More

    ಅನಗತ್ಯ ರಸ್ತೆಗಿಳಿದೀರಾ ಜೋಕೆ

    ಚಿತ್ರದುರ್ಗ: ಲಾಕ್‌ಡೌನ್ ಸಡಿಲತೆಗೊಂಡಿದ್ದರೂ ಕರೊನಾ ತಡೆಗೆ ಪೊಲೀಸ್ ಇಲಾಖೆ ಜನರ ಚಲನವಲನದ ಮೇಲೆ ಹದ್ದಿನ ಕಣ್ಣು ಇಟ್ಟಿದೆ. ಜತೆಗೆ ವೇಳೆ ಗುಡ್ಡಗಾಡು, ಕುರುಚಲ ಅರಣ್ಯ ಪ್ರದೇಶ, ಜಮೀನು, ನಿರ್ಜನ ಪ್ರದೇಶದಲ್ಲಿ ಜೂಜು ಆಡುವವರ ಸೆರೆಗೆ ಖಾಕಿ ಪಡೆ ವಿಶೇಷ ತಂಡ ರಚಿಸಿದೆ.

    ಈ ಹಿನ್ನೆಲೆಯಲ್ಲಿ ಮುರುಘ ರಾಜೇಂದ್ರ ಕ್ರೀಡಾಂಗಣದಲ್ಲಿ ಶುಕ್ರವಾರ ಬೆಳಗ್ಗೆ ಡ್ರೋನ್ ಕ್ಯಾಮರಾಕ್ಕೆ ಚಾಲನೆ ನೀಡುವ ಮೂಲಕ ಕಾನೂನು ಬಾಹಿರ ಚಟುವಟಿಕೆ ಸೆರೆ ಹಾಗೂ ಲಾಕ್‌ಡೌನ್ ಉಲ್ಲಂಘಿಸಿ ಅನಗತ್ಯವಾಗಿ ರಸ್ತೆಗೆ ಇಳಿಯುವರ ವಿರುದ್ಧ ಕ್ರಮಕೈಗೊಳ್ಳಲು ಪೊಲೀಸ್ ಇಲಾಖೆ ಈ ಕ್ರಮ ಕೈಗೊಂಡಿದೆ.

    ಡ್ರೋನ್‌ಗೆ ಚಾಲನೆ ನೀಡಿ ಮಾತನಾಡಿದ ಎಸ್‌ಪಿ ಜಿ.ರಾಧಿಕಾ, ಲಾಕ್‌ಡೌನ್ ಜಾರಿಯಲ್ಲಿದ್ದರೂ ಹಲವರ ಅನಗತ್ಯ ಓಡಾಟ, ಗುಂಪು ಸೇರುವುದು, ವಾಹನಗಳ ಸಂಚಾರ ಕಂಡುಬರುತ್ತಿದೆ. ಇವುಗಳಿಗೆ ಕಡಿವಾಣ ಹಾಕಲು ಡ್ರೋನ್ ಬಳಸಲು ನಿರ್ಧರಿಸಲಾಗಿದೆ ಎಂದರು.

    ಚಿತ್ರದುರ್ಗ ಸಹಿತ ಎಲ್ಲ ತಾಲೂಕು ಕೇಂದ್ರಗಳಲ್ಲಿ ಅಗತ್ಯತೆ ಆಧರಿಸಿ ಇದನ್ನು ಬಳಸಲಾಗುವುದು. ಸದ್ಯ ಡ್ರೋನ್ ಸೇವೆಯನ್ನು ಖಾಸಗಿಯವರಿಂದ ಪಡೆಯಲಾಗುತ್ತಿದ್ದು, ಇಲಾಖೆಗೂ ಒಂದು ಕ್ಯಾಮರಾವನ್ನು ಸರ್ಕಾರ ಮಂಜೂರು ಮಾಡಿದೆ ಎಂದು ತಿಳಿಸಿದರು.

    ಪ್ರಸ್ತುತ ಬಳಸುತ್ತಿರುವ ಕ್ಯಾಮರಾ ಹೈ ರೆಜ್ಯೂಲೇಶನ್‌ನಿಂದ ಕೂಡಿದ್ದು, ಐದು ಕಿ.ಮೀ. ವ್ಯಾಪ್ತಿ 150 ಮೀಟರ್ ಎತ್ತರದಲ್ಲಿ ಹಾರಾಟ ನಡೆಸಲಿದೆ. ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದಂತೆ ಹಾಗೂ ಅಗತ್ಯ ಬಂದೋಬಸ್ತ್ ವೇಳೆ ಇದರಲ್ಲಿ ಸೆರೆಯಾದ ಚಿತ್ರಗಳಿಂದ ಇಲಾಖೆಗೆ ತನಿಖೆ ನಡೆಸಲು ಹೆಚ್ಚಿನ ಸಹಕಾರ ದೊರೆಯಲಿದೆ ಎಂದರು.

    ಎಎಸ್ಪಿ ಎಂ.ಬಿ.ನಂದಗಾಂವಿ, ಡಿವೈಎಸ್ಪಿಗಳಾದ ತಿಪ್ಪೇಸ್ವಾಮಿ, ಪಾಂಡುರಂಗಪ್ಪ, ಪಿಐಗಳಾದ ಪ್ರಕಾಶ್, ನಹೀಂ ಅಹಮದ್ ಮತ್ತಿತರ ಅಧಿಕಾರಿಗಳಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts