More

    ಮೌಢ್ಯ ನಿವಾರಣೆಯಲ್ಲಿ ಶರಣಬಸವ ಶ್ರೀಗಳ ಶ್ರಮ ಅಪಾರ

    ಚಿತ್ರದುರ್ಗ: ಶರಣಬಸವ ಶ್ರೀಗಳು ಸಮುದಾಯವನ್ನು ಮೌಢ್ಯದಿಂದ ವೈಚಾರಿಕತೆಯ ಪಥಕ್ಕೆ ತಂದವರು. ಮುಗ್ಧರನ್ನು ಪ್ರಬುದ್ಧರನ್ನಾಗಿಸಿದವರೆಂದು ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.

    ಶ್ರೀಮಠದಿಂದ ಭಾನುವಾರ ಆಯೋಜಿಸಿದ್ದ ಲಿಂಗೈಕ್ಯ ಶ್ರೀ ಶರಣಬಸವ ಸ್ವಾಮೀಜಿ 12 ನೇ ಸ್ಮರಣೋತ್ಸವ ವೆಬಿನಾರ್ ವಿಚಾರ ಸಂಕಿರಣದಲ್ಲಿ ಮಾತನಾಡಿ, ಲಿಂಗೈಕ್ಯ ಶ್ರೀಗಳು ಕಂದಾಚಾರ ಪರಂಪರೆಯಿಂದ ಶರಣ ಪರಂಪರೆಯತ್ತ ಸೆಳೆದವರು. ಶ್ರಮಿಕ ವರ್ಗವನ್ನು ಅಕ್ಷರದ ವಾರಸುದಾರರನ್ನಾಗಿ ಮಾಡಿದರು ಎಂದರು.

    ತುಮಕೂರು ವಿಶ್ವವಿದ್ಯಾನಿಲಯದ ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ.ಪಿ.ಎಂ.ಗಂಗಾಧರಯ್ಯ ಮಾತನಾಡಿ, ಇಮ್ಮಡಿ ಶ್ರೀಗಳು ವಚನಕಾರ ಸಿದ್ಧರಾಮನ ಹೆಸರಿನಲ್ಲಿ ರಾಷ್ಟ್ರಮಟ್ಟದ ಪ್ರಶಸ್ತಿ ಸ್ಥಾಪಿಸುವ ಮೂಲಕ ಸಮಾಜದ ಶ್ರೇಯೋಭಿವೃದ್ಧಿಗೆ ಶ್ರಮಿಸಿದ ಸಾಧಕರನ್ನು ಗುರುತಿಸಬೇಕು. ರಾಜ್ಯದ ವಿಶ್ವವಿದ್ಯಾನಿಲಯಗಳಲ್ಲಿ ಸಿದ್ಧರಾಮನ ಅಧ್ಯಯನ ಪೀಠಕ್ಕೆ ಅನುಷ್ಠಾನ ನೀಡಬೇಕೆಂದರು.

    ಕೆಎಎಸ್ ನಿವೃತ್ತ ಅಧಿಕಾರಿ ಚಿಕ್ಕವೆಂಕಟಪ್ಪ ಮಾತನಾಡಿ, ಸದಾಶಿವ ಆಯೋಗ ಜಾರಿಗೆ ಬಂದರೆ ಸಮುದಾಯ ಸೊರಗುತ್ತದೆ. ಆಯೋಗದಿಂದ ಸಮುದಾಯಕ್ಕೆ ತುಂಬ ಅನ್ಯಾಯವಾಗುತ್ತದೆ. ವರದಿ ಜಾರಿಯಾದರೆ ಸಮುದಾಯ ಬೀದಿಗೆ ಬೀಳುವ ಪರಿಸ್ಥಿತಿ ಬರುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.

    ಗಜೇಂದ್ರಗಢದ ಸಾಹಿತಿ ಎಫ್.ಎಸ್.ಕರಿದುರಗನವರ್, ಆದಾಯ ತೆರಿಗೆ ನಿವೃತ್ತ ಅಧಿಕಾರಿ ಶಿವರುದ್ರಯ್ಯಸ್ವಾಮಿ, ಗೌನಹಳ್ಳಿ ಗೋವಿಂದಪ್ಪ, ಅಶೋಕ್ ಲಿಂಬಾವಳಿ, ಸಿದ್ಧರಾಮಪ್ಪ ಪಾತ್ರೋಟಿ, ಚಂದ್ರು ಪಾತ್ರೋಟಿ, ಹುಲ್ಲಪ್ಪ ಹಳ್ಳೂರು ಮತ್ತಿತರರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts