More

    ತುರ್ತು ಅಲ್ಲದ ಚಿಕಿತ್ಸೆ ಮುಂದೂಡಲು ಡಿಸಿ ಮನವಿ

    ಚಿತ್ರದುರ್ಗ: ಎಟಿಎಂಗಳಲ್ಲೂ ಗ್ರಾಹಕರ ದಟ್ಟಣೆ ಹೆಚ್ಚಿದ್ದು, ಅಲ್ಲಿ ಗ್ರಾಹಕರು ಒಬ್ಬೊಬ್ಬರಾಗಿ ಹಣ ಪಡೆಯುವುದನ್ನು ಕಡ್ಡಾಯ ಮಾಡಬೇಕೆಂದು ಬ್ಯಾಂಕ್ ಅಧಿಕಾರಿಗಳಿಗೆ ತಿಳಿಸುವುದಾಗಿ ಡಿಸಿ ಆರ್.ವಿನೋತ್ ಪ್ರಿಯಾ ಹೇಳಿದ್ದಾರೆ.

    ಸರ್ಕಾರಿ ಸೇವೆಗಳಲ್ಲಿ ಈವರೆಗೆ ಯಾವುದೇ ವ್ಯತ್ಯಯ ಮಾಡಿಲ್ಲ. ಈ ಕುರಿತು ಚರ್ಚಿಸಲಾಗಿದೆ ಹೊರತು ಯಾವುದನ್ನು ಬಂದ್ ಮಾಡಿಲ್ಲ. ಆದರೆ, ಸರ್ಕಾರಿ ಅಥವಾ ಯಾವುದೇ ಖಾಸಗಿ ಆಸ್ಪತ್ರೆಗಳಲ್ಲಿ ತೀರಾ ತುರ್ತು ಎನ್ನುವಂಥ ಸನ್ನಿವೇಶ ಇಲ್ಲವಾದಲ್ಲಿ ಸರ್ಜರಿಗಳನ್ನು ಮುಂದೂಡುವಂತೆ ರೋಗಿಗಳಿಗೆ ಮನವಿ ಮಾಡಲಾಗಿದೆ ಎಂದಿದ್ದಾರೆ.

    ನಗರದ ಸ್ಟೇಡಿಯಂ ಬಂದ್: ಚಿತ್ರದುರ್ಗ ಒನಕೆ ಓಬವ್ವ ಜಿಲ್ಲಾ ಕ್ರೀಡಾಂಗಣವನ್ನು ಬಂದ್ ಮಾಡಲಾಗಿದೆ. ಈಗಾಗಲೇ ಕ್ರೀಡಾ ಹಾಸ್ಟೆಲ್‌ನಲ್ಲಿದ್ದ 32 ವಿದ್ಯಾರ್ಥಿಗಳನ್ನು ಅವ ರವರ ಮನೆಗೆ ಕಳಿಸಲಾಗಿದೆ. ಈಜುಕೊಳ, ಷಟಲ್ ಬ್ಯಾಡ್ಮಿಂಟನ್ ಕೋರ್ಟ್, ಒಳಾಂಗಣ ಕ್ರೀಡಾಂಗಣವನ್ನು ಮುಚ್ಚಲಾಗಿತ್ತು. ಗುರುವಾರದಿಂದ ಸ್ಟೇಡಿಯಂ ಹೊರಾಂಗಣವನ್ನು ಬಂದ್ ಮಾಡಲಾಗಿದೆ ಎಂದು ಕ್ರೀಡಾ ಇಲಾಖೆ ತಿಳಿಸಿದೆ.

    79 ಜನರ ಮೇಲೆ ಆರೋಗ್ಯ ಇಲಾಖೆ ಹದ್ದಿನ ಕಣ್ಣು: ಜಿಲ್ಲೆಯಲ್ಲಿ ಈವರೆಗೆ 79 ಜನರ ಆರೋಗ್ಯವನ್ನು ಗಮನಿಸಲಾಗುತ್ತಿದ್ದು, ಈ ಪೈಕಿ ಮೂವರನ್ನು ಐಸೋಲೇಷನ್ ವಾರ್ಡ್‌ಗಳಲ್ಲಿ ಇರಿಸಲಾಗಿದೆ. 76 ಜನರಿಗೆ ಮನೆಯಲ್ಲೇ ಇರಲು ಸೂಚಿಸಲಾಗಿದ್ದು, 27ಜನರ ಗಂಟಲು ದ್ರವವನ್ನು ಪರೀಕ್ಷೆಗೆ ಕಳಿಸಲಾಗಿದೆ. ಆರು ಜನರ ಗಂಟಲು ದ್ರವದ ಸ್ಯಾಂಪಲ್ ನೆಗಟಿವ್ ಬಂದಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts