More

    ನಂದಿದುರ್ಗ ಮೇಕೆ ತಳಿಗೆ ಬಹುಮಾನ

    ಚಿತ್ರದುರ್ಗ: ಬೀದರ್‌ನಲ್ಲಿ ಜರುಗಿದ್ದ ರಾಜ್ಯಮಟ್ಟದ ಪಶುಮೇಳ ಜಾನುವಾರು ಪ್ರದರ್ಶನದಲ್ಲಿ, ಇತ್ತೀಚೆಗೇ ನೂತನ ತಳಿಯ ಸ್ಥಾನಮಾನ ಪಡೆದಿದ್ದ ಚಿತ್ರದುರ್ಗ ಜಿಲ್ಲೆಯ ನಂದಿದುರ್ಗ ಮೇಕೆ ತಳಿಗೆ ದ್ವಿತೀಯ ಬಹುಮಾನ ಲಭಿಸಿದೆ.

    ಜಾನುವಾರು ಪ್ರದರ್ಶನ ಸ್ಪರ್ಧೆಯಲ್ಲಿ ಜಿಲ್ಲೆಯಿಂದ ನಂದಿದುರ್ಗ ಮೇಕೆ ತಳಿಯನ್ನು ಪ್ರದರ್ಶಿಸಲಾಗಿತ್ತು. ಮೇಕೆ ಮಾಲೀಕ ಗೊಲ್ಲನಕಟ್ಟೆ ತಿಮ್ಮಣ್ಣ ಸಿದ್ದಪ್ಪಗೆ ಮೇಳದಲ್ಲಿ ಪ್ರಶಸ್ತಿ ಪತ್ರ, ಸ್ಮರಣಿಕೆ ವಿತರಿಸಲಾಯಿತು.

    ಚಿತ್ರದುರ್ಗ ಜಿಲ್ಲೆಯ ಮೂಲವಾಗಿರುವ ನಂದಿದುರ್ಗ ಮೇಕೆ ತಳಿ ಬಿಳಿ ಬಣ್ಣದಿಂದ ಕೂಡಿದ್ದು, ಸರಾಸರಿ ದೇಹದ ತೂಕ ಗಂಡು 26 ರಿಂದ 56 ಕೆ.ಜಿ, ಹೆಣ್ಣು 24 ರಿಂದ 41 ಕೆ.ಜಿ. ಇದೆ. ಮೇಕೆ ಕೊಂಬುಗಳು ಹಿಮ್ಮುಖವಾಗಿದ್ದು, ಕಿವಿಗಳು ನೇತಾಡುತ್ತಿರುತ್ತವೆ. ಇದು ಮುಖ್ಯವಾಗಿ ಮಾಂಸದ ತಳಿಯಾಗಿದ್ದು, ಸಾಮಾನ್ಯವಾಗಿ ಅವಳಿ ಮರಿಗಳಿಗೆ ಜನ್ಮ ನೀಡುತ್ತವೆ.

    ಪಶುಮೇಳದಲ್ಲಿ ಭಾಗವಹಿಸಿದ್ದ ಹಿರಿಯೂರು ತಾಲೂಕು ಬೇತೂರಿನ ಪ್ರಗತಿ ಪರ ರೈತ ಚಂದ್ರಶೇಖರ್ ಅವರ, ಕುರಿ ಮತ್ತು ಮೇಕೆ ಸಾಕಣೆ ಯಶೋಗಾಥೆ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು.

    ಚಂದ್ರಶೇಖರ್ ಅವರ ಸಾಧನೆಗೆ ಮುಖ್ಯಮಂತ್ರಿಪ್ರಶಂಸೆ ವ್ಯಕ್ತಪಡಿಸಿ, ಮೇಳದಲ್ಲಿ ಇವರನ್ನು ಗೌರವಿಸಲಾಗಿದೆ. ಜಿಲ್ಲೆಯಿಂದ 50 ರೈತರು ಮೇಳದಲ್ಲಿ ಭಾಗವಹಿಸಿದ್ದರು ಎಂದು ಇಲಾಖೆ ಉಪ ನಿರ್ದೇಶಕ ಟಿ.ಕೃಷ್ಣಪ್ಪ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts