More

    ಸಾಮೂಹಿಕ ವಿವಾಹದಲ್ಲೂ ಕರೊನಾ ಜಾಗೃತಿ

    ಚಿತ್ರದುರ್ಗ: ಮುರುಘಾ ಮಠದದಲ್ಲಿ ಗುರುವಾರ ಜರುಗಿದ ಸಾಮೂಹಿಕ ಕಲ್ಯಾಣ ಮಹೋತ್ಸವ ವೇಳೆ ಕರೊನಾ ವೈರಸ್ ಕುರಿತಂತೆ ಡಾ.ಶ್ರೀ ಶಿವಮೂರ್ತಿ ಮುರುಘಾ ಶರಣರು ಅರಿವು ಮೂಡಿಸಿದರು.

    ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ,ವಿಶ್ವದಾದ್ಯಂತ ಆತಂಕ ಮೂಡಿಸಿರುವ ಕರೊನಾ ವೈರಸ್ ಹರಡುವಿಕೆ ಕುರಿತು ಕಳವಳ ವ್ಯಕ್ತಪಡಿಸಿದರು.

    ಜಾತ್ರೆ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪ್ರಾಣಿ ಬಲಿ ನಿಷೇಧವಿದ್ದರೂ ಅಮಾನವೀಯವಾಗಿ ಸಹಸ್ರಾರು ಪ್ರಾಣಿಗಳನ್ನು ಬಲಿ ನೀಡಲಾಗುತ್ತಿದೆ. ಪರಿಸರ ಮಾಲಿನ್ಯದಿಂದ ಕಾಲರಾ ಹರಡಲು ಕಾರಣವಾಗಿದೆ.

    ಕರೊನಾದಿಂದ ಬ್ರಿಟನ್‌ನಲ್ಲಿ ನಡೆಯುತ್ತಿದ್ದ ಬೃಹತ್ ಪುಸ್ತಕ ಮಾರಾಟ ಮೇಳವನ್ನು ಮುಂದೂಡಲಾಗಿದೆ. ರೋಗ ಬರುವುದಕ್ಕಿಂತ ಮುಂಚೆಯೇ ಜಾಗ್ರತೆ ವಹಿಸಬೇಕು. ಸ್ವಚ್ಛತೆ ಕಾಪಾಡಿಕೊಂಡು ಸುರಕ್ಷಿತವಾಗಿರಬೇಕಿದೆ ಎಂದರು.

    ಕುದ್ನೂರು ತೋಂಟದಾರ್ಯ ಮಠದ ಶ್ರೀ ಸದಾಶಿವ ಸ್ವಾಮೀಜಿ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದ ಹಬ್ಬ, ಜಾತ್ರೆ ಸಂದರ್ಭಗಳಲ್ಲಿ ಹೆಚ್ಚೆಂದ್ರೆ 10 ಜೋಡಿ ಸಾಮೂಹಿಕ ವಿವಾಹಗಳಾಗುತ್ತವೆ. ಆದರೆ, ಮುರುಘಾ ಶರಣರು 30 ವರ್ಷಗಳಿಂದ ಸಾಮೂಹಿಕ ವಿವಾಹ ನಡೆಸುತ್ತಿರುವುದು ಮಾದರಿ ಆಗಿದೆ ಎಂದು ತಿಳಿಸಿದರು.

    ಶರಣರು ಅಸಂಖ್ಯ ಪ್ರಮಥರ ಗಣಮೇಳವನ್ನು ಯಶಸ್ವಿಯಾಗಿ ನಡೆಸಿದ್ದಾರೆ. ಬಸವಾದಿ ಶರಣರ ವಿಚಾರ, ಮಾನವೀಯ ಮೌಲ್ಯಗಳನ್ನು ಹಂಚುತ್ತಿದ್ದಾರೆ ಎಂದರು.

    ಕೆಎಸ್‌ಆರ್‌ಟಿಸಿ ಚಿತ್ರದುರ್ಗ ವಿಭಾಗೀಯ ನಿಯಂತ್ರಣಾಧಿಕಾರಿ ಜಿ.ವಿಜಯಕುಮಾರ್ ಮಾತನಾಡಿದರು. ಒಂದು ವಿಧವಾ ವಿವಾಹ ಸೇರಿ 20 ನವ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟವು.

    ದಾಸೋಹಿಗಳಾದ ರಾಜಲಕ್ಷ್ಮಿ, ಡಿಡಿಪಿಐ ಕೆ.ರವಿಶಂಕರರೆಡ್ಡಿ, ಸಂದೀಪ ಗುಂಡಾರ್ಪಿ, ಕೆಇಬಿ ಷಣ್ಮುಖಪ್ಪ, ಪೈಲ್ವಾನ್ ತಿಪ್ಪೇಸ್ವಾಮಿ, ತಿಪ್ಪಣ್ಣ ಇತರರಿದ್ದರು. ಜಮುರಾ ಕಲಾವಿದರು ಪ್ರಾರ್ಥಿಸಿದರು. ಪ್ರೊ.ಸಿ.ಎಂ.ಚಂದ್ರಪ್ಪ ಸ್ವಾಗತಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts