More

    ಬೆಳಗಾವಿಯಲ್ಲಿ ಚಿರತೆಗಾಗಿ ಕತ್ತಿ ರಾಜೀನಾಮೆಗೆ ಒತ್ತಾಯ, ಚಿರತೆ ಸಿಗುವುದಾದರೆ ರಾಜೀನಾಮೆಗೆ ಸಿದ್ಧ ಎಂದ ಕತ್ತಿ….!

    ವಿಜಯಪುರ: ಗಡಿ ಜಿಲ್ಲೆ ಬೆಳಗಾವಿ ಜನರ ನಿದ್ದೆ ಗೆಡಿಸಿರುವ ಚಿರತೆ ಈವರೆಗೂ ಸೆರೆ ಸಿಗದ ಹಿನ್ನೆಲೆ ಅರಣ್ಯ ಸಚಿವ ಉಮೇಶ ಕತ್ತಿ ರಾಜೀನಾಮೆಗೆ ಒತ್ತಾಯ ಕೇಳಿ ಬರುತ್ತಿದ್ದು, ನನ್ನ ರಾಜೀನಾಮೆಯಿಂದ ಚಿರತೆ ಸಿಗುವುದಾದರೆ ಅದಕ್ಕೂ ಸಿದ್ಧ ಎಂದು ಸಚಿವ ಕತ್ತಿ ಪ್ರತಿಕ್ರಿಯಿಸಿದ್ದಾರೆ.
    ಈವರೆಗೂ ಚಿರತೆ ಹಿಡಿಲಾಗದಿರುವುದು ಅರಣ್ಯ ಇಲಾಖೆ ವೈಫಲ್ಯವೆಂದು ಜನ ಆರೋಪಿಸುತ್ತಿದ್ದು, ಈ ಬಗ್ಗೆ ಸೋಮವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಉಮೇಶ ಕತ್ತಿ, ನಾನು ರಾಜೀನಾಮೆ ಕೊಟ್ಟರೆ ಚಿರತೆ ಸಿಗುತ್ತದೆ ಎಂದರೆ ನಾಳೆಯೇ ರಾಜೀನಾಮೆ ನೀಡುತ್ತೇನೆ. ಚಿರತೆ ಸಿಕ್ಕರೆ ನಂದೇನೂ ತಕರಾರಿಲ್ಲ ಎಂದಿದ್ದಾರೆ.
    ಚಿರತೆ ಹಿಡಿಯಲು ಉತ್ತರ ಕರ್ನಾಟಕ ಭಾಗದ ಸಿಬ್ಬಂದಿಯನ್ನು ನೇಮಿಸಲಾಗಿದೆ. ಆನೆಗಳನ್ನು ತಂದಿದ್ದೇವೆ. ಈವರೆಗೆ ಚಿರತೆ ಯಾರಿಗೂ ಏನೂ ಮಾಡಿಲ್ಲ. ಚಿರತೆ ಇನ್ನೂ ಸಿಕ್ಕಿಲ್ಲ. ಎರಡು ದಿನಗಳಿಂದ ಚಿರತೆ ಕಂಡು ಬಂದಿಲ್ಲ. ಅದು ಬೆಟ್ಟಕ್ಕೆ ಹೋಗಿರಬಹುದು ಎಂದು ಅಂದಾಜಿಸಲಾಗಿದೆ. ನಿಮಗೆ ಕಂಡರೆ ನಿಮ್ಮನ್ನೂ ಹಿಡಿಯಲು ಕಳುಹಿಸೋಣ ಎಂದು ಮಾಧ್ಯಮದವರಿಗೆ ಕಿಚಾಯಿಸಿದರು.
    ಇನ್ನು ಮುರುಘಾ ಶರಣ ಮೇಲಿನ ಲೈಂಗಿಕ ಕಿರುಕಳದ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವ ಉಮೇಶ ಕತ್ತಿ, ಸಂತ್ರಸ್ತರೆನ್ನಲಾದ ಬಾಲಕಿಯರು ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ. ಅದಕ್ಕಿಂತ ಹೆಚ್ಚಿನ ಮಾಹಿತಿ ನನ್ನಲ್ಲಿ ಇಲ್ಲ. ಇದು ಮಠದ ಒಳಜಗಳ. ಇದೀಗ ಅದು ಎಲ್ಲೆಲ್ಲೋ ಹೋಗಿದೆ. ನ್ಯಾಯಾಲಯ ಏನು ತೀರ್ಮಾನ ತೆಗೆದುಕೊಳ್ಳುತ್ತದೆ ನೋಡೋಣವೆಂದರು.
    ಸ್ವಾಮೀಜಿಗಳ ಮೇಲೆ ಆರೋಪ ಮಾಡಿದ್ದು ತಪ್ಪು. ರಾಜ್ಯದಲ್ಲಿ ಒಂದಿಬ್ಬರು ಸ್ವಾಮೀಜಿಗಳು ಉಳಿದುಕೊಂಡಿದ್ದಾರೆ. ಸಮಾಜ ತಿದ್ದಬೇಕೆಂಬ ಅವರ ಪ್ರಯತ್ನಗಳಿವೆ. ಅಂಥ ಪ್ರಯತ್ನಗಳಿಗೆ ಇಂಥ ಸಲ್ಲದ ಆರೋಪ ಮಾಡಿ ತೊಂದರೆಗೆ ಸಿಲುಕಿಸಬಾರದು. ಸಮಾಜವನ್ನು ಬೇರೆ ದಿಕ್ಕಿನಲ್ಲಿ ಒಯ್ಯಬಾರದು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts