More

    ತ್ಯಾಗಿಗಳನ್ನು ತಿರಸ್ಕರಿಸಲು ಮನಸ್ಸು ಹೇಗೆ ಬರುತ್ತೆ?

    ಚಿತ್ರದುರ್ಗ: ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣರಾದ ತ್ಯಾಗಿಗಳಿಗೆ ಸಂಪುಟದಲ್ಲಿ ಸ್ಥಾನ ಕಲ್ಪಿಸಲು ತಕ್ಷಣ ಬಿ.ಎಸ್.ಯಡಿಯೂರಪ್ಪ ಮುಂದಾಗಬೇಕು ಎಂದು ಮಾಜಿ ಸಚಿವ ಯು.ಟಿ.ಖಾದರ್ ಒತ್ತಾಯಿಸಿದರು.

    ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಮ್ಮಿಶ್ರ ಸರ್ಕಾರವನ್ನು ಬೀಳಿಸಿ, ಐದಾರು ತಿಂಗಳ ಬಳಿಕ ಮತ್ತೆ ಶಾಸಕರಾಗಿರುವ ಅವರನ್ನು ಸಚಿವರನ್ನಾಗಿ ಮಾಡದೇ ತಿರಸ್ಕರಿಸಲು ನಿಮಗೆ ಮನಸ್ಸು ಹೇಗೆ ಬಂದೀತೆಂದು ಬಿಜೆಪಿ ನಾಯಕರನ್ನು ಪ್ರಶ್ನಿಸಿದರು.

    ಎಲ್ಲರ ಒಮ್ಮತದೊಂದಿಗೆ ಕೆಪಿಸಿಸಿ ಅಧ್ಯಕ್ಷರ ಆಯ್ಕೆಯಾಗಲಿದ್ದು, ಕಾಂಗ್ರೆಸ್ ಡಿಕ್ಷನರಿಯಲ್ಲಿ ವಲಸಿಗರು, ಮೂಲವೆಂಬ ಪದ ಇಲ್ಲ ಎಂದರು.

    ಸ್ಪಷ್ಟಗೊಳಿಸಲಿ: ಎನ್‌ಆರ್‌ಸಿ ಜಾರಿಗೊಳಿಸಿರುವ ಆಸ್ಸಾಂನಲ್ಲೇ ಮೊದಲು ಸಿಎಎ ಅನುಷ್ಠಾನಗೊಳಿಸದಿರುವ ಕುರಿತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸ್ಪಷ್ಟಪಡಿಸಬೇಕು. ಸಿಎಎ ವಿರೋಧಿಸುವವರನ್ನು ದೇಶದ್ರೋಹಿಗಳೆಂದೆಲ್ಲ ಟೀಕಿಸುವ ಬಿಜೆಪಿ ವಿರುದ್ಧ ಹರಿಹಾಯ್ದ ಖಾದರ್, ಅಸ್ಸಾಂನಲ್ಲಿ ಮೊದಲು ಸಿಎಎ ಜಾರಿಗೊಳಿಸಲಿ ಎಂದು ಸವಾಲು ಹಾಕಿದರು.

    ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಜೀವ ಬೆದರಿಕೆ ಇದ್ದರೆ, ಭದ್ರತೆ ಕೊಟ್ಟು ತನಿಖೆ ಮಾಡುವುದು ಪೊಲೀಸರ ಕೆಲಸ. ಇವರು ಯಾಕೆ ಸಲ್ಲದ ಹೇಳಿಕೆ ಕೊಡುತ್ತಿದ್ದಾರೆಂದು ಬಿಜೆಪಿ ನಾಯಕರ ನಡೆಯನ್ನು ಖಂಡಿಸಿದರು.

    ಡಿಸಿಸಿ ಜಿಲ್ಲಾಧ್ಯಕ್ಷ ಎಂ.ಕೆ.ತಾಜ್‌ಪೀರ್, ಮಾಜಿ ಅಧ್ಯಕ್ಷ ಫಾತ್ಯಾರಾಜನ್, ಕಾರ್ಯಾಧ್ಯಕ್ಷ ಸಿ.ಶಿವುಯಾದವ್, ಎಂಎಲ್‌ಸಿ ಜಯಮ್ಮ ಬಾಲರಾಜ್, ಕುಡಾ ಮಾಜಿ ಅಧ್ಯಕ್ಷರಾದ ಬಿ.ಟಿ.ಜಗದೀಶ್, ಆರ್.ಕೆ.ಸರ್ದಾರ್ ಮತ್ತಿತರ ಪ್ರಮುಖರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts