More

    ಮರಳು ಗಣಿಗಾರಿಕೆ ಪ್ರಮಾಣ ಕಡಿತಕ್ಕೆ ಸಲಹೆ

    ಚಿತ್ರದುರ್ಗ: ಜಿಲ್ಲೆಯ ನದಿಪಾತ್ರಗಳಲ್ಲಿ ಮರಳು ಗಣಿಗಾರಿಕೆಯ ಪ್ರಮಾಣ ಕಡಿತಗೊಳಿಸುವಂತೆ ನಿವೃತ್ತ ಹಿರಿಯ ಭೂ ವಿಜ್ಞಾನಿ ಜೆ.ಪರುಶುರಾಮ ಡಿಸಿ ಆರ್.ವಿನೋತ್ ಪ್ರಿಯಾ ಅವರಿಗೆ ಪತ್ರ ಬರೆದಿದ್ದಾರೆ.

    ಹೊಸದುರ್ಗ, ಹಿರಿಯೂರು, ಚಳ್ಳಕೆರೆ ತಾಲೂಕುಗಳಲ್ಲಿ ಹರಿಯುವ ವೇದಾವತಿ ನದಿ ಪಾತ್ರದಲ್ಲಿ ಕಡಿಮೆ ಪ್ರಮಾಣದಲ್ಲಿ ಮರಳು ಗಣಿಕಾರಿಕೆಗೆ ಅವಕಾಶ ಮಾಡಿಕೊಟ್ಟರೆ ಮಾತ್ರ ಅಂತರ್ಜಲ ಉಳಿಯಲಿದೆ.

    ಕಟ್ಟಡ ನಿರ್ಮಾಣಕ್ಕೆಂದು ಅಗತ್ಯವಿರುವ ಸಾಮಾನ್ಯ ಮರಳು ತಾಂತ್ರಿಕವಾಗಿ ಪತ್ತೆ ಹಚ್ಚಿ ಪೂರೈಸಿದರೆ ಅಂತರ್ಜಲ ವೃದ್ಧಿ ಜತೆಗೆ ಜಿಲ್ಲೆಯ ಅಭಿವೃದ್ಧಿ ಕಾಮಗಾರಿ, ನಾಗರಿಕ ಕಟ್ಟಡ ನಿರ್ಮಾಣ ಕೆಲಸಗಳಿಗೆ ಅನುಕೂಲವಾಗುತ್ತದೆ ಎಂದಿದ್ದಾರೆ.

    1 ಮೀಟರ್‌ಗಿಂತ ಹೆಚ್ಚಿನ ಆಳದಲ್ಲಿ ಮರಳು ತೆಗೆದರೆ ಹರಿವ ನೀರು ಭೂಮಿಯಲ್ಲಿ ಇಂಗದೇ ಆವಿಯಾಗುವ ಅಥವಾ ವ್ಯರ್ಥವಾಗಿ ಹರಿದು ಹೋಗುವ ಅಪಾಯವಿದೆ. ತಾಂತ್ರಿಕತೆಯನ್ನಾಧರಿಸಿ ಜನರಿಗೆ ಮರಳು ಸರಬರಾಜು ಮಾಡಲು ಕ್ರಮ ಕೈಗೊಳ್ಳಬೇಕೆಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts