಿದ್ದು, ಇದನ್ನು ನಗರಸಭೆ ಸ್ವತ್ತನ್ನಾಗಿ ಕಾಪಾಡಿಕೊಳ್ಳಬೇಕು. ಅಕ್ರಮ ಮಳಿಗೆ ನೆಲಸಮ ಮಾಡಿ. ಜಾಗ ವಶ ಪಡೆಸಿಕೊಳ್ಳಬೇಕು. ಇಲ್ಲದಿದ್ದರೆ ತೀವ್ರ ಪ್ರತಿಭಟನೆ ಹಾಗೂ ಕಾನೂನು ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

    ವಕೀಲ ಪ್ರಸನ್ನ ಮಾದಿಗ, ಸಮಿತಿ ಪ್ರಮುಖರಾದ ರಾಜು ಮಾದಿಗ, ಮುದ್ದುರಾಜ, ನಾಗೇಂದ್ರ ಬಾಬು, ಜಿ.ಕೆ.ಮಹಾಲಿಂಗಪ್ಪ, ಮಹಾಂತೇಶ್, ರುದ್ರಮುನಿ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts