More

    ಭದ್ರೆ ಮೇಲ್ದಂಡೆ ಮಾರ್ಗ ಸುಗಮ

    ಡಿಪಿಎನ್ ಶ್ರೇಷ್ಠಿ ಚಿತ್ರದುರ್ಗ: ಕರೊನಾ ಲಾಕ್‌ಡೌನ್ ಸಡಿಲಿಕೆ ಬಳಿಕ ಪೂರ್ಣ ಪ್ರಮಾಣದಲ್ಲಿ ರೈಲುಗಳ ಸಂಚಾರ ಆರಂಭವಾಗದೇ ಇದ್ದದ್ದು ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಗೆ ವರವಾಗಿದೆ.

    ಅಜ್ಜಂಪುರ-ಶಿವನಿ ಮಾರ್ಗದ ರೈಲ್ವೆ ಕೆಳ ಸೇತುವೆಯಡಿ ಪ್ರೀ ಫ್ಯಾಬ್ರಿಕೇಟೆಡ್ ಬಾಕ್ಸ್ ಅಳವಡಿಕೆ ಕಾರ್ಯ ಗುರುವಾರ ಆರಂಭವಾಗಲಿದೆ.

    ಸಂಸದ ಎ.ನಾರಾಯಣಸ್ವಾಮಿ ಕೋರಿಕೆಯಂತೆ, ರೈಲ್ವೆ ಕೆಳ ಸೇತುವೆ ಕಾಮಗಾರಿಗಾಗಿ ಮೇ 15ರಿಂದ 25ರ ವರೆಗೆ ಅಜ್ಜಂಪುರ-ಶಿವನಿ ಮಾರ್ಗದಲ್ಲಿ ರೈಲುಗಳ ಸಂಚಾರ ಸ್ಥಗಿತಕ್ಕೆ ರೈಲ್ವೆ ಸಚಿವ ಸುರೇಶ್ ಅಂಗಡಿ ಅಧಿಕಾರಿಗಳಿಗೆ ನಿರ್ದೇಶಿಸಿದ್ದರು. ಆದರೆ, ರೈಲುಗಳ ಓಡಾಟ ಸ್ಥಗಿತಕ್ಕೆ ಇಲಾಖೆ ಅಧಿಕಾರಿಗಳ ತಂಡವನ್ನು ಮೇ 14ರಂದು ಸ್ಥಳ ಪರಿಶೀಲನೆ ಕಳಿಸಿತ್ತು.

    ಅಂದು ಪರಿಶೀಲಿಸಿದ್ದ ತಂಡ, ಸೇತುವೆ ಬಳಿ ಪ್ರತ್ಯೇಕ ರೈಲು ಮಾರ್ಗವನ್ನೇ ನಿರ್ಮಿಸಿ ರೈಲುಗಳ ಸಂಚಾರಕ್ಕೆ ಹಾಗೂ ಪ್ರತ್ಯೇಕ ರೈಲು ಮಾರ್ಗವನ್ನು 10 ದಿನದೊಳಗೆ ಪೂರ್ಣಗೊಳಿಸಿ ಅಂಡರ್‌ಪಾಸ್ ಕಾಮಗಾರಿಗೆ ಅನುಕೂಲ ಕಲ್ಪಿಸಲು ನಿರ್ಧರಿಸಿತ್ತು. ಅದರಂತೆ ಪ್ರತ್ಯೇಕ ರೈಲು ಮಾರ್ಗ ನಿರ್ಮಾಣದ ಕೆಲಸ ಆರಂಭವಾಗಿತ್ತು.

    ಟು ವೆಂಟ್ ಬಾಕ್ಸ್ ಅಳವಡಿಕೆ: ಮೊದಲೇ ಸಿದ್ಧಪಡಿಸಿರುವ ಟುವೆಂಟ್ ಬಾಕ್ಸ್ ಅಳವಡಿಕೆ ಪೂರ್ಣಗೊಳ್ಳುವುದರಿಂದ, ಕಾಮಗಾರಿಗಿದ್ದ ಪ್ರಮುಖ ತೊಡಕು ನಿವಾರಣೆ ಆಗಲಿದೆ. ಅಜ್ಜಂಪುರ ಸುರಂಗದಿಂದ ಅಂದಾಜು 700 ಮೀಟರ್ ದೂರದಲ್ಲಿರುವ ಈ ಅಂಡರ್ ಪಾಸ್ ಮೂಲಕವೇ ವೈಜಂಕ್ಷನ್‌ಗೆ, ಅಲ್ಲಿಂದ ಚಿತ್ರದುರ್ಗ ಹಾಗೂ ತುಮಕೂರು ಶಾಖಾ ಕಾಲುವೆಗಳಿಗೆ ನೀರು ಹರಿಯಬೇಕಿದೆ.

    ಅಂದಾಜು 50 ಮೀಟರ್ ಉದ್ದ, 6.2 ಅಗಲ, 7.2 ಮೀಟರ್ ಎತ್ತರ ಟುವೆಂಟ್‌ಬಾಕ್ಸ್ ಅಳವಡಿಕೆ ಕಾಮಗಾರಿ ಜೂನ್ 12ರೊಳಗೆ ಪೂರ್ಣ ಗೊಳ್ಳುವ ನಿರೀಕ್ಷೆ ಇದೆ.

    ಈಗ ಪ್ರತ್ಯೇಕ ರೈಲು ಮಾರ್ಗ ನಿರ್ಮಾಣದಿಂದಾಗಿ, ಮಾಮೂಲಿ ರೈಲು ಮಾರ್ಗಗಳನ್ನು (ಡಬ್ಲಿಂಗ್) ಸ್ಥಗಿತಗೊಳಿಸಲಾಗಿದೆ.

    ಪ್ರತ್ಯೇಕ ರೈಲು ಮಾರ್ಗ ನಿರ್ಮಾಣ ಕಾಮಗಾರಿ ಬುಧವಾರ ಪೂರ್ಣಗೊಂಡಿದೆ. ಗುರುವಾರದಿಂದ ರೈಲ್ವೆ ಅಂಡರ್‌ಪಾಸ್ ಬಳಿ ಟುವೆಂಟ್‌ಬಾಕ್ಸ್ ಅಳವಡಿಕೆ ಕಾಮಗಾರಿ ಆರಂಭವಾಗಲಿದೆ.
    ಎಂ.ಜಿ.ಶಿವಕುಮಾರ್ ಮುಖ್ಯ ಇಂಜಿನಿಯರ್
    ಭದ್ರಾ ಮೇಲ್ದಂಡೆ ಯೋಜನೆ, ಚಿತ್ರದುರ್ಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts