More

    ರೈಲ್ವೆ ಯೋಜನೆ ಭೂಸ್ವಾಧೀನ

    ಭರಮಸಾಗರ: ದಾವಣಗೆರೆ-ಚಿತ್ರದುರ್ಗ-ತುಮಕೂರು ನೇರ ರೈಲು ಮಾರ್ಗದ ಭೂಸ್ವಾಧೀನ ಪ್ರಕ್ರಿಯೆ ಕುರಿತು ಇಲ್ಲಿಯ ಬಸವೇಶ್ವರ ಸಮುದಾಯ ಭವನದಲ್ಲಿ ಗುರುವಾರ ರೈಲ್ವೆ, ಕಂದಾಯ ಇಲಾಖೆ ಹಾಗೂ ರೈತರ ಗ್ರಾಮಸಭೆ ನಡೆಸಲಾಯಿತು.

    ಗುಡ್ಡದರಂಗವ್ವನಹಳ್ಳಿ, ಹಂಪನೂರು, ಹೆಗ್ಗೆರೆ, ಜಟ್ಲಹಳ್ಳಿ, ಚಿಕ್ಕಬೆನ್ನೂರು, ಹಿರೇಬೆನ್ನೂರು, ಗೌರಮ್ಮನಹಳ್ಳಿ ಹಾಗೂ ಚೀಳಂಗಿ ಭಾಗದ ಕೃಷಿಕರ ಅಹವಾಲು ಸ್ವೀಕರಿಸಲಾಯಿತು.

    ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗವಾದರೆ ಬೆಂಗಳೂರಿನಿಂದ ದಾವಣಗೆರೆ ತೆರಳುವವರಿಗೆ ಅನುಕೂಲವಾಗಲಿದೆ. ಆದ್ದರಿಂದ ಈ ಮಾರ್ಗದ ನಿರ್ಮಾಣ ಅತ್ಯವಶ್ಯವಾಗಿದೆ. ಅಂತಿಮ ಸಮೀಕ್ಷೆ ಪೂರ್ಣಗೊಂಡು ಚಿತ್ರದುರ್ಗ ಜಿಲ್ಲೆಯಲ್ಲಿ ಆದಷ್ಟು ಬೇಗನೆ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಲು ಸಭೆ ಕರೆಯಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಸಂಗಪ್ಪ ಹೇಳಿದರು.

    ತಹಸೀಲ್ದಾರ್ ವೆಂಕಟೇಶಯ್ಯ, ರೈಲ್ವೆ ಇಂಜಿನಿಯರ್ ಶಶಿಧರ್, ಉಪವಿಭಾಗಾಧಿಕಾರಿ ಎ.ಪ್ರಸನ್ನ, ಉಪ ತಹಸೀಲ್ದಾರ್ ಪರಶುರಾಮಪ್ಪ, ರಾಜಸ್ವನಿರೀಕ್ಷಕ ವೆಂಕಟೇಶ್, ಪಿಡಿಒ ಶ್ರೀದೇವಿ, ಆರೋಗ್ಯ ಇಲಾಖೆ ಆಂಜನೇಯ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts