More

    ಹೋರಾಟ ಮುಂದುವರಿಯಲಿ

    ಚಿತ್ರದುರ್ಗ: ಬಿಜೆಪಿ ಜಾತಿ, ಧರ್ಮಗಳ ನಡುವೆ ಒಡಕು ಮೂಡಿಸಲು ಮುಂದಾಗಿದೆ ಎಂದು ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಆಪಾದಿಸಿದರು.

    ಸಿಎಎ ವಿರುದ್ಧ ಜಿಲ್ಲಾ ಮುಸ್ಲಿಂ ಅಡ್ವೊಕೇಟ್ಸ್ ವೆಲ್‌ಫೇರ್ ಟ್ರಸ್ಟ್ ಜಿಲ್ಲಾಧಿಕಾರಿ ಕಚೇರಿ ಬಳಿ ಆರು ದಿನಗಳಿಂದ ನಡೆಸುತ್ತಿರುವ ಧರಣಿಯಲ್ಲಿ ಶನಿವಾರ ಪಾಲ್ಗೊಂಡು ಮಾತನಾಡಿದರು.

    ಸಿಎಎ, ಎನ್‌ಆರ್‌ಸಿ ಹಾಗೂ ಎನ್‌ಪಿಆರ್ ಜಾರಿಗೊಳಿಸುವ ಮೂಲಕ ಕೇಂದ್ರ ಸರ್ಕಾರ ದೇಶದಲ್ಲಿ ಶಾಂತಿಯನ್ನು ಕದಡುತ್ತಿದೆ ಎಂದು ದೂರಿದರು.

    ಸಿಎಎ ಒಪ್ಪಿದರೆ ದೇಶದ ಜನರು ತೊಂದರೆ ಅನುಭವಿಸಬೇಕಾಗುತ್ತದೆ. ವಕೀಲರು ಇದರ ವಿರುದ್ಧ ಹೋರಾಟ ನಡೆಸುತ್ತಿರುವುದು ಸ್ವಾಗತಾರ್ಹ ಎಂದರು.

    ಅಹಿಂದ ಬಳಗದ ಅಧ್ಯಕ್ಷ ಮುರುಘ ರಾಜೇಂದ್ರ ಒಡೆಯರ್, ಮುಖಂಡರಾದ ಡಾ.ಜೆ.ಜೆ.ಹಟ್ಟಿ ತಿಪ್ಪೇಸ್ವಾಮಿ, ಸಿ.ಶಿವುಯಾದವ್, ಟ್ರಸ್ಟ್ ಅಧ್ಯಕ್ಷ ಎಚ್.ನೇಮತ್ ವುಲ್ಲಾ, ವಕೀಲರಾದ ಬಿ.ಕೆ.ರಹಮತ್‌ವುಲ್ಲಾ, ಮಹಮದ್ ಸಾಧಿಕ್ ವುಲ್ಲಾ, ಜುಲ್ಫಿಕರ್, ನೂರುಲ್ಲಾ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‌ಪೀರ್, ಟಿಪ್ಪು ಖಾಸಿಂ ಆಲಿ ಮತ್ತಿತರ ಪ್ರಮುಖರು, ವಕೀಲರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts