More

    ನಕಲಿ ಗಾಂಧಿಗಳ ಹೆಸರಿಟ್ಟರೆ ತಕರಾರು ಇರದು

    ಚಿತ್ರದುರ್ಗ: ಬೆಂಗಳೂರಿನ ಯಲಹಂಕ ಸೇತುವೆಗೆ ಸ್ವಾತಂತ್ರೃಯೋಧ ವೀರ ಸಾರ್ವಕರ್ ಹೆಸರನ್ನು ಇಡುವುದಕ್ಕೆ ವಿರೋಧ ವ್ಯಕ್ತಪಡಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರ ನಿಲುವಿಗೆ ಕಂದಾಯ ಸಚಿವ ಆರ್.ಅಶೋಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಎಲ್ಲ ಯೋಜನೆಗಳಿಗೂ ನಕಲಿ ಗಾಂಧಿಗಳ ಹೆಸರು ಇಡಬೇಕೆಂಬ ಮನೋಸ್ಥಿತಿಯಿಂದ ಕಾಂಗ್ರೆಸ್ಸಿಗರು ಮೊದಲು ಹೊರ ಬರಲಿ ಎಂದು ಹೇಳಿದರು.

    ಇಂದಿರಾಗಾಂಧಿ, ರಾಜೀವ್‌ಗಾಂಧಿ, ಸೋನಿಯಾಗಾಂಧಿ, ರಾಹುಲ್‌ಗಾಂಧಿ ಹೆಸರಿಟ್ಟರೆ ಕಾಂಗ್ರೆಸ್ಸಿಗರ ತಕರಾರು ಇರದು. ಅವರದ್ದೆಲ್ಲ ವಂಶಾಡಳಿತದ ಹೆಸರಿನ ರಾಜಕಾರಣ. ಅದು ಅವರ ಸಂಸ್ಕೃತಿ, ತೆರೆಮರೆಯ ಆಡಳಿತ ಸೂತ್ರಗಳನ್ನು ಅಳವಡಿಸಿಕೊಂಡಿರುವ ಅಭ್ಯಾಸ ಅವರಿಗೆ ಇದೆ. ನಮ್ಮದು ಹಾಗಲ್ಲ, ಅಂದು ಅಟಲ್ ಬಿಹಾರಿ ವಾಜಪೇಯಿ ಇದ್ದರು. ಈಗ ನರೇಂದ್ರ ಮೋದಿ ಇದ್ದಾರೆ, ಮುಂದೆ ಯಾರು ಆಡಳಿತ ಚುಕ್ಕಾಣಿ ಹಿಡಿಯುತ್ತಾರೆಯೊ ಗೊತ್ತಿಲ್ಲ ಎಂದರು.

    ಎಲ್ಲ ಜಿಲ್ಲೆಗಳ ಪ್ರವಾಸ ಬಳಿಕ ಬಗರ್ ಹುಕುಂ ಸಾಗುವಳಿ ದಾರರಿಗೆ ಹೊಸದಾಗಿ ಅರ್ಜಿ ಸಲ್ಲಿಸುವ ದಿನಾಂಕವನ್ನು ನಿಗದಿ ಪಡಿಸಲಾಗುವುದು. ಗ್ರಾಪಂ ಚುನಾವಣೆಗೆ ಸಂಬಂಧಿಸಿದಂತೆ ಸಿಎಂ ನಿರ್ಧಾರ ಪ್ರಕಟಿಸಲಿದ್ದಾರೆ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts