More

    ಅಧಿಕಾರಿಗಳಿಗೆ ಕೆಲಸ ಹಂಚಿಕೆ

    ಚಿತ್ರದುರ್ಗ: ಸಾರ್ವಜನಿಕರಿಗೆ ಅಗತ್ಯ ಸೇವೆ ಮತ್ತು ವಸ್ತುಗಳನ್ನು ಒದಗಿಸುವ ಉದ್ದೇಶದಿಂದ ಹಾಗೂ ರೋಗಿಗಳಿಗೆ ಚಿಕಿತ್ಸೆ ಸಹಿತ ಪರಿಸ್ಥಿತಿ ನಿಭಾಯಿಸಲು ಅಧಿಕಾರಿಗಳಿಗೆ ಜವಾಬ್ದಾರಿ ನಿಗದಿಪಡಿಸಿ ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಆದೇಶಿಸಿದ್ದಾರೆ.

    ಯಾರ‌್ಯಾರಿಗೆ ಯಾವ ಹೊಣೆ?
    ಪಶುಸಂಗೋಪನೆ ಇಲಾಖೆ ಉಪ ನಿರ್ದೇಶಕ ಡಾ.ಕೃಷ್ಣಪ್ಪ (94486567310): ಪಶು ಆಹಾರ, ಔಷಧ, ಚಿಕಿತ್ಸೆ, ಪಾಸ್ ವಿತರಣೆ, ಸಂಘ-ಸಂಸ್ಥೆಗಳು ಉಚಿತವಾಗಿ ಆಹಾರ ಪದಾರ್ಥ ನೀಡಲು ಮುಂದೆ ಬಂದರೆ ಅಂಥ ಸಂಸ್ಥೆಗಳನ್ನು ಸಂಪರ್ಕಿಸಿ ಸೂಕ್ತ ವ್ಯವಸ್ಥೆ ಕಲ್ಪಿಸುವುದು.

    ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ ಕೆ.ಪಿ.ಮಧುಸೂಧನ್ (9448233477): ಸಾರ್ವಜನಿಕರಿಗೆ ಅಗತ್ಯ ವಸ್ತುಗಳ ಪೂರೈಕೆ ಮಾಡುವುದು.

    ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಕೆ.ವೈಶಾಲಿ (9945149299): ಹಿರಿಯ ನಾಗರಿಕರು, ಅಂಗವಿಕಲರಿಗೆ ಅಗತ್ಯ ಸೇವೆಗಳು, ಆಹಾರ, ಔಷಧ ಹಾಗೂ ಚಿಕಿತ್ಸೆ ನಿರ್ವಹಣೆ ಹೊಣೆ.

    ಜಿಪಂ ಮುಖ್ಯ ಯೋಜನಾಧಿಕಾರಿ ಟಿ.ಶಶಿಧರ್ (9448438088) ಹಾಗೂ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಮಂಜುಳಮ್ಮ (9620575837): ನಿರ್ಗತಿಕರು, ಭಿಕ್ಷುಕರು, ಅಲೆಮಾರಿಗಳು, ವಲಸಿಗರು ಮೊದಲಾದವರನ್ನು ಗುರುತಿಸಿ ಸ್ಥಳೀಯ ಹಾಸ್ಟೆಲ್‌ಗೆ ಕಳಿಸುವ ಹಾಗೂ ಸೂಕ್ತ ಊಟೋಪಚಾರ ವ್ಯವಸ್ಥೆ ಮಾಡುವುದು.

    ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎನ್.ಎಸ್.ರಾಘವೇಂದ್ರ (9620089272): ನಿರ್ಗತಿಕರು, ಭಿಕ್ಷಕರು, ಅಲೆಮಾರಿಗಳು, ವಲಸಿಗರು ಮುಂತಾದವರಿಗೆ ದಿನ ಬಳಕೆ ಆಹಾರ ಸಾಮಗ್ರಿ, ಸಿದ್ಧ ಆಹಾರ ಪೊಟ್ಟಣ ನೀಡಲು ಮುಂದೆ ಬರುವಂಥ ಸಂಘ ಸಂಸ್ಥೆಯವರನ್ನು ಸಂಪರ್ಕಿಸಿ, ಸೂಕ್ತ ಸೌಲಭ್ಯ ಹಾಗೂ ವ್ಯವಸ್ಥೆ ಕಲ್ಪಿಸಬೇಕು.

    ಜಿಲ್ಲಾಸ್ಪತ್ರೆ ವೈದ್ಯಾಧಿಕಾರಿಗಳಾದ ಡಾ.ಸುಧಾ, ಡಾ.ಜಯಮ್ಮ (9741536502): ಜನಸಾಮಾನ್ಯರು, ಗರ್ಭಿಣಿಯರು, ಮಕ್ಕಳಿಗೆ ಅಗತ್ಯವಿರುವ ತುರ್ತು ವೈದ್ಯಕೀಯ ಚಿಕಿತ್ಸೆ ವ್ಯವಸ್ಥೆ ಮಾಡುವುದು.

    ವಾಹನಗಳ ಸನ್ನದ್ಧವಾಗಿರಲಿ: ತುರ್ತು ಸಂದರ್ಭಗಳಲ್ಲಿ ಬಳಸಲು ಅನುಕೂಲವಾಗುವಂತೆ ಚಾಲಕರ ಸಹಿತ ಸರ್ಕಾರಿ ವಾಹನಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇಟ್ಟು ಕೊಳ್ಳಬೇಕು. ಪ್ರಾದೇಶಿಕ ಸಾರಿಗೆ ಅಧಿಕಾರಿ ಕೇಳುತ್ತಿದ್ದಂತೆ ಯಾವುದೇ ಕಾರಣಗಳನ್ನು ನೀಡದೆ ಕೂಡಲೇ ವಾಹನಗಳೊಂದಿಗೆ ನಿಯೋಜಿತ ಸ್ಥಳಕ್ಕೆ ತೆರಳಿ ವರದಿ ಮಾಡಿಕೊಳ್ಳ ಬೇಕೆಂದು ಚಾಲಕರಿಗೆ ಸೂಚಿಸುವಂತೆ ಅಧಿಕಾರಿಗಳಿಗೆ ಡಿಸಿ ಆದೇಶಿಸಿದ್ದಾರೆ.

    ಕೇಂದ್ರ ಸ್ಥಾನದಲ್ಲಿರಲು ಡಿಸಿ ಆದೇಶ: ಸಾರ್ವಜನಿಕರಿಗೆ ಅತ್ಯವಶ್ಯಕ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ಸರ್ಕಾರಿ ಅಧಿಕಾರಿ ಹಾಗೂ ಸಿಬ್ಬಂದಿ ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿರಬೇಕು ಎಂದು ಡಿಸಿ ಆದೇಶಿಸಿದ್ದಾರೆ. ಕೆಲ ಇಲಾಖೆಗಳನ್ನು ಹೊರತುಪಡಿಸಿ, ಇತರೆ ಇಲಾಖೆಗಳ ಗ್ರೂಫ್ ಬಿ, ಸಿ ಮತ್ತು ಡಿ ನೌಕರರಿಗೆ ಮಾ.31ರ ವರೆಗೆ ಕಚೇರಿಗೆ ಬರುವುದರಿಂದ ವಿನಾಯಿತಿ ನೀಡಲಾಗಿದೆ. ಆದರೆ, ತುರ್ತು ಸೇವೆಗಳ ನಿರ್ವಹಣೆಗಾಗಿ ಎಲ್ಲರೂ ಕೇಂದ್ರ ಸ್ಥಾನದಲ್ಲಿರಬೇಕು. ಒಂದು ವೇಳೆ ಯಾರಾದರೂ ಜ್ವರ, ಕೆಮ್ಮು, ನೆಗಡಿಯಿಂದ ಬಳಲುತ್ತಿದ್ದರೆ ಮುಖ್ಯಸ್ಥರಿಗೆ ಮಾಹಿತಿ ನೀಡಿ, ಆರೋಗ್ಯ ತಪಾಸಣೆಗೆ ಒಳಗಾಗಬೇಕೆಂದು ಸೂಚಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts