More

    ರಾಜೀವ್ ಅಧಿಕಾರ ವಿಕೇಂದ್ರೀಕರಣದ ನೇತಾರ

    ಚಿತ್ರದುರ್ಗ: ಮಾಜಿ ಪ್ರಧಾನಿ ರಾಜೀವ್‌ಗಾಂಧಿ ಅವರ ಆದರ್ಶಗಳನ್ನು ಪಕ್ಷದ ಕಾರ‌್ಯಕರ್ತರು ಮೈಗೂಡಿಸಿಕೊಳ್ಳಬೇಕೆಂದು ಮಾಜಿ ಸಚಿವ ಎಚ್. ಆಂಜನೇಯ ಹೇಳಿದರು.

    ರಾಜೀವ್ ಗಾಂಧಿ ಪುಣ್ಯಸ್ಮರಣೆ ಅಂಗವಾಗಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಭಯೋತ್ಪಾದನೆ ವಿರೋಧಿ ದಿನಾಚರಣೆಯಲ್ಲಿ ಮಾತನಾಡಿದರು.

    ದೂರ ಸಂಪರ್ಕ ಕ್ರಾಂತಿಯ ಮೂಲಕ ದೇಶದ ಯುವಜನರ ಮೇಲೆ ವಿಶ್ವಾಸವಿಟ್ಟು 18 ವಯಸ್ಸಿಗೆ ಮತದಾನದ ಹಕ್ಕು ನೀಡಿದ ರಾಜೀವ್‌ಗಾಂಧಿಯ ಆದರ್ಶ, ಚಿಂತನೆ, ತತ್ವಸಿದ್ಧಾಂತಗಳಡಿ ಕಾರ್ಯಕರ್ತರು ದೇಶಸೇವೆಗೆ ಮುಂದಾಗಬೇಕು ಎಂದರು.

    ತೋಳ್ಬಲ, ಹಣ ಬಲವಿದ್ದವರು ಅಧಿಕಾರ ಚಲಾಯಿಸುತ್ತಿರುವುದನ್ನು ಗಮನಿಸಿದ್ದ ರಾಜೀವ್, ಪಂಚಾಯತ್ ರಾಜ್ ವ್ಯವಸ್ಥೆ ಮೂಲಕ ಅಧಿಕಾರ ವಿಕೇಂದ್ರೀಕರಣಗೊಳಿಸಿದ ನೇತಾರ ಎಂದು ಬಣ್ಣಿಸಿದರು.

    ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಮಾತನಾಡಿ, ಮೇ 21 ಕಾಂಗ್ರೆಸ್ ಪಕ್ಷಕ್ಕೆ ದುಃಖದ ದಿನ. ಉಗ್ರಗಾಮಿಗಳ ಗುಂಡಿಗೆ ರಾಜೀವ್ ಬಲಿಯಾದ ದಿನ ಎಂದು ಹೇಳಿದರು.

    ದೀನ ದಲಿತರು, ಬಡವರು ಹಾಗೂ ದೇಶದ ಬಗ್ಗೆ ಅಪಾರವಾದ ಕಾಳಜಿ ರಾಜೀವ್ ಗಾಂಧಿಯವರಲ್ಲಿ ಇತ್ತು. ಹೃದಯ ವೈಶಾಲತೆ ಹೊಂದಿದ್ದ ಅವರು ದೇಶದ ಅಭಿವೃದ್ಧಿಗಾಗಿ ಸದಾ ತುಡಿಯುತ್ತಿದ್ದರು ಎಂದರು.

    ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‌ಪೀರ್, ಮಾಜಿ ಅಧ್ಯಕ್ಷ ಫಾತ್ಯರಾಜನ್, ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಜಿ.ಎಸ್.ಮಂಜುನಾಥ್, ಮುಖಂಡರಾದ ಆರ್.ಕೆ.ನಾಯ್ಡು, ಶಬ್ಬೀರ್ ಅಹಮದ್, ಎಂ.ಅಜ್ಜಪ್ಪ, ಡಿ.ಎನ್.ಮೈಲಾರಪ್ಪ, ಸಂಪತ್‌ಕುಮಾರ್, ಎಚ್.ಶಬ್ಬೀರ್ ಭಾಷ, ಸೈಯದ್ ಅಲ್ಲಾಭಕ್ಷಿ, ಆರ್.ಪ್ರಕಾಶ್, ಎನ್.ಡಿ.ಕುಮಾರ್, ಜಿ.ಮನೋಹರ, ಹಸನ್ ತಾಹೀರ್, ಮಹಮದ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts