More

    ವಿದ್ಯುತ್ ಪೂರೈಕೆಗೆ ರೈತರ ಆಗ್ರಹ

    ಚಿತ್ರದುರ್ಗ: ತಾಲೂಕಿನ ಹಿರೇಗುಂಟನೂರು ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ವಿದ್ಯುತ್ ಸಮರ್ಪಕ ಪೂರೈಕೆಗೆ ಆಗ್ರಹಿಸಿ ರಾಜ್ಯ ರೈತ ಸಂಘದ ಪದಾಧಿಕಾರಿಗಳು, ಬೆಸ್ಕಾಂ ಅಧಿಕಾರಿಗಳಿಗೆ ಸೋಮವಾರ ಮನವಿ ಸಲ್ಲಿಸಿದರು.

    ಹಿರೇಗುಂಟನೂರು, ಕೊಡಗವಳ್ಳಿ, ಕ್ಯಾಸಾಪುರ, ಬಳ್ಳೇಕಟ್ಟೆ, ಬೀರಾವರ, ಸಾದರಹಳ್ಳಿ, ಲಕ್ಷ್ಮೀಸಾಗರ ಮತ್ತಿತರ ಗ್ರಾಮಗಳಲ್ಲಿ ನಿತ್ಯ 5 ಗಂಟೆ ಪೂರೈಸುತ್ತಿರುವ ವಿದ್ಯುತ್‌ನಿಂದ ಬೆಳೆ ರಕ್ಷಣೆ ಸಾಧ್ಯವಾಗುತ್ತಿಲ್ಲ ಎಂದು ಅಳಲು ತೋಡಿಕೊಂಡರು.

    ಆದ್ದರಿಂದ ನಿತ್ಯ ಹಗಲು 4 ಹಾಗೂ ರಾತ್ರಿ 3 ತಾಸು ವಿದ್ಯುತ್ ಪೂರೈಸಬೇಕು. ರೈತರ ಫೋನ್ ಕರೆ ಸ್ವೀಕರಿಸದ ಬೆಸ್ಕಾಂ ಅಧಿಕಾರಿ, ಸಿಬ್ಬಂದಿ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

    ಅಕ್ರಮ-ಸಕ್ರಮ ಯೋಜನೆಯಡಿ ಹಿರಿತನ ಆಧರಿಸಿ ಕೂಡಲೇ ಟಿಸಿ ಅಳವಡಿಸಬೇಕು. ಕೃಷಿಕರ ಬೇಡಿಕೆಗಳಿಗೆ ವಿದ್ಯುತ್ ವಿತರಣಾ ನಿಗಮ ಸ್ಪಂದಿಸಬೇಕು ಎಂದು ಒತ್ತಾಯಿಸಿ ಸಿಇ ಬಿ.ಗುರುಮೂರ್ತಿ ಅವರಿಗೆ ಮನವಿ ಸಲ್ಲಿಸಿದರು.

    ಮುಖಂಡರಾದ ಸುರೇಶ್‌ಬಾಬು, ಟಿ.ನುಲೇನೂರು ಶಂಕ್ರಪ್ಪ, ಸಿ.ಆರ್.ತಿಮ್ಮಣ್ಣ, ಟಿ.ಲಕ್ಷ್ಮೀನರಸಿಂಹಸ್ವಾಮಿ, ರವಿಕುಮಾರ್, ಈಶ್ವರಸ್ವಾಮಿ, ಬೇಡರಹಳ್ಳಿ ಬಸವರೆಡ್ಡಿ, ಡಿ.ನಾಗರಾಜ, ಬೆಸ್ಕಾಂ ಇಇ ಬಿ.ಎಸ್.ಜಗದೀಶ್, ಎಇಇ ಮೇಘರಾಜ್ ಮತ್ತಿತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts