More

    ಜಿಪಂ ಅಧ್ಯಕ್ಷ ಸ್ಥಾನ ಚುನಾವಣೆಗೆ 22 ರ ಮುಹೂರ್ತ

    ಚಿತ್ರದುರ್ಗ: ಜಿ.ಎಂ.ವಿಶಾಲಾಕ್ಷಿ ನಟರಾಜ್ ರಾಜೀನಾಮೆಯಿಂದ ತೆರವಾಗಿದ್ದ ಜಿಪಂ ಅಧ್ಯಕ್ಷ ಸ್ಥಾನಕ್ಕೆ ಮೇ 22 ರಂದು 11 ಗಂಟೆಗೆ ಚುನಾವಣೆ ನಡೆಯಲಿದೆ. ಬೆಂಗಳೂರು ಪ್ರಾದೇಶಿಕ ಆಯುಕ್ತ ವಿ.ಪಿ.ಇಕ್ಕೇರಿ ಅಧ್ಯಕ್ಷತೆಯಲ್ಲಿ ಹೊಸ ಆಯ್ಕೆ ನಡೆಯಲಿದೆ.

    ಅನಾರೋಗ್ಯದ ಕಾರಣ ನೀಡಿ ವಿಶಾಲಾಕ್ಷಿ ಮಾ.2 ರಂದು ರಾಜೀನಾಮೆ ಸಲ್ಲಿಸಿದ್ದರು. ಪ್ರಸಕ್ತ ಅವಧಿಯ ಜಿಪಂ ಅಧ್ಯಕ್ಷರಾಗಿ 2016 ಮೇ 4 ರಂದು ಮೊದಲಿಗೆ ಸೌಭಾಗ್ಯ ಬಸವರಾಜನ್ ಆಯ್ಕೆ ಆಗಿದ್ದರು. ಕಾಂಗ್ರೆಸ್ ಪಕ್ಷದ ಧುರೀಣರ ಸಭೆ ನಿರ್ಣಯದಂತೆ ಆಕಾಂಕ್ಷಿಗಳಿಗೆ ಸರತಿ ಮೇಲೆ ಅಧಿಕಾರ ಹಂಚಿಕೆ ಆಗಬೇಕಿತ್ತು. ನಾನಾ ಕಾರಣಗಳಿಂದ ಸೌಭಾಗ್ಯ ರಾಜೀನಾಮೆ ಕೊಡದೇ ಸತಾಯಿಸಿದ್ದರಿಂದ ಉಳಿದವರಿಗೆ ಅಧಿಕಾರ ಸಿಕ್ಕಿರಲಿಲ್ಲ. ಕೊನೆಗೂ ಸ್ವಪಕ್ಷೀಯರೇ 2019 ರ ಫೆ.7ರಂದು ಅವಿಶ್ವಾಸ ಮಂಡಿಸುವ ಮೂಲಕ ಅವರನ್ನು ಅಧಿಕಾರದಿಂದ ಕೆಳಗೆ ಇಳಿಸಿದ್ದರು.

    2019 ಮಾರ್ಚ್ 23 ರಂದು ಹೊಸದುರ್ಗ ತಾಲೂಕು ಬಾಗೂರು ಕ್ಷೇತ್ರದ ಸದಸ್ಯೆ ಜಿ.ಎಂ.ವಿಶಾಲಾಕ್ಷಿ ನಟರಾಜ್ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಆಗಿದ್ದರು. ಒಪ್ಪಂದದಂತೆ ಅವರು ರಾಜೀನಾಮೆ ಕೊಟ್ಟಿದ್ದು, 2021ರ ಮೇ 3 ರವರೆಗೆ ಅಧ್ಯಕ್ಷರ ಅಧಿಕಾರ ಅವಧಿ ಬಾಕಿ ಉಳಿದಂತಾಗಿದೆ. ಈ ಅವಧಿಯನ್ನು ಕಾಂಗ್ರೆಸ್ ಪಕ್ಷ ಈಗ ಒಬ್ಬರಿಗೆ ಬಿಟ್ಟುಕೊಡುವುದೊ ಅಥವಾ ಇಬ್ಬರಿಗೂ ಅವಕಾಶ ಮಾಡಿ ಕೊಡುವುದೋ ಎಂಬುದನ್ನು ನೋಡಬೇಕಿದೆ.

    ಯಾರಿಗೆ ಅವಕಾಶ?: ಒಡಂಬಡಿಕೆಯಂತೆ ಹಿರಿಯೂರು ತಾಲೂಕು ಮಸ್ಕಲ್ ಕ್ಷೇತ್ರದ ಶಶಿಕಲಾ ಸುರೇಶ್‌ಬಾಬು ಹಾಗೂ ಚಿತ್ರದುರ್ಗ ತಾಲೂಕು ತುರುವನೂರು ಕ್ಷೇತ್ರದ ಕೌಶಲ್ಯಾ ಅವರಿಗೆ ಅಧ್ಯಕ್ಷರಾಗುವ ಅವಕಾಶ ಸಿಗಬಹುದು ಎಂದು ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಫಾತ್ಯರಾಜನ್ ಅಭಿಪ್ರಾಯಪಟ್ಟಿದ್ದಾರೆ.

    ವರಿಷ್ಠರ ಈ ಹಿಂದಿನ ತೀರ್ಮಾನದಂತೆ ಹೊಸ ಅಧ್ಯಕ್ಷರ ಆಯ್ಕೆ ಸುಸೂತ್ರವಾಗಿ ನಡೆಯುತ್ತದೆ ಎಂಬ ನಂಬಿಕೆ ಇದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‌ಪೀರ್ ತಿಳಿಸಿದ್ದಾರೆ. ಒಡಂಬಡಿಕೆಯಂತೆ ನನಗೆ ಅವಕಾಶ ಸಿಗಲಿದೆ ಎಂದು ಸದಸ್ಯೆ ಶಶಿಕಲಾ ಸುರೇಶ್‌ಬಾಬು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts