More

    ಸಮಗ್ರ ಪ್ರಗತಿಗೆ ಶಿಕ್ಷಣವೇ ಬುನಾದಿ

    ಚಿತ್ರದುರ್ಗ: ಸಮುದಾಯಗಳ ಸಮಗ್ರ ಪ್ರಗತಿಗೆ ಶಿಕ್ಷಣವೇ ಬುನಾದಿ ಆಗಿದ್ದು, ಹೋರಾಟ, ಸಂಘಟನೆ ಮೂಲಕ ಮುಖ್ಯವಾಹಿನಿಗೆ ಬರುವಂತೆ ಸವಿತಾ ಹಾಗೂ ಮಡಿವಾಳ ಸಮುದಾಯದಕ್ಕೆ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಸಲಹೆ ನೀಡಿದರು.

    ಜಿಲ್ಲಾಡಳಿತದಿಂದ ನಗರದ ತರಾಸು ರಂಗಮಂದಿರದಲ್ಲಿ ಶನಿವಾರ ಏರ್ಪಡಿಸಿದ್ದ ಮಡಿವಾಳ ಮಾಚಿದೇವ ಹಾಗೂ ಸವಿತಾ ಮಹರ್ಷಿ ಜಯಂತಿ ಆಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ಈ ಎರಡು ಸಮುದಾಯಗಳು ಸಂಘಟಿತವಾಗಿ ರಾಜಕೀಯ ಶಕ್ತಿ ಪಡೆಯಬೇಕು ಎಂದರು.

    ಹಿಂದುಳಿದ ವರ್ಗಗಳಿಗೆ ದೇವರಾಜು ಅರಸು ರಾಜಕೀಯ ಪ್ರಾತಿನಿಧ್ಯ ಕೊಟ್ಟ ಬಳಿಕ ಈ ವರ್ಗಗಳಲ್ಲಿ ರಾಜಕೀಯ ಪ್ರಜ್ಞೆ ಬೆಳೆದಿದೆ. ಸರ್ಕಾರ ಹೆಚ್ಚಿನ ಸೌಲಭ್ಯ ಕಲ್ಪಿಸುವ ಮೂಲಕ ಶೋಷಿತ ಸಮುದಾಯಗಳನ್ನು ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಅಭಿವೃದ್ಧಿ ಪಡಿಸುವ ಕೆಲಸ ಮಾಡುತ್ತಿದ್ದು, ಎರಡೂ ಸಮುದಾಯಗಳ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತರುವುದಾಗಿ ಹೇಳಿದರು.

    ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಎನ್.ಚಂದ್ರಶೇಖರ್, ಮಡಿವಾಳ ಸಂಘ ಜಿಲ್ಲಾಧ್ಯಕ್ಷ ಟಿ.ರಮೇಶ್, ಎಡಿಸಿ ಸಿ.ಸಂಗಪ್ಪ, ನಗರಸಭೆ ಸದಸ್ಯೆ ಅನಿತಾ, ಪೌರಾಯುಕ್ತ ಜಿ.ಟಿ.ಹನುಮಂತರಾಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ನಿಜಲಿಂಗಪ್ಪ, ಮುಖಂಡರಾದ ಎನ್.ಡಿ.ಕುಮಾರ್, ಟಿ.ಚಿದಾನಂದಪ್ಪ, ತಿಪ್ಪೇಸ್ವಾಮಿ, ಗೋಪಿಕೃಷ್ಣ, ಪ್ರಶಾಂತ್, ಎನ್.ಶ್ರೀನಿವಾಸ್ ಮತ್ತಿತರರು ಇದ್ದರು. ಓ.ಮೂರ್ತಿ ಸಂಗಡಿಗರು ಗೀತೆ ಗಾಯನ ಪ್ರಸ್ತುತಪಡಿಸಿದರು.

    ಮೆರವಣಿಗೆ: ವೇದಿಕೆ ಕಾರ್ಯಕ್ರಮ ಮೊದಲು ನಗರದ ಮಡಿವಾಳ ಮಾಚಿದೇವರ ದೇವಸ್ಥಾನದ ಆವರಣದಲ್ಲಿ ಎಡಿಸಿ ಸಂಗಪ್ಪ, ತಹಸೀಲ್ದಾರ್ ಜೆ.ಸಿ.ವೆಂಕಟೇಶಯ್ಯ, ಮಡಿವಾಳ ಮಾಚಿದೇವ ಹಾಗೂ ಸವಿತಾ ಮಹರ್ಷಿ ಅವರ ಭಾವಚಿತ್ರಗಳ ಮೆರವಣಿಗೆಗೆ ಚಾಲನೆ ನೀಡಿದರು.

    ಟಿ.ತಿಪ್ಪೇಸ್ವಾಮಿ ಸಂಪಿಗೆ ಅನಿಸಿಕೆ: ಸಣ್ಣ ಜಾತಿಗಳಿಗೆ ವಿಶೇಷ ಸೌಲಭ್ಯ ಅಗತ್ಯ: ಒಂದೇ ವೇದಿಕೆಯಲ್ಲಿ ಮಡಿವಾಳ ಮಾಚಿದೇವ, ಸವಿತಾ ಮಹರ್ಷಿ ಜಯಂತಿ ಆಚರಿಸುತ್ತಿರುವುದು ಸಮಾಜಕ್ಕೆ ಮಾದರಿ ಆಗಿದೆ. ಈ ಮಹರ್ಷಿಗಳಿಬ್ಬರೂ ಕಾಯಕದ ಶ್ರೇಷ್ಠತೆ ಮೆರೆದವರು. ಇವರ ಆದರ್ಶಗಳು ನಮಗೆ ದಾರಿದೀಪವಾಗಬೇಕು. ಶೈಕ್ಷಣಿಕ, ರಾಜಕೀಯವಾಗಿ ಸಮುದಾಯಗಳು ಒಗ್ಗಟ್ಟಾಗಬೇಕು. ಸಣ್ಣ ಸಮುದಾಯಗಳಿಗೆ ಸರ್ಕಾರ ವಿಶೇಷ ಸೌಲಭ್ಯ ಕಲ್ಪಿಸಬೇಕು.

    ಸಂಶೋಧಕ ಡಾ.ಎನ್.ಎಸ್.ಮಹಂತೇಶ್ ಅನಿಸಿಕೆ: ಶರಣ ಚಳವಳಿಯಲ್ಲಿ ಮಾಚಿದೇವರ ಹೆಸರು ವಿಶೇಷವಾಗಿದೆ. ವೀರಶೈವ ಸಾಹಿತ್ಯ ಗ್ರಂಥಗಳು ಇವರ ಕುರಿತು ಹೆಚ್ಚು ಪ್ರಸ್ತಾಪಿಸಿವೆ. ಶಿವತತ್ವ ಚಿಂತಾಮಣಿ ಮುಂತಾದ ಕೃತಿಗಳಲ್ಲಿ ಮಾಚಿದೇವರ ಹೆಸರನ್ನು ಪ್ರಸ್ತಾಪಿಸಲಾಗಿದೆ. ಮಾಚಿದೇವ ವರ 550ಕ್ಕೂ ಹೆಚ್ಚು ವಚನಗಳು ದೊರೆತಿದ್ದು, ಮೌಢ್ಯಗಳನ್ನು ಕಟುವಾಗಿ ಟೀಕಿಸಿ, ಜನರಲ್ಲಿ ವೈಚಾರಿಕ ಕ್ರಾಂತಿ ಬಿತ್ತಿನ ಮಹಾನ್ ದಾರ್ಶನಿಕ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts