More

    ಮಠದಂಗಳದಲ್ಲಿ ಬಸವ ಯೋಗಧ್ಯಾನ

    ಚಿತ್ರದುರ್ಗ: ಕೇಂದ್ರ ಸರ್ಕಾರ ಜೂ.21 ಅನ್ನು ವಿಶ್ವ ಯೋಗ ದಿನ ಎಂದು ಘೋಷಣೆ ಮಾಡಿದ್ದು, ದೇಶ-ವಿದೇಶಗಳಲ್ಲೂ ಆಚರಣೆ ಮಾಡಲಾಗುತ್ತಿದೆ ಎಂದು ಶ್ರೀ ಶಿವಮೂರ್ತಿ ಮುರುಘಾ ಶರಣರು ತಿಳಿಸಿದರು.

    ಮುರುಘಾ ಮಠದಲ್ಲಿ ಭಾನುವಾರ ಆಯೋಜಿಸಿದ್ದ ಬಸವಯೋಗ ದಿನದ ಕಾರ್ಯಕ್ರಮದಲ್ಲಿ ಮಾತನಾಡಿ, ಜನತೆ ವರ್ಷಕ್ಕೆ ಒಂದು ದಿನ ಯೋಗ ದಿನ ಎನ್ನುತ್ತಾರೆ. ಆದರೆ, ನಾವು ಮಠದಲ್ಲಿ 365 ದಿನವೂ ಸಹಜ ಶಿವಯೋಗ ಮಾಡುತ್ತೇವೆ ಎಂದರು.

    ಕರೊನಾ ಸಂದರ್ಭದಲ್ಲಿ ಮಂದಿರ, ಮಠಗಳ ಕರ್ತೃಗದ್ದಿಗೆ, ಮಸೀದಿ, ಚರ್ಚ್‌ಗಳು ಬಾಗಿಲು ಮುಚ್ಚಿದ್ದರೂ ಲಿಂಗಾಯತ ಧರ್ಮದ ಶಿವಯೋಗದ ಬಾಗಿಲು ಮುಚ್ಚಿರಲಿಲ್ಲ. ನಮ್ಮದು ಅತ್ಯಂತ ಮುಂದುವರಿದ ತತ್ತ್ವಜ್ಙಾನ, ವೈಜ್ಙಾನಿಕವಾದ ಶಿವಯೋಗ ಎಂದು ಹೇಳಿದರು.

    ಆಯುರ್ವೇದ ನಮ್ಮಲ್ಲಿನ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ನಮ್ಮಲ್ಲಿನ ಆಹಾರ ಪದ್ಧತಿಯಿಂದ ನಾವು ಸುರಕ್ಷಿತವಾಗಿದ್ದೇವೆ. ಅನೇಕ ವರ್ಷಗಳಿಂದ ದುಡಿಯಲು ಬೇರೆ ರಾಷ್ಟ್ರಗಳಿಗೆ ಹೋದವರು ಭಾರತ ಸುರಕ್ಷಿತವೆಂದು ನಮ್ಮ ದೇಶಕ್ಕೆ ವಾಪಸ್ ಆಗುತ್ತಿದ್ದಾರೆ ಎಂದರು.

    ದಾವಣಗೆರೆ ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ, ಶ್ರೀ ಕೇತೇಶ್ವರ ಸ್ವಾಮಿಗಳು, ಸಾಧಕರು, ಎಸ್‌ಜೆಎಂ ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ.ಪರಮಶಿವಯ್ಯ, ಕಾರ್ಯನಿರ್ವಹಣಾಧಿಕಾರಿ ಎಂ.ಜಿ.ದೊರೆಸ್ವಾಮಿ ಇದ್ದರು. ಜಮುರಾ ಕಲಾವಿದರು ವಚನಗಾಯನ ಮಾಡಿದರು.

    ದುರಹಂಕಾರಿ ಆಗದಿರು ಎನ್ನುತ್ತದೆ ಕಾಲಧರ್ಮ: ಕಾಲಧರ್ಮ ಎಂಬುದು ನಮಗೆ ದುರಹಂಕಾರಿ ಆಗದಿರು ಎಂದು ಹೇಳುತ್ತದೆ. ಸ್ವಾಮೀಜಿಗಳಾದ ನಾವು ಸಮಾಜಕ್ಕಾಗಿ ಜೀವನ ಮುಡಿಪಾಗಿಟ್ಟಿದ್ದೇವೆ. ಸಮಾಜ ನಮಗಾಗಿ ಎಂದು ಭಾವಿಸಿದರೆ ಅದು ದುರಹಂಕಾರ ಆಗುತ್ತದೆ. ಅಹಂಕಾರದಿಂದ ನಮ್ಮನ್ನು ಬಿಡಿಸಿಕೊಳ್ಳಬೇಕು, ಜನಸೇವೆ ನಮ್ಮ ಬದುಕಾಗಬೇಕು ಎಂದು ಮುರುಘಾ ಶರಣರು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts