More

    ನಿರುದ್ಯೋಗಕ್ಕೆ ಕೌಶಲ ತರಬೇತಿಯೇ ಉತ್ತರ

    ಚಿತ್ರದುರ್ಗ: ಯುವ ಸಮುದಾಯದ ಕೌಶಲ ವೃದ್ಧಿಸಿ ಉದ್ಯಮಶೀಲತೆಗೆ ಅವಕಾಶ ಮಾಡಿಕೊಟ್ಟರೆ ನಿರುದ್ಯೋಗ ಸಮಸ್ಯೆ ನಿವಾರಣೆ ಸಾಧ್ಯ ಎಂದು ದಾವಣಗೆರೆ ಸಿಡಾಕ್ ಸಂಸ್ಥೆ ಜಂಟಿ ನಿರ್ದೇಶಕ ಆರ್.ಪಿ.ಪಾಟೀಲ್ ಅಭಿಪ್ರಾಯಪಟ್ಟರು.

    ನಗರದ ಬಾಲಭವನದಲ್ಲಿ ಸೋಮವಾರ ಆಯೋಜಿಸಿದ್ದ ಉದ್ಯಮಶೀಲತಾಭಿವೃದ್ಧಿ ಕಾರ್ಯಕ್ರಮ ಉದ್ಘಾಟಿಸಿ, ಇತ್ತೀಚಿನ ವರ್ಷಗಳಲ್ಲಿ ಅಕ್ಷರಸ್ಥರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ, ನಿರುದ್ಯೋಗ ಸಮಸ್ಯೆ ಮಾತ್ರ ನಿವಾರಣೆ ಆಗುತ್ತಿಲ್ಲ. ಇದಕ್ಕೆ ಕೌಶಲದ ಕೊರತೆ ಮುಖ್ಯ ಕಾರಣವಾಗಿದೆ ಎಂದರು.

    ಕಲಿತ 100 ಜನರಲ್ಲಿ ಕೇವಲ ಇಬ್ಬರಿಗೆ ಸರ್ಕಾರಿ ಕೆಲಸ ಸಿಗುವ ಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಆರ್ಥಿಕ ಸವಾಲು ಎದುರಿಸಲು ಉದ್ಯಮಶೀಲತೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.

    ಉದ್ದಿಮೆದಾರರು ಸೃಜನಶೀಲತೆ ಜತೆಗೆ ಉತ್ತಮ ಸಂವಹನ, ಕೌಶಲ ಹೊಂದಿರಬೇಕು. ತರಬೇತಿಯಿಂದ ಉನ್ನತ ಉದ್ಯಮ ಸೃಷ್ಟಿಸ ಬಹುದು. ಉದ್ಯಮಶೀಲತೆಯ ಉದ್ದೀಪನಕ್ಕೆ ತರಬೇತಿ ಅತ್ಯಗತ್ಯ ಎಂದರು.

    ಲೀಡ್ ಬ್ಯಾಂಕ್ ಸೀನಿಯರ್ ಮ್ಯಾನೇಜರ್ ಶ್ರೀನಿವಾಸ್ ಮಾತನಾಡಿ, ಆರು ದಿನದ ಕಾರ್ಯಾಗಾರವನ್ನು ಚೆನ್ನಾಗಿ ಸದ್ಬಳಕೆ ಮಾಡಿಕೊಳ್ಳಬೇಕು. ಈ ಮೂಲಕ ನಿರುದ್ಯೋಗ ಸಮಸ್ಯೆ ನಿವಾರಿಸಬೇಕು ಎಂದು ತಿಳಿಸಿದರು.

    ಯುನಿಸೆಫ್ ನಿವೃತ್ತ ನಿಯೋಜನಾ ಅಧಿಕಾರಿ ಬಿ.ಮುಕುಂದಪ್ಪ, ಸಿಡಾಕ್-ದಿಶಾ ಕೇಂದ್ರ ವ್ಯವಸ್ಥಾಪಕಿ ಚಾಂದನಿ, ಸಂಸ್ಥೆ ಸಮಾಲೋಚಕಿ ವೇಮುಲ ಸ್ವಾತಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts