More

    ಉತ್ತಮ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಪ್ರಮುಖ

    ಚಿತ್ರದುರ್ಗ: ಪ್ರತಿಯೊಬ್ಬರೂ ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಜೀವನ ನಡೆಸಲು ಶಿಕ್ಷಣ ದಾರಿ ದೀಪವಾಗಿದೆ ಎಂದು ಡಯಟ್ ಪ್ರಾಚಾರ‌್ಯ ಎಂ.ನಾಸಿರುದ್ದೀನ್ ಹೇಳಿದರು.

    ನಗರದ ಡಯಟ್‌ನಲ್ಲಿ ಮಂಗಳವಾರ ಸೇವಾಪೂರ್ವ ಶಿಕ್ಷಣ ವಿಭಾಗದಲ್ಲಿ ಆಯೋಜಿಸಿದ್ದ ಡಿಎಲ್‌ಇಡಿ ಪ್ರಶಿಕ್ಷಣಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳ ಪರಿಶೀಲನಾ ಕಾರ‌್ಯದ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿದರು.

    ಉತ್ತಮ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿದೆ. ಪ್ರಶಿಕ್ಷಣಾರ್ಥಿಗಳು ಪೂರ್ವ ಸಿದ್ಧತೆಯಿಂದ ಬೋಧನಾ ಕಾರ‌್ಯದಲ್ಲಿ ತೊಡಗಿಸಿಕೊಳ್ಳಬೇಕು. ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸಲು, ಪಠ್ಯವನ್ನು ಅರ್ಥ ಮಾಡಿಸಲು ಆಧುನಿಕ ತಂತ್ರಜ್ಞಾನಗಳನ್ನೂ ಬಳಸ ಬೇಕಿದೆ ಎಂದರು.

    ಸಮನ್ವಯ ಸಮಿತಿ ಅಧ್ಯಕ್ಷ ಇ.ಹಾಲಮೂರ್ತಿ ಮಾತನಾಡಿ,ಪೂರ್ವಸಿದ್ಧತೆ,ಪರಿಶ್ರಮದಿಂದ ಉತ್ತಮ ಫಲಿತಾಂಶ ಪಡೆಯಲು ಸಾಧ್ಯ.
    ಪ್ರಶಿಕ್ಷಣಾರ್ಥಿಗಳು ಶ್ರದ್ಧೆಯಿಂದ ಅಧ್ಯಯನ ಮಾಡುವುದರಿಂದ ಟಿಇಟಿ ಮತ್ತು ಸಿಇಟಿ ಇತರೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಪಡೆಯಬಹುದು. ಶಿಕ್ಷಕರು ಬದ್ಧತೆಯಿಂದ ಕೆಲಸ ನಿರ್ವಹಿಸುವ ಮೂಲಕ ವೃತ್ತಿಯಲ್ಲಿ ಪ್ರಗತಿ ಪಡೆಯ ಬೇಕೆಂದರು.

    ಸಮಿತಿ ಸದಸ್ಯರಾದ ಆರ್.ನಾಗರಾಜು,ಎನ್. ಮಂಜುನಾಥ್,ಎನ್.ರಾಮಚಂದ್ರಪ್ಪ,ಲತಾ,ಹಿರಿಯ ಉಪನ್ಯಾಸಕರಾದ ಸಿ.ಎಸ್. ವೆ ಂಕಟೇಶಪ್ಪ,ಎಸ್.ಸಿ.ಪ್ರಸಾದ್,ಮಹಮದ್ ಅಯೂಬ್ ಸೊರಬ್,ಉಪನ್ಯಾಸಕರಾದ ಜಿ.ಎಸ್.ನಾಗರಾಜು,ಎಸ್.ಬಸವರಾಜು,ಯು. ಸಿದ್ದೇಶಿ,ತಾಂತ್ರಿಕ ಸಹಾಯಕರಾದ ಆರ್.ಲಿಂಗರಾಜು, ಕೆ.ಆರ್.ಲೋಕೇಶ್ ಮತ್ತು ಪ್ರಶಿಕ್ಷಣಾರ್ಥಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts