More

    ವಿದ್ಯುತ್ ಕೇಂದ್ರ ನಿರ್ಮಾಣ ಮುನ್ನ ರೈತರಿಗೆ ಮಾಹಿತಿ ಕೊಡಿ

    ಚಿತ್ರದುರ್ಗ: ಜಿಲ್ಲೆಯಲ್ಲಿ ವಿದ್ಯುತ್ ಕೇಂದ್ರ ನಿರ್ಮಾಣ ಮುನ್ನ ರೈತರಿಗೆ ಮೊದಲೇ ಮಾಹಿತಿ ನೀಡಬೇಕೆಂದು ಡಿಸಿ ಆರ್.ವಿನೋತ್‌ಪ್ರಿಯಾ ಕೆಪಿಟಿಸಿಎಲ್ ಅಧಿಕಾರಿಗಳಿಗೆ ಸೂಚಿಸಿದರು.

    ಡಿಸಿ ಕಚೇರಿಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ನೇರಲಗುಂಟೆ, ಮಲ್ಲಪ್ಪನಹಳ್ಳಿ ಹಾಗೂ ಗೋಡಬನಹಾಳ್ ಗ್ರಾಮಗಳಲ್ಲಿ ವಿದ್ಯುತ್ ಕೇಂದ್ರ ನಿರ್ಮಾಣ ಕಾಮಗಾರಿ,ವಿದ್ಯುತ್ ಪ್ರಸರಣ ಮಾರ್ಗಗಳ ಭೂ ನಷ್ಟ, ಬೆಳೆ ನಷ್ಟ ಪರಿಹಾರ ಕುರಿತು ಮಾತನಾಡಿದರು.

    ಭೂ ನಷ್ಟ ಪರಿಹಾರ ಮಂಜೂರು ವೇಳೆ ದಾಖಲೆಗಳೇ ಆಧಾರವಾಗಿದೆ. ನಿಯಮಕ್ಕೆ ಅನುಗುಣವಾಗಿ ಭೂ-ನಷ್ಟ ಪರಿಹಾರ ಕೊಡಲಾಗುತ್ತದೆ. ಹೆಚ್ಚಿನ ಪರಿಹಾರ ಬಯಸುವ ರೈತರು ಕೋರ್ಟ್ ಮೊರೆ ಹೋಗಬಹುದು. ಜಿಲ್ಲೆಯಲ್ಲಿ ಬೆಳೆ ನಷ್ಟ ಹಾಗೂ ಭೂ ನಷ್ಟ ಪರಿಹಾರವನ್ನು ಗರಿಷ್ಠ ಮಿತಿಯಲ್ಲಿ ನೀಡಲಾಗುತ್ತಿದೆ. ಈ ಸೌಲಭ್ಯ ಚಿತ್ರದುರ್ಗದಲ್ಲಿ ಮಾತ್ರ ಇದೆ ಎಂದರು.

    ವಿದ್ಯುತ್ ಕಂಬಗಳನ್ನು ಅಳವಡಿಸುವ ಜಾಗ ಬದಲಾವಣೆ ಸಾಧ್ಯವಿದ್ದರೆ ಬದಲಿಸುವಂತೆ ಸೂಚಿಸಿದರು. ಭೂ-ನಷ್ಟ ಪರಿಹಾರ ಮಂಜೂರಲ್ಲಿ ಪಾರದರ್ಶಕತೆ ಕಾಪಾಡಬೇಕು. ಸೂಕ್ತ ಮಾಹಿತಿ ಬಳಿಕವೇ ವಿದ್ಯುತ್ ಕಂಬಗಳನ್ನು ಅಳವಡಿಸಬೇಕು. ಭೂ-ನಷ್ಟ ಪರಿಹಾರವನ್ನು ವಿಮೆ ರೀತಿ ಒದಗಿಸಿದರೆ ಜೀವನ ನಿರ್ವಹಣೆ ಸಾಧ್ಯ. ಪರಿಹಾರಕ್ಕೆ ಒಂದೇ ಮಾನದಂಡ ಅನುಸರಿಸಬೇಕು. ಪರಿಹಾರಕ್ಕಾಗಿ ವಿನಾ ಕಾರಣ ಅಲೆದಾಡಿಸಬಾರದು.

    ಜಮೀನು ಮಧ್ಯ ವಿದ್ಯುತ್ ಕಂಬ ಅಳವಡಿಸಿದ್ದರಿಂದ ಬೆಳೆಗೆ ತೊಂದರೆಯಾಗಿದೆ. ವಿದ್ಯುತ್ ಕಂಬಗಳನ್ನು ಸರ್ಕಾರಿ ಜಮೀನಲ್ಲಿ ಅಳವಡಿಸಿದರೆ ರೈತರಿಗೆ ಅನುಕೂಲವಾಗುತ್ತದೆ. ಈ ಮೊದಲು ನೆಟ್ಟಿರುವ ಕಂಬಗಳ ಭೂ ಪರಿಹಾರ ಕೊಟ್ಟಿಲ್ಲವೆಂದು ಹಲವು ರೈತರು ಅಸಮಾಧಾನ ವ್ಯಕ್ತಪಡಿಸಿದರು.

    ಕೆಪಿಟಿಸಿಎಲ್ ಕಾರ್ಯನಿರ್ವಾಹಕ ಇಂಜಿನಿಯರ್ ಕೃಷ್ಣಪ್ಪ ಮಾತನಾಡಿ, ಕಾರಿಡಾರ್‌ಗೆ ಸಂಬಂಧಿಸಿದಂತೆ ರೈತರಿಗೆ 1 ಎಕರೆಗೆ 2.5 ಲಕ್ಷ ರೂ.ಭೂ ನಷ್ಟ ಪರಿಹಾರ ನೀಡಲಾಗುತ್ತದೆ. ಮೊದಲನೆ ಹಂತದಲ್ಲಿ ಭೂ ಅಡಿಪಾಯ ನಂತರದಲ್ಲಿ ವೈರ್ ಎಳೆಯುವಾಗ ಪರಿಹಾರ ಧನ ನೀಡಲಾಗುತ್ತದೆ ಎಂದರು.

    ಉಪವಿಭಾಗಾಧಿಕಾರಿ ವಿ.ಪ್ರಸನ್ನ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts