More

    ಫೆ.15ಕ್ಕೆ ಶಿವರಾತ್ರಿ ಮಹೋತ್ಸವಕ್ಕೆ ಚಾಲನೆ

    ಚಿತ್ರದುರ್ಗ: ನಗರದ ಶ್ರೀ ಕಬೀರಾನಂದಾಶ್ರಮದಲ್ಲಿ ಫೆ.15ರಿಂದ 21ರ ವರೆಗೆ ಆಯೋಜಿಸಿರುವ 90ನೇ ಮಹಾಶಿವರಾತ್ರಿ ಮಹೋತ್ಸವಕ್ಕೆ ಭಕ್ತರ ಸಹಕಾರ ಅತೀ ಮುಖ್ಯವೆಂದು ಶ್ರೀ ಶಿವಲಿಂಗಾನಂದ ಸ್ವಾಮೀಜಿ ಹೇಳಿದರು.

    ಉತ್ಸವದ ಅಂಗವಾಗಿ ಶ್ರೀಮಠದಲ್ಲಿ ಭಾನುವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಶ್ರೀಮಠ ಯಾವುದೇ ಜಾತಿ, ವರ್ಗಕ್ಕೆ ಮೀಸಲಾಗಿಲ್ಲ. ಮನುಕುಲದ ಶ್ರೇಯಸ್ಸು ಬಯಸುವುದೇ ನಮ್ಮ ಉದ್ದೇಶ. ಉತ್ಸವದ ಯಶಸ್ವಿಗೆ ಭಕ್ತರು ಸಹಕರಿಸಬೇಕು. ಹಿಂದಿನ ಸರ್ಕಾರ ಮಂಜೂರು ಮಾಡಿದ್ದ 30 ಲಕ್ಷ ರೂ. ಅನುದಾನದಲ್ಲಿ ವೇದಿಕೆ ನಿರ್ಮಾಣವಾಗಿದೆ ಎಂದರು.

    ಬಿಜೆಪಿ ನಿಕಟಪೂರ್ವ ಅಧ್ಯಕ್ಷ ಕೆ.ಎಸ್‌ನವೀನ್ ಮಾತನಾಡಿ, ನಗರ ಸಮೀಪದ ಒಂದು ಹಳ್ಳಿ ದತ್ತು ಪಡೆದು ಮುಂದಿನ ಮಹೋತ್ಸವದ ವೇಳೆ ಅದರ ಗುರುತರ ಬದಲಾವಣೆಗೆ ಶ್ರಮಿಸಬಹುದು ಎಂದು ಸಲಹೆ ನೀಡಿದರು.

    ಜಿಪಂ ಮಾಜಿ ಉಪಾಧ್ಯಕ್ಷ ಮಲ್ಲಿಕಾರ್ಜುನಸ್ವಾಮಿ ಮಾತನಾಡಿ, ಉತ್ಸವಕ್ಕೆ ಗಣ್ಯರ ಆಹ್ವಾನಕ್ಕೆ ಸಮಿತಿ ರಚಿಸಬೇಕು. ಕಳೆದ ವರ್ಷ 7 ಲಕ್ಷ ರೂ. ಕೊರತೆಯಾಗಿತ್ತು. ಈ ಬಾರಿಯೂ ಸಾಲದಲ್ಲಿ ಉತ್ಸವ ಆಚರಿಸುವಂತಾಗಬಾರದು ತಿಳಿಸಿದರು.

    ಜೆಡಿಎಸ್ ಮುಖಂಡ ಡಿ.ಗೋಪಾಲಸ್ವಾಮಿ ನಾಯಕ ಮಾತನಾಡಿ, ಮೌಢ್ಯದ ವಿರುದ್ಧ ಜಾಗೃತಿ ಮೂಡಿಸಿರುತ್ತಿರುವ ಹುಲಿಕಲ್ ನಟರಾಜ್ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಬೇಕು ಎಂದು ಹೇಳಿದರು.

    ಉತ್ಸವಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಅನುದಾನ ಪಡೆಯಬಹುದೆಂದು ಬಿಜೆಪಿ ಮುಖಂಡ ಸಿದ್ದೇಶ್ ಯಾದವ್ ತಿಳಿಸಿದರು.

    ಪತಂಜಲಿ ಯೋಗ ಸಂಸ್ಥೆ ಅಧ್ಯಕ್ಷ ಮಲ್ಲಿಕಾರ್ಜುನಪ್ಪ, ಮನೋವೈದ್ಯ ದೀಪಕ್, ಭದ್ರಾವತಿ ಸಿದ್ಧಾರೂಢಾಶ್ರಮದ ಕಾರ್ಯದರ್ಶಿ ರಾಮಮೂರ್ತಿ, ಬಿಜೆಪಿ ನೂತನ ಜಿಲ್ಲಾಧ್ಯಕ್ಷ ಎ.ಮುರುಳಿ, ಮಂಜುನಾಥ ಗುಪ್ತ, ಸಂದೀಪ್, ಲೇಖಕರಾದ ಜಿ.ಎಸ್.ಉಜ್ಜಿನಪ್ಪ, ಯೋಗೇಶ್ ಸಹ್ಯಾದ್ರಿ, ನಿರಂಜನ ದೇವರ ಮನೆ, ಮಠದ ಕಾರ್ಯದರ್ಶಿ ವಿ.ಎಲ್.ಪ್ರಶಾಂತ್, ಜನಪದ ಕಲಾವಿದರಾದ ಯುಗಧರ್ಮ ರಾಮಣ್ಣ, ಕಾಲ್ಕೆರೆ ಚಂದ್ರಪ್ಪ, ಆಯಿತೋಳು ವಿರುಪಾಕ್ಷಪ್ಪ, ವಿವಿಧ ಸಂಘಟನೆ ಮುಖಂಡರಾದ ಲಲಿತಾ ಕೃಷ್ಣಮೂರ್ತಿ, ರೂಪಾ ಜನಾರ್ಧನ್, ವಿ.ಎಲ್.ಪ್ರವೀಣ್, ತಿಮ್ಮಣ್ಣ, ಪುರುಷೋತ್ತಮ ನಾಯಕ, ಮಾಲತೇಶ್ ಅರಸು ಮತ್ತಿತರರು ಇದ್ದರು.

    ಬಿಸ್‌ವೈ, ಸಿದ್ದು, ಗೌಡರು, ಎಚ್‌ಡಿಕೆಗೆ ಆಹ್ವಾನ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ವಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರನ್ನು ಆಹ್ವಾನಿಸಿ, ಕರೆತರುವ ಪ್ರಯತ್ನ ಆ ಪಕ್ಷದ ಮುಖಂಡರು ಭರವಸೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts