More

    ವೇತನಕ್ಕಾಗಿ ಹೊರಗುತ್ತಿಗೆ ಸಿಬ್ಬಂದಿ ಪ್ರತಿಭಟನೆ

    ಚಿತ್ರದುರ್ಗ: ವೇತನ ಬಿಡುಗಡೆ ಸೇರಿ ನಾನಾ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ಬಿಸಿಎಂ, ಸಮಾಜ ಕಲ್ಯಾಣ ಮತ್ತು ಅಲ್ಪಸಂಖ್ಯಾತರ ಇಲಾಖೆ ಹೊರಗುತ್ತಿಗೆ ಸಿಬ್ಬಂದಿ ಗುರುವಾರ ಡಿಸಿ ಕಚೇರಿ ಬಳಿ ಪ್ರತಿಭಟನೆ ಆರಂಭಿಸಿದರು.
    ಜಿಲ್ಲೆ ವ್ಯಾಪ್ತಿಯ 6 ತಾಲೂಕುಗಳಲ್ಲಿ ಬಿಸಿಎಂ, ಎಸ್‌ಸಿ, ಎಸ್‌ಟಿ ಮತ್ತಿತರ ಹಾಸ್ಟೆಲ್‌ಗಳಲ್ಲಿ ಕರ್ತವ್ಯದಲ್ಲಿರುವ ಅಡುಗೆಯವರು, ಅಡುಗೆ ಸಹಾಯಕರು ಹೊರಗುತ್ತಿಗೆ ಆಧಾರದಡಿ ಕೆಲಸ ನಿರ್ವಹಿಸುತ್ತಿದ್ದಾರೆ.
    ಕರೊನಾದಿಂದಾಗಿ ಕಳೆದ ಏಪ್ರಿಲ್‌ನಿಂದ ವಿದ್ಯಾರ್ಥಿನಿಲಯಗಳಿಗೆ ರಜೆ ಇದೆ. ಇದರಿಂದಾಗಿ ಸಿಬ್ಬಂದಿಗೆ ವೇತನವಿಲ್ಲದಂತಾಗಿದ್ದು, ಬೇರೆ ಕೆಲಸವೂ ಇಲ್ಲದೆ ಜೀವನ ನಡೆಸುವುದೇ ದುಸ್ತರವಾಗಿದೆ. ಆರೋಗ್ಯ, ಮನೆ ಬಾಡಿಗೆ, ವಿದ್ಯುತ್ ಬಿಲ್ ಪಾವತಿ ಮತ್ತಿತರ ಖರ್ಚುಗಳಿಗೂ ಹಣವಿಲ್ಲದಂತಾಗಿದೆ ಎಂದು ಅಳಲು ತೋಡಿಕೊಂಡರು.
    ಅನೇಕ ಗುತ್ತಿಗೆ ಏಜೆನ್ಸಿಗಳು ಸರಿಯಾಗಿ ವೇತನ ನೀಡದೆ ಹಾಗೂ ಇಎಸ್‌ಐ, ಪಿಎಫ್ ಕಟ್ಟದೇ ಅನೇಕ ವರ್ಷಗಳಿಂದ ವಂಚಿಸುತ್ತಿವೆ ಎಂದು ಆರೋಪಿಸಿದ ಪ್ರತಿಭಟನಾನಿರತರು, ಬೇಡಿಕೆಗಳನ್ನು ಈಡೇರಿಸದಿದ್ದರೆ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಸಿದರು.
    ತ್ರಿವೇಣಿ, ಎಂ.ಕೆ.ಮೊಸಿನ, ನಿರಂಜನ, ಟಿ.ಕರಿಬಸಪ್ಪ, ಟಿ.ಪಾಪಯ್ಯ, ಬಿ.ಮೂರ್ತಿ, ಮಹೇಶ್, ಕೃಷ್ಣಮೂರ್ತಿ ಹಾಗೂ ಅಖಿಲ ಕರ್ನಾಟಕ ಹೊರಗುತ್ತಿಗೆ, ತುಂಡು ಗುತ್ತಿಗೆ ನೌಕರರ ಕ್ಷೇಮಾಭಿವೃದ್ಧಿ ಸಂಘದ ಪ್ರಮುಖರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts