More

    ಹಟ್ಟಿ ಜಾತ್ರೆ ಬಂದೋಬಸ್ತ್ ಕರ್ತವ್ಯದ ಪೊಲೀಸರಿಗೂ ಮಾಸ್ಕ್

    ಚಿತ್ರದುರ್ಗ: ನಾಯಕನಹಟ್ಟಿ ಶ್ರೀ ಗುರು ತಿಪ್ಪೇಸ್ವಾಮಿ ಜಾತ್ರೆ ಬಂದೋಬಸ್ತ್‌ಗೆ ನಿಯೋಜಿತರಾಗುವ ಪೊಲೀಸ್ ಅಧಿಕಾರಿ-ಸಿಬ್ಬಂದಿಗೆ ಕರೊನಾ ಭೀತಿ ಹಿನ್ನೆಲೆಯಲ್ಲಿ ಮಾಸ್ಕ್ ವಿತರಿಸುವುದಾಗಿ ಎಸ್ಪಿ ಜಿ.ರಾಧಿಕಾ ಹೇಳಿದರು.

    ಮಾ.12 ರಂದು ನಡೆಯಲಿರುವ ಹಟ್ಟಿ ತಿಪ್ಪೇಶನ ಜಾತ್ರೆಯ ಬಂದೋಬಸ್ತ್ ಕ್ರಮಗಳನ್ನು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

    ರಥೋತ್ಸವ ದಿನದಂದು ಬೆಳಗ್ಗೆ 9 ರಿಂದ ರಾತ್ರಿ 9 ರವರೆಗೆ ಯಾವುದೇ ಕಾರಣಕ್ಕೂ ನಾಯಕನಹಟ್ಟಿ ಪಟ್ಟಣಕ್ಕೆ ವಾಹನಗಳನ್ನು ಬಿಡಲಾಗುವುದಿಲ್ಲ. ದೇವಾಲಯದವರೆಗೆ ಬರಲು ಪಟ್ಟಣದ ಸಮೀಪದಿಂದ ಕಡಿಮೆ ದರದಲ್ಲಿ ಆಟೋ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

    ಪ್ರಾಣಿ ಬಲಿ ಇಲ್ಲ: ಜಾತ್ರೆಯಲ್ಲಿ ಪ್ರಾಣಿ ಬಲಿ ನಿಷೇಧಿಸಲಾಗಿದ್ದು,ಅದನ್ನು ಮೀರಿ ಪ್ರಾಣಿಗಳನ್ನು ತಂದರೆ ಪೊಲೀಸರು ಅವುಗಳನ್ನು ವಶಪಡಿಸಿ ಕೊಳ್ಳಲಿದ್ದಾರೆ. ಹೊರ ಮತ್ತು ಒಳ ಮಠಗಳಲ್ಲಿ ಕೊಬ್ಬರಿ ಸುಡಲೆಂದೇ ಪ್ರತ್ಯೇಕ ಜಾಗಳನ್ನು ದೇವಾಲಯ ಆಡಳಿತ ಮಂಡಳಿ ನಿಗದಿ ಪಡಿಸಿದೆ. ಇಲ್ಲಿ ಹೊರತು ಪಡಿಸಿ ಬೇರೆ ಕಡೆ ಕೊಬ್ಬರಿ ಸುಡುವಂತಿಲ್ಲವೆಂದರು.

    ಎಎಸ್ಪಿ ಎಂ.ಬಿ.ನಂದಗಾವಿ, ಚಳ್ಳಕೆರೆ ಡಿವೈಎಸ್ಪಿ ರೋಶನ್‌ಜಮೀರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts