More

    ಜೋಗಿಮಟ್ಟೀಲಿ ಸೆರೆಸಿಕ್ಕ ಆನೆಗೆ ನಾಮಕರಣ

    • ಸಕ್ರೆಬೈಲಿನಲ್ಲಿ ಕಾರ್ಯಕ್ರಮ ಆಯೋಜನೆಗೆ ಚಿಂತನೆ
    • ಹೊಸ ಸಂಪ್ರದಾಯಕ್ಕೆ ಮುನ್ನುಡಿ

    ಡಿಪಿಎನ್ ಶ್ರೇಷ್ಠಿ ಚಿತ್ರದುರ್ಗ: ಇಲ್ಲಿನ ಜೋಗಿಮಟ್ಟಿ ವನ್ಯಜೀವಿಧಾಮದಲ್ಲಿ ಸೆರೆ ಸಿಕ್ಕಿ ಶಿವಮೊಗ್ಗ ಸಕ್ರೆಬೈಲು ಆನೆಕ್ಯಾಂಪಿನಲ್ಲಿ ಪಳಗುತ್ತಿರುವ 22 ವರ್ಷದ ಸಲಗಕ್ಕೆ ಶೀಘ್ರವೇ ನಾಮಕರಣ ಸೌಭಾಗ್ಯ!

    ಕಳೆದ ಡಿಸೆಂಬರ್ ಮೊದಲ ವಾರದಲ್ಲಿ ವನ್ಯಜೀವಿಧಾಮ ವ್ಯಾಪ್ತಿಯ ಕೆನ್ನೆಡಲು, ನಂದಿಪುರ, ಕಕ್ಕೆರುವ ಪ್ರದೇಶದಲ್ಲಿ ಸಂಚರಿಸುತ್ತಿದ್ದ ಆನೆಯನ್ನು ನಾಗರಹೊಳೆ, ಸಕ್ರೆಬೈಲು ಕ್ಯಾಂಪ್‌ಗಳಿಂದ ಬಂದಿದ್ದ ಅಭಿಮನ್ಯು ನೇತೃತ್ವದ ಐದು ಆನೆಗಳು ಡಿ.9 ರಂದು ಸೆರೆ ಹಿಡಿದಿದ್ದವು. ಅಂದು ರಾತ್ರಿಯೇ ಅರಣ್ಯಾಧಿಕಾರಿಗಳು ಸೆರೆ ಸಿಕ್ಕ ಆನೆಯನ್ನು ಸಕ್ರೆಬೈಲಿಗೆ ಕಳುಹಿಸಿದ್ದರು.

    ಅಲ್ಲಿ ಆನೆಯನ್ನು ಈಗಾಗಲೇ ಶೇ.50ರಷ್ಟು ಪಳಗಿಸ ಲಾಗಿದೆ. ತರಬೇತಿ ಪೂರ್ಣಗೊಂಡ ಬಳಿಕ ಅದನ್ನು ಕ್ಯಾಂಪಿಗೆ ಕರೆ ತರಲಾಗುವುದು. ಕ್ಯಾಂಪಿಗೆ ಕರೆ ತರುವ ಮೊದಲು ಅದಕ್ಕೆ ಗಂಡುಗಲಿ ಎಂದು ಹೆಸರಿಡಲು, ಅದಕ್ಕಾಗಿ ಶೀಘ್ರವೇ ನಾಮಕರಣ ಕಾರ್ಯಕ್ರಮ ಆಯೋಜಿಸಲು ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.

    ಕಾಡಿನಲ್ಲಿ ಸೆರೆ ಸಿಕ್ಕ ಆನೆಗಳನ್ನು ಪಳಗಿಸಿ ಅವುಗಳಿಗೆ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಹೇಳಿದ ಹೆಸರಿಡುವುದು ಈವರೆಗೂ ನಡೆದು ಬಂದಿರುವ ಪದ್ಧತಿ. ಆ ಕ್ಷಣಕ್ಕೆ ತೋಚಿದ್ದ ಒಂದು ಹೆಸರಿನಿಂದ ಕರೆಯುವುದು ರೂಢಿ. ಆದರೆ, ಇದೇ ಮೊದಲ ಬಾರಿಗೆ ನಾಮಕರಣ ಕಾರ್ಯಕ್ರಮ ಆಯೋಜಿಸಿ ಆನೆ ಪಳಗಿಸಿದ ಮಾವುತರನ್ನು ಊಟೋಪಚಾರದೊಂದಿಗೆ ಗೌರವಿಸಲು ಉದ್ದೇಶಿಸಲಾಗಿದೆ. ಕ್ಯಾಂಪಿನಲ್ಲಿರುವ 25 ಆನೆಗಳಲ್ಲಿ ಮದಕರಿ ಹೆಸರಿನ ಆನೆ ಇದೆ. ಇದಕ್ಕೆ ಗಂಡುಗಲಿ ಎಂದು ಹೆಸರಿಡಲಾಗುತ್ತಿದ್ದು, ಅಲ್ಲೀಗ ಆನೆಗಳ ಸಂಖ್ಯೆ 26ಕ್ಕೆ ಏರಿದೆ. ಆನೆ ದಿನಾಚರಣೆಗೆ ಪ್ರಸಿದ್ಧವಾಗಿರುವ ಸಕ್ರೆಬೈಲು ಈಗ ಆನೆಗೆ ನಾಮಕರಣ ಮಹೋತ್ಸವ ನಡೆಸುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಲು ಮುಂದಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts