More

    ಕೃಷಿ ಸಮಸ್ಯೆ ಬಗೆಹರಿದರೆ ಆಹಾರ ಭದ್ರತೆ: ಜಿಪಂ ಸಿಇಒ ಟಿ.ಯೋಗೇಶ್

    ಚಿತ್ರದುರ್ಗ: ಪ್ರಪಂಚಕ್ಕೆ ಆಹಾರ ಒದಗಿಸುವವರು ಕೃಷಿಕರು. ಆದ್ದರಿಂದ ರೈತರ ಹಾಗೂ ಕೃಷಿ ವಲಯದ ಪ್ರಸ್ತುತ ಬಿಕ್ಕಟ್ಟಗಳನ್ನು ನಿವಾರಿಸಲು ವಿವಿಧ ಇಲಾಖೆಗಳನ್ನು ಒಗ್ಗೂಡಿಸಿ ಸಮಗ್ರ ಯೋಜನೆ ರೂಪಿಸು ಅಗತ್ಯವಿದೆ ಎಂದು ಜಿಪಂ ಸಿಇಒ ಟಿ.ಯೋಗೇಶ್ ಹೇಳಿದರು.

    ಕೃಷಿ ಮತ್ತಿತರ ಇಲಾಖೆ ಸೇರಿ ವಿವಿಧ ಸಂಸ್ಥೆಗಳ ಆಶ್ರಯದಲ್ಲಿ ನಗರದ ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವ ಆಹಾರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

    ಕೃಷಿ, ತೋಟಗಾರಿಕೆ, ಪಶು ಸಂಗೋಪನೆ, ಆರ್‌ಡಿಪಿಆರ್, ರೇಷ್ಮೆ ಹೀಗೆ ಪೂರಕ ಇಲಾಖೆಗಳು ಬಿಡಿ, ಬಿಡಿಯಾಗಿ ಅನುಷ್ಠಾನಗೊಳಿಸುವ ಬದಲು ಕೃಷಿ ಮತ್ತು ಕೃಷಿಕರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ಕೊಡಬೇಕಿದೆ ಎಂದರು.

    ಇದಕ್ಕೆ ಪ್ರಗತಿಪರ ರೈತರು ಹಾಗೂ ನಿವೃತ್ತ ಅಧಿಕಾರಿಗಳ ನೆರವು ಪಡೆದು ಸಮಗ್ರ ಯೋಜನೆ ರೂಪಿಸಿದರೆ, ಏಕರೂಪದ ಬೆಳೆಯನ್ನೇ ಅಧಿಕ ಪ್ರಮಾಣದಲ್ಲಿ ಬೆಳೆಯುವುದನ್ನು ನಿಯಂತ್ರಿಸುವ ಮೂಲಕ ರೈತರಿಗೆ ಆಗುವ ಆರ್ಥಿಕ ಹಾನಿ ತಡೆಗಟ್ಟಬಹುದು.

    ಜಮೀನು ವಿಸ್ತೀರ್ಣಕ್ಕೆ ತಕ್ಕಂತೆ ವೈವಿಧ್ಯಮಯ ಬೆಳೆಗಳಿಗೆ ರೈತರನ್ನು ಪ್ರೋತ್ಸಾಹಿಸಬೇಕು. ಇದು ಆಹಾರ ಭದ್ರತೆಗೆ ಪೂರಕವೂ ಆಗಲಿದೆ. ಜಿಲ್ಲೆಯಲ್ಲೂ ವಿವಿಧ ಬೆಳೆಗೆ ರೈತರಲ್ಲಿ ಜಾಗೃತಿ ಮೂಡಿಸುವಂತೆ ಅಧಿಕಾರಿಗಳಿಗೆ ಸಲಹೆ ನೀಡಿದರು.

    ಕೃಷಿ ಇಲಾಖೆ ಜೆಡಿ ಡಾ.ವಿ.ಸದಾಶಿವ ಅಧ್ಯಕ್ಷತೆ ವಹಿಸಿದ್ದರು. ಧಾರವಾಡ ಕರ್ನಾಟಕ ವಿವಿ ಸಹಾಯಕ ಪ್ರಾಧ್ಯಾಪಕ ಜೆ.ಡಿ.ಚೇತನ್, ಇಲಾಖೆ ಉಪ ನಿರ್ದೇಶಕ ಹುಲಿರಾಜ್, ನಿವೃತ್ತ ಸಹಾಯಕ ಕೃಷಿ ನಿರ್ದೇಶಕ ಕೆ.ಎಚ್.ರವೀಂದ್ರನಾಥ್, ರಾಜ್ಯ ಯೋಜನಾ ಮಂಡಳಿ ಸದಸ್ಯ ಜೆ.ದೇವರಾಜರೆಡ್ಡಿ, ಕೃಷಿ ತಂತ್ರಜ್ಞರ ಸಂಸ್ಥೆಯ ತಿಪ್ಪೇಸ್ವಾಮಿ, ಚಂದ್ರಪ್ಪ, ಡಾ.ದೊಡ್ಡಮಲ್ಲಯ್ಯ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts