More

    ಚಿತ್ರದುರ್ಗದಲ್ಲಿ 2609 ಹೆ.ಮಾವು

    ಚಿತ್ರದುರ್ಗ: ಬಾದಾಮಿ, ರತ್ನಗಿರಿ, ರಸಪುರಿ, ತೋತಾಪುರಿ, ಮಲಗೋವಾ, ನೀಲಂ, ಬೆನ್‌ಶ್ಯಾನ್,ಮಲ್ಲಿಕಾ ಸಹಿತ ನಾನಾ ತಳಿಗಳ ಸಹಿತ ಜಿಲ್ಲೆಯಲ್ಲಿ 2609 ಹೆ.ವಿಸ್ತೀರ್ಣದಲ್ಲಿ ಮಾವಿನ ಬೆಳೆ ಇದೆ. ಇದರ ಸಂರಕ್ಷಣೆಗೆ ತೋಟಗಾರಿಕೆ ಇಲಾಖೆ ರೈತರಿಗೆ ಹಲವು ಸಲಹೆಗಳನ್ನು ಕೊಟ್ಟಿದೆ.

    ಮೊಗ್ಗು, ಹೂವು, ಅರಳಿದ ಹೂವಿನ ತೆನೆ, ಕಚ್ಚಿದ ಎಳೆಯ ಕಾಯಿಗಳಿಗೆ ಜಿಗಿಹುಳು, ನೊಣ, ಓಟೆ ಕೊರಕ ಹುಳು, ಎಲೆಗಂಟು ಮಸಕ, ರೆಂಬೆ ಕುಡಿ ಕೊರಕ, ಹಿಟ್ಟು ತಿಗಣೆ, ಎಲೆ ತಿನ್ನುವ ಹುಳು, ಕೆಂಪು ಇರುವೆ, ಮೈಟ್‌ನುಸಿ, ಕಾಂಡಕೊರಕ ಹುಳು ಕೀಟಗಳು ಹಾನಿ ಉಂಟು ಮಾಡುತ್ತವೆ. ಆದ್ದರಿಂದ ಹೂವು ಬಿಡುವ ಮೊದಲು ಹಾಗೂ ಕಾಯಿ ಕಟ್ಟಿದ ಕೂಡಲೆ ಜಿಗಿಹುಳು ನಿಯಂತ್ರಣಕ್ಕಾಗಿ ಗಿಡಗಳಿಗೆ ಸೂಕ್ತ ಕೀಟನಾಶಕ ಸಿಂಪಡಿಸಬೇಕು.

    ಹೂವು ಬಿಟ್ಟಾಗ ಮತ್ತು ಪರಾಗಸ್ಪರ್ಶದ ಸಮಯದಲ್ಲಿ ಗಂಧಕ ಸಿಂಪಡಿಸಬಾರದು. ಕಾಯಿ ಗೋಲಿ ಗಾತ್ರದಲ್ಲಿರುವಂಥ ಸಮಯದಲ್ಲಿ ತಪ್ಪದೇ ಲಘು ಪೋಷಕಾಂಶ ಮಿಶ್ರಣ ಕೊಡಬೇಕು. ನೊಣದಿಂದ ರಕ್ಷಿಸಲು ಮೋಹಕ ಬಲೆಗಳನ್ನು ಅಳವಡಿಸಿಕೊಳ್ಳಬೇಕು ಎಂದು ತೋಟಗಾರಿಕೆ ತಿಳಿಸಿದೆ.

    ಬೆಳೆಗಾರರನ್ನು ಪ್ರೋತ್ಸಾಹಿಸಲು ಆನ್‌ಲೈನ್ ನೇರ ಮಾರಾಟಕ್ಕೂ ಇಲಾಖೆ ಅವಕಾಶ ಮಾಡಿಕೊಟ್ಟಿದ್ದು, ಹೆಚ್ಚಿನ ಮಾಹಿತಿಗೆ ಸಮೀಪದ ಕಚೇರಿಯನ್ನು ಸಂಪರ್ಕಿಸುವಂತೆ ಇಲಾಖೆ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts