More

    ದುರ್ಗದಲ್ಲಿ ಪ್ರಾಧ್ಯಾಪಕರಾಗಿದ್ದ ನಿಸಾರ್ ಅಹಮದ್

    ಚಿತ್ರದುರ್ಗ: ನಿತ್ಯೋತ್ಸವದ ಕವಿ ನಿಸಾರ್ ಅಹಮದ್ ಅವರಿಗೂ ದುರ್ಗಕ್ಕೂ ನಂಟಿದೆ.

    ನಗರದ ಸೈನ್ಸ್ ಕಾಲೇಜಿನಲ್ಲಿ 1961ರಲ್ಲಿ ಜಿಯಾಲಜಿ ಪ್ರಾಧ್ಯಾಪಕರಾಗಿ, ಎರಡನೇ ಅವಧಿ 1991ರಲ್ಲಿ ಎಚ್‌ಓಡಿ ಆಗಿ ಕೆಲ ಕಾಲ ಸೇವೆ ಸಲ್ಲಿಸಿದ್ದರು. ಕಳೆದ ವರ್ಷ ದುರ್ಗದಲ್ಲಿ ಜರುಗಿದ್ದ ರಾಜ್ಯಮಟ್ಟದ ಸುಗಮ ಸಂಗೀತ ಸಮ್ಮೇಳನದಲ್ಲಿ ಭಾಗವಹಿಸಿದ್ದು ದುರ್ಗಕ್ಕೆ ಅವರ ಕೊನೆಯ ಭೇಟಿ.

    1971 ರಲ್ಲಿ ಕುವೆಂಪು ಕುರಿತ ರಸ ಋಷಿ ಲೇಖನ ಸರಮಾಲೆಗೆ ಮಹಾಕವಿ ಸಂದರ್ಶನದ ವೇಳೆ ಕುವೆಂಪು ಅವರು, ನವ್ಯ-ನವೋದಯ ಸಾಹಿತ್ಯ ಕುರಿತಂತೆ ಆಡಿದ ಮಾತುಗಳು, ನಿಸಾರ್ ಹಾಗೂ ಕುವೆಂಪು ಅವರ ಭೇಟಿಗೂ ಕಾರಣವಾಯಿತು ಎಂದು ಇತಿಹಾಸ ಸಂಶೋಧಕ ರಾಜಶೇಖರಪ್ಪ ನೆನಪಿಸಿಕೊಂಡಿದ್ದಾರೆ.

    ಚಳ್ಳಕೆರೆಯ ನಿಸರ್ಗ ಗೋವಿಂದರಾಜ್ ಅವರು ನಿಸಾರ್ ಅಹಮದ್ ಅವರ ನೆಚ್ಚಿನ ಫೋಟೋಗ್ರಾಫರ್ ಆಗಿದ್ದರು. 2011ರಲ್ಲಿ ಬೆಳಗಾವಿಯಲ್ಲಿ ಜರುಗಿದ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಅವರಿಗೆ ಪರಿಚಯವಾಗಿದ್ದ ಗೋವಿಂದರಾಜ್ ಅಂದಿನಿಂದ ಅವರ ಛಾಯಾಗ್ರಾಹಕರಾಗಿ, ನಿಸಾರ್ ಕುಟುಂಬದ ಒಬ್ಬ ಸದಸ್ಯರಾಗಿದ್ದರು.

    ಬನವಾಸಿಯಲ್ಲಿ ನಡೆದ ಪಂಪ ಪ್ರಶಸ್ತಿ ಸಮಾರಂಭ ಸಹಿತ ಕಳೆದ 10 ವರ್ಷಗಳಿಂದ ನಿಸಾರ್ ಅವರು ಭಾಗವಹಿಸಿದ ಬಹುತೇಕ ಎಲ್ಲ ಸಮಾರಂಭಗಳ ಅಮೂಲ್ಯ ಕ್ಷಣಗಳನ್ನು ಗೋವಿಂದರಾಜ್ ಸೆರೆ ಹಿಡಿದಿದ್ದಾರೆ.

    ದುರ್ಗದಲ್ಲಿ ನಾನೊಂದು ಫೋಟೋ ಪ್ರದರ್ಶನ ಆಯೋಜಿಸಿ, ಅವರಿಂದ ಉದ್ಘಾಟಿಸಬೇಕೆಂಬ ಆಸೆ ಈಡೇರಲಿಲ್ಲ ಎಂದು ಗೋವಿಂದರಾಜ್ ದುಃಖಿಸಿದರು.

    ನಿಮ್ಮ ಮದುವೆಗೆ ನಾನು ಬರಲು ಆಗಲಿಲ್ಲ, ಈಗ ಹಾರ ಬದಲಿಕೊಳ್ಳಿ ಎಂದು ಕಳೆದ ವರ್ಷ ಜನವರಿಯಲ್ಲಿ ಸುಗಮ ಸಂಗೀತ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ದುರ್ಗಕ್ಕೆ ಬಂದಿದ್ದ ವೇಳೆ ನಿಸಾರ್ ಅಹಮದ್ ಹೇಳಿದ್ದರು ಎಂದು ನಗರಸಭೆ ಮಾಜಿ ಅಧ್ಯಕ್ಷೆ ಸುನೀತಾ ಮಲ್ಲಿಕಾರ್ಜುನ್ ಸ್ಮರಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts