More

    ನಗರ ಪ್ರದೇಶದಲ್ಲಿ ಡೆಂೆ ಹೆಚ್ಚಳ

    ಚಿತ್ರದುರ್ಗ: ನಗರ ಪ್ರದೇಶಗಳಲ್ಲಿ ಡೆಂೇ ಪ್ರಕರಣಗಳು ಹೆಚ್ಚಿದ್ದು,ಈವರೆಗೆ 28 ಪ್ರಕರಣಗಳು ವರದಿಯಾಗಿವೆ ಎಂದು ಡಿಎಚ್‌ಒ ಡಾ. ಸಿ.ಎಲ್.ಪಾಲಾಕ್ಷ ಆತಂಕ ವ್ಯಕ್ತಪಡಿಸಿದರು.

    ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಹಮ್ಮಿಕೊಂಡಿರುವ ಎರಡು ದಿನಗಳ ಕಾಲ ಲಾರ್ವಾ ಸಮೀಕ್ಷೆಗೆ ಸೋಮವಾರ ಜೆಜೆ ಹಟ್ಟಿಯಲ್ಲಿ ಚಾಲನೆ ನೀಡಿ ಮಾತನಾಡಿದರು.

    ನಗರದ ಎಲ್ಲ ಲಾರ್ವಾ ಹಾಗೂ ಜ್ವರ ಸಮೀಕ್ಷೆ, ಸ್ವಚ್ಛತೆ ಶಿಕ್ಷಣ ಹಾಗೂ ಗುಂಪು,ಸಮುದಾಯ ಸಭೆಗಳನ್ನು ನಡೆಸಿ ಜಾಗೃತಿ ಮೂಡಿಸಲಾಗುವುದು ಎಂದರು.

    ನಗರದಲ್ಲಿರುವ ಅಂದಾಜು 37038 ಮನೆಗಳಲ್ಲಿ ನಡೆಸಲು 300 ಆಶಾಕಾರ್ತಕರ್ತೆಯರು ಇರುವ 150 ತಂಡಗಳನ್ನು ರಚಿಸಲಾಗಿದೆ. ಮೇಲ್ವಿಚಾರಣೆಗಾಗಿ 21 ಮೇಲ್ವಿಚಾರಕರ ತಂಡ ಕಾರ್ಯನಿರ್ವಹಿಸಲಿದೆ. ಜಾಗೃತಿ ಮೂಡಿಸಲು ನಾಗರಿಕರಿಗೊಂದು ಸವಾಲ್ ಕಾರ್ಯಕ್ರಮ ನಡೆಸಲಾಗುತ್ತದೆ ಎಂದು ತಿಳಿಸಿದರು.

    ತಾಲೂಕು ವೈದ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಮಾತನಾಡಿ, ಮನೆಗಳಲ್ಲಿರುವ ನೀರಿನ ಸಂಗ್ರಹ ಪರಿಕರಗಳನ್ನು ಸ್ವಚ್ಛವಾಗಿ ತೊಳೆದು ನೀರು ಸಂಗ್ರಹಿಸ ಬೇಕು. ಘನತ್ಯಾಜ್ಯ ವಸ್ತುಗಳನ್ನು ಸೂಕ್ತ ವಿಲೇವಾರಿ ಮಾಡಬೇಕು ಎಂದು ಮನವಿ ಮಾಡಿದರು.

    ಡಾ.ಬಿ.ಜಯಮ್ಮ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಚಿದಾನಂದಪ್ಪ, ತಾಲೂಕು ಅಧಿಕಾರಿ ಎನ್.ಎಸ್.ಮಂಜುನಾಥ, ಬಿ.ಮೂಗಪ್ಪ, ಆನಂದಪ್ಪ, ಜಾನಕಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts