More

    ಸರ್ವಸ್ವವೇ ಆಗಿದ್ದ ಮಗಳು ಮೇಣದ ಪ್ರತಿಮೆಯಾಗಿ ಜೀವಂತ!

    ಚಿತ್ರದುರ್ಗ: ಸಾಮಾನ್ಯವಾಗಿ ಮಕ್ಕಳು ತಮ್ಮ ಹೆತ್ತವರ ನೆನಪಿಗಾಗಿ ಗುಡಿ ಕಟ್ಟುವುದನ್ನು, ಪ್ರತಿಮೆ ನಿರ್ಮಿಸುವುದನ್ನು ನಾವು ನೋಡಿರ್ತೇವೆ. ಆದರೆ ಇಲೊಬ್ಬ ತಾಯಿ ತನ್ನ ಮಗಳಿಗೋಸ್ಕರ ಮೇಣದ ಪ್ರತಿಮೆ ನಿರ್ಮಿಸುವ ಮೂಲಕ ಮಾತೃ ವಾತ್ಸಲ್ಯ ಸದಾ ನೆನಪಿನಲ್ಲಿ ಉಳಿಯುವಂತೆ ಮಾಡಿದ್ದಾರೆ.
    ಹೌದು. ಮೂಲತಃ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಗ್ಯಾರಹಳ್ಳಿಯ ಕಮಲಮ್ಮ ಮುಖ್ಯ ಶಿಕ್ಷಕಿಯಾಗಿ ನಿವೃತ್ತಿ ಪಡೆದಿದ್ದು, ತಮ್ಮ ಮಗಳ ಆಸೆಯನ್ನು ಈಡೇರಿಸುವ ಸಲುವಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದಾರೆ.

    ಸರ್ವಸ್ವವೇ ಆಗಿದ್ದ ಮಗಳು ಮೇಣದ ಪ್ರತಿಮೆಯಾಗಿ ಜೀವಂತ!

    ಮಗಳು 12 ದಿವಸದ ಮಗುವಾಗಿದ್ದ ಪತಿಯನ್ನು ಕಳೆದುಕೊಂಡ ಕಮಲಮ್ಮ ಅವರಿಗೆ ಮಗಳೇ ಜೀವ. ಆದರೆ ದುರದೃಷ್ಟವಶಾತ್ 26 ವರ್ಷದಲ್ಲಿ ಮಗಳು ಕ್ಯಾನ್ಸರ್​ ಖಾಯಿಲೆಗೆ ತುತ್ತಾಗುತ್ತಾಳೆ. 4 ವರ್ಷಗಳ ಕಾಲ ಕ್ಯಾನ್ಸರ್‌ನಿಂದ ಬಳಲಿ, 2022ರ ಡಿಸೆಂಬರ್‌ನಲ್ಲಿ ಕಾವ್ಯಾ ನಿಧನರಾದರು. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಕಾವ್ಯಾ ಯೂಟ್ಯೂಬ್‌ನಲ್ಲಿ ಪಿಒಪಿಯಿಂದ ಮಾಡಿದ ಮೂರ್ತಿ ತೋರಿಸಿ ಸಮಾಧಿಯ ಪಕ್ಕದಲ್ಲಿ ಉದ್ಯಾನ ನಿರ್ಮಿಸಬೇಕೆಂಬ ಇಂಗಿತವನ್ನು ವ್ಯಕ್ತಪಡಿಸಿದ್ದಾಳೆ.

    ಸರ್ವಸ್ವವೇ ಆಗಿದ್ದ ಮಗಳು ಮೇಣದ ಪ್ರತಿಮೆಯಾಗಿ ಜೀವಂತ!

    ಮಗಳ ಆಸೆಯಂತೆ ಬೆಂಗಳೂರಿನ ಶಿಲ್ಪಿ ವಿಶ್ವನಾಥ್ ಅವರಿಂದ 3.30 ಲಕ್ಷ ವೆಚ್ಚದಲ್ಲಿ ಸಿಲಿಕಾನ್ ಪ್ರತಿಮೆ ನಿರ್ಮಿಸಿ ಸರಸ್ವತಿನಗರದ ತಮ್ಮ ನಿವಾಸದಲ್ಲಿ ಇಟ್ಟಿದ್ದಾರೆ. ಮತ್ತೊಂದೆಡೆ ಸಮಾಧಿ ನಿರ್ಮಿಸಿ ಸುತ್ತಲು ಉದ್ಯಾನ ನಿರ್ಮಿಸಿದ್ದಾರೆ. ಅಂದಿನಿಂದ ಇಂದಿನವರೆಗೂ ಸಾಮಾಜಿಕ ಸೇವೆಯ ಮೂಲಕ ಮಗಳ ಆಸೆಯನ್ನು ಈಡೇರಿಸಲು ಕಮಲ್ಲಮ್ಮ ಶ್ರಮಿಸುತ್ತಿದ್ದಾರೆ.

    ಹೆಚ್ಚಿದ ಹಿಮ, ಮಳೆಯ ಕೊರತೆಯಿಂದ ಡಿಸೆಂಬರ್​​​​ ತಿಂಗಳಲ್ಲೇ ಕನಿಷ್ಠ ತಾಪಮಾನ ದಾಖಲು: ಐಎಂಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts