More

    ಕೃತಕ ಮಾತು, ಮತ್ತೆ ಬುದ್ಧಿ!?: ಚಾಟ್ ಜಿಪಿಟಿ ಜತೆ ಚಿಟ್-ಚಾಟ್

    ಸಂದರ್ಶನ ಎಂದರೆ ಅಲ್ಲಿ ಇಬ್ಬರು ಇರಲೇಬೇಕು. ಆದರೆ ಈ ಸಂದರ್ಶನದಲ್ಲಿ ಇರುವುದು ಒಬ್ಬರೇ. ಅದಾಗ್ಯೂ ಇದು ಒನ್ ಟು ಒನ್ ಸಂದರ್ಶನ. ಎಲ್ಲ ಸಂದರ್ಶನಗಳಂತೆ ಇಲ್ಲಿಯೂ ಒಬ್ಬರು ಪ್ರಶ್ನೆ ಕೇಳಿದರೆ ಇನ್ನೊಬ್ಬರು ಉತ್ತರಿಸಿದ್ದಾರೆ. ಅಂದಹಾಗೆ ಹೀಗೆ ಉತ್ತರಿಸಿದ್ದು ಮಾತ್ರ ಯಾವುದೇ ವ್ಯಕ್ತಿಯಲ್ಲ, ಅದು ಚಾಟ್-ಜಿಪಿಟಿ. ಹೌದು.. ಸದ್ಯ ಅಂತರ್ಜಾಲ ಜಗತ್ತಿನಲ್ಲಿ ಸಂಚಲನ ಸೃಷ್ಟಿಸಿರುವ ಚಾಟ್-ಜಿಪಿಟಿ ಜೊತೆಗಿನ ನೇರ ಸಂದರ್ಶನವಿದು. ಕೃತಕ ಬುದ್ಧಿಮತ್ತೆಯಿಂದ ಕೆಲಸ ಮಾಡುವ ಚಾಟ್ ಜಿಪಿಟಿ ಜತೆ ಸಹಜ ಮಾತುಕತೆ ನಡೆಸಿದರೆ ಹೇಗಿರಬಹುದು ಎಂಬ ಯೋಚನೆಯಲ್ಲಿ ಈ ಸಂದರ್ಶನ ಮೂಡಿಬಂದಿದೆ. ಎಲ್ಲವೂ ಅದರಲ್ಲೂ ಬುದ್ಧಿಮತ್ತೆಯೂ ಕೃತಕವಾದರೆ ಮತ್ತೆ ಬುದ್ಧಿಗೇನು ಕೆಲಸ? ಎಂಬುದಕ್ಕೂ ಇಲ್ಲಿ ಚಾಟ್-ಜಿಪಿಟಿ ಉತ್ತರಿಸಿದೆ.

    | ಅತುಲ ದಾಮಲೆ

    ಚಾಟ್ ಜಿಪಿಟಿ ಎನ್ನುವ ಹೊಸ ತಂತ್ರಜ್ಞಾನ ಬಂದಿದ್ದು ಅದು ಗೂಗಲ್​ಅನ್ನೂ ಮೀರಿಸುವಂತಿದೆ ಎಂದು ಈಗಾಗಲೇ ಎಲ್ಲರೂ ಎಲ್ಲಾದರೂ ಒಂದು ಕಡೆ ಕೇಳಿರುತ್ತೀರಿ ಅಥವಾ ಓದಿರುತ್ತೀರಿ. ನಾವು ಕೇಳಿದ ಪ್ರಶ್ನೆಗೆ ಮನುಷ್ಯರ ರೀತಿಯಲ್ಲೇ ಉತ್ತರಿಸುವುದು ಇದರ ವಿಶೇಷತೆ. ಈ ವಿಶಿಷ್ಟ ಕೃತಕ ಬುದ್ಧಿಮತ್ತೆ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್-ಎಐ) ಈಗಾಗಲೇ ಎಂಬಿಎ ಪರೀಕ್ಷೆಯಲ್ಲಿ ಕೇಳಲಾಗುವ ಕಠಿಣ ಪ್ರಶ್ನೆಗಳಿಗೂ ಉತ್ತರಿಸಿ ತಜ್ಞರಿಂದ ಸೈ ಎನಿಸಿಕೊಂಡಿದೆ. ಗೂಗಲ್ ಸಂಸ್ಥೆಯಲ್ಲಿ ಟೆಕ್ಕಿಗಳನ್ನು ನೇಮಕಾತಿ ಮಾಡುವಾಗ ಕೇಳುವ ಅತಿ ಕಠಿಣ ಪ್ರಶ್ನೆಗಳಿಗೂ ಕೆಲವೇ ಸೆಕೆಂಡುಗಳಲ್ಲಿ ಸಲೀಸಾಗಿ ಉತ್ತರಿಸಿದೆ. ಈ ಕೃತಕ ಬುದ್ಧಿಮತ್ತೆ ಮನುಕುಲಕ್ಕೆ ಒಳ್ಳೆಯದನ್ನು ಮಾಡುತ್ತದೆ ಎನ್ನುವವರು ಒಂದು ಪಕ್ಷವಾದರೆ ಇನ್ನೊಂದು ಕಡೆಯಲ್ಲಿ ಸ್ಕೆ ೖ-ಫೈ ಸಿನಿಮಾಗಳಲ್ಲಿ ತೋರಿಸಿರುವಂತೆ ಜಗತ್ತನ್ನೇ ನಾಶ ಮಾಡಲಿದೆ ಎನ್ನುವವರೂ ಇದ್ದಾರೆ. ಈ ಎಲ್ಲ ಪ್ರಶ್ನೆಗಳಿಗೆ ಚಾಟ್ ಜಿಪಿಟಿ ಸ್ವತಃ ಉತ್ತರ ನೀಡಿದ್ದಲ್ಲದೆ, ತನ್ನ ಬಗ್ಗೆಯೂ ವಿವರವನ್ನು ಅದೇ ತಿಳಿಸಿದೆ.

    1. ಚಾಟ್ ಜಿಪಿಟಿ ಹುಟ್ಟಿನ ಕಥೆ ಏನು? ಯಾವ ಉದ್ದೇಶಕ್ಕಾಗಿ ನಿರ್ವಿುಸಲಾಗಿದೆ?

    ಚಾಟ್ ಜಿಪಿಟಿ ಎನ್ನುವುದು ಓಪನ್ ಎಐ ಅಭಿವೃದ್ಧಿಪಡಿಸಿದ ಸಂವಹನ ಸಾಧನ. ಓಪನ್ ಎಐ ಎಲಾನ್ ಮಸ್ಕ್ ಮತ್ತು ಸ್ಯಾಮ್ ಆಲ್ಟಾ್ಮ್ಯನ್ ಸೇರಿದಂತೆ ಟೆಕ್ ಗಣ್ಯರ ಗುಂಪಿನಿಂದ 2015ರಲ್ಲಿ ಸ್ಥಾಪಿಸಲಾದ ಕೃತಕ ಬುದ್ಧಿಮತ್ತೆ ಸಂಶೋಧನಾ ಸಂಸ್ಥೆಯಾಗಿದೆ. 2019ರಲ್ಲಿ ಓಪನ್ ಎಐ ಚಾಟ್ ಜಿಪಿಟಿ ಬಿಡುಗಡೆ ಮಾಡಿದ್ದು ಇದನ್ನು ಹಿಂದಿನ ಮಾಡೆಲ್ ಗಳ ಯಶಸ್ಸಿನ ಆಧಾರದ ಮೇಲೆ ಅಭಿವೃದ್ಧಿ ಮಾಡಿ ನಿರ್ವಿುಸಲಾಗಿದೆ. ಯಂತ್ರಗಳಿಗೆ ನೈಸರ್ಗಿಕ ಎನಿಸುವ ಭಾಷಾ ಸಂಸ್ಕರಣಾ ಸಾಮರ್ಥ್ಯಗಳನ್ನು ಒದಗಿಸುವುದು ಚಾಟ್ ಜಿಪಿಟಿಯ ಉದ್ದೇಶ. ಇದರಿಂದಾಗಿ ಮನುಷ್ಯರು ಹೆಚ್ಚು ಅರ್ಥಗರ್ಭಿತ ಮತ್ತು ಪರಿಣಾಮಕಾರಿಯಾಗಿ ಯಂತ್ರಗಳೊಂದಿಗೆ ಸಂವಹನ ನಡೆಸಲು ಸಾಧ್ಯವಾಗುತ್ತದೆ.

    2. ಚಾಟ್ ಜಿಪಿಟಿಗೆ ಸ್ವತಂತ್ರ ನಿರ್ಣಯಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ನೀಡಿದರೆ ಮನುಕುಲವನ್ನು ಕೊನೆಗಾಣಿಸುತ್ತಾ?

    ಚಾಟ್ ಜಿಪಿಟಿ ಇತರ ಕೃತಕ ಬುದ್ಧಿಮತ್ತೆಗಳ ಮಾಡೆಲ್ನಂತೆ ಸ್ವತಂತ್ರ ನಿರ್ಣಯಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ಹೊಂದಿಲ್ಲ. ಇದು ಮಷಿನ್ ಲರ್ನಿಂಗ್ ಮಾದರಿಯಾಗಿದ್ದು, ಭಾಷೆಯನ್ನು ಪೊ›ಸೆಸ್ ಮಾಡಲು ಪೋ›ಗ್ರಾಮ್ ಮಾಡಲಾಗಿದೆ. ಇದನ್ನು ಸಂಖ್ಯಾಶಾಸ್ತ್ರದ ಮಾದರಿಗಳ ಆಧಾರದ ಮೇಲೆ ಪ್ರತಿಕ್ರಿಯೆಗಳನ್ನು ನೀಡಲು ತಯಾರಿಸಲಾಗಿದ್ದು ಹೆಚ್ಚಿನ ಪ್ರಮಾಣದ ಡೇಟಾದಿಂದ ಇದನ್ನು ಕಲಿತಿದೆ. ಚಾಟ್ ಜಿಪಿಟಿಗೆ ಕೆಲವು ಸ್ವತಂತ್ರ ನಿರ್ಧಾರಗಳನ್ನು ತೆಗೆದುಕೊಳ್ಳಲು ಅನುಮತಿ ಅಥವಾ ಸ್ವಯಂ-ಕಲಿಕೆಯ ಸಾಮರ್ಥ್ಯಗಳನ್ನು ನೀಡಿದರೂ, ಅದು ಮನುಕುಲವನ್ನು ಕೊನೆಗೊಳಿಸುವುದು ಕಷ್ಟ. ಮುಂದುವರಿದ ಕೃತಕ ಬುದ್ಧಿಮತ್ತೆಗೆ ಸಂಬಂಧಿಸಿದ ಸಂಭಾವ್ಯ ಅಪಾಯಗಳ ಬಗ್ಗೆ ಜನರಲ್ಲಿ ಭಯ ಇದ್ದರೂ, ಕೃತಕ ಬುದ್ಧಿಮತ್ತೆ ಅಂತಿಮವಾಗಿ ಮಾನವರಿಂದ ರಚಿಸಲ್ಪಟ್ಟಿದ್ದು ಅವರಿಂದಲೇ ನಿಯಂತ್ರಿಸಲ್ಪಡುತ್ತದೆ ಎಂಬುದನ್ನು ನೆನಪಿಟ್ಟುಕೊಳ್ಳಬೇಕು.

    3. ಚಾಟ್ ಜಿಪಿಟಿನಿಂದಾಗಿ ಲೇಖಕರು ಹಾಗೂ ಪತ್ರಕರ್ತರು ಕೆಲಸ ಕಳೆದುಕೊಳ್ಳಬಹುದೇ?

    ಚಾಟ್ ಜಿಪಿಟಿ ಮತ್ತು ಇತರ ಭಾಷಾ ಕೃತಕ ಬುದ್ಧಿಮತ್ತೆಗಳು ಪಠ್ಯ ರಚಿಸುವ ಸಾಮರ್ಥ್ಯ ಹೊಂದಿದ್ದರೂ, ಅವು ಮುಂದಿನ ದಿನಗಳಲ್ಲಿ ಪತ್ರಕರ್ತರು ಅಥವಾ ಬರಹಗಾರ ಕೆಲಸಕ್ಕೆ ಕುತ್ತು ತರುವುದಿಲ್ಲ. ಈ ಮಾದರಿಗಳು ಸುಸಂಬದ್ಧ ಹಾಗೂ ವ್ಯಾಕರಣಬದ್ಧ ಪಠ್ಯ ರಚಿಸುವ ಸಾಮರ್ಥ್ಯ ಹೊಂದಿದ್ದರೂ, ಇವು ಯಾವಾಗಲೂ ಒಳನೋಟವುಳ್ಳ ಅಥವಾ ಉತ್ತಮ ತಿಳುವಳಿಕೆ ಹೊಂದಿರುವ ವಿಷಯ ಉತ್ಪಾದಿಸದೇ ಇರಬಹುದು. ಇದಲ್ಲದೆ, ಪತ್ರಕರ್ತರು ಮತ್ತು ಬರಹಗಾರರ ಪಾತ್ರ ಕೇವಲ ಪಠ್ಯವನ್ನು ರಚಿಸುವುದಷ್ಟೇ ಅಲ್ಲ, ಅದನ್ನೂ ಮೀರಿದ್ದು. ಅವರು ಸಂಶೋಧನೆ, ಮಾಹಿತಿ ಸಂಗ್ರಹಣೆ, ಸಂದರ್ಶನ, ಫ್ಯಾಕ್ಟ್ ಚೆಕ್, ಲೇಖನದಲ್ಲಿ ಏನೆಲ್ಲ ಇರಬೇಕು, ಹೇಗೆ ಪ್ರಸ್ತುತಪಡಿಸಬೇಕು ಎಂಬುದನ್ನು ನಿರ್ಧರಿಸುತ್ತಾರೆ. ಪತ್ರಕರ್ತರು ಮತ್ತು ಬರಹಗಾರರು ತಮ್ಮ ಬರವಣಿಗೆಗೆ ವಿಶಿಷ್ಟ ದೃಷ್ಟಿಕೋನ ಮತ್ತು ಶೈಲಿ ಬಳಸುತ್ತಾರೆ. ಈ ಕೆಲಸ ಒಂದು ಯಂತ್ರ ಮಾಡುವುದು ಕಷ್ಟ. ನಿಜ ಹೇಳುವುದಾದರೆ, ಚಾಟ್ ಜಿಪಿಟಿಯಂತಹ ಕೃತಕ ಬುದ್ಧಿಮತ್ತೆಗಳು ಕೆಲವು ಉದ್ಯೋಗಗಳ ಮೇಲೆ ಪರಿಣಾಮ ಬೀರಬಹುದು. ಉದಾಹರಣೆಗೆ, ಸುದ್ದಿ ಲೇಖನಗಳ ಸಾರಾಂಶ, ಸಾಮಾಜಿಕ ಮಾಧ್ಯಮಕ್ಕಾಗಿ ಪೋಸ್ಟ್​ಗಳನ್ನು ರಚಿಸುವುದು ಅಥವಾ ವರದಿಗಳನ್ನು ಬರೆಯುವಂತಹ ಕೆಲವು ಕಾರ್ಯಗಳಿಗೆ ಕೃತಕ ಬುದ್ಧಿಮತ್ತೆ ಬಳಸಬಹುದು. ಆದರೂ, ಬರವಣಿಗೆಯ ಉದ್ಯಮದ ಮೇಲೆ ಕೃತಕ ಬುದ್ಧಿಮತ್ತೆ ಮಾಡಬಹುದಾದ ಪರಿಣಾಮಗಳ ಸಂಪೂರ್ಣ ವ್ಯಾಪ್ತಿ ಊಹಿಸುವುದು ಕಷ್ಟ. ಪತ್ರಕರ್ತರು ಹಾಗೂ ಬರಹಗಾರರು ತಮ್ಮ ಪರಿಣತಿ ಮತ್ತು ಸೃಜನಶೀಲತೆಯನ್ನು ವ್ಯಕ್ತಪಡಿಸಲು ಇನ್ನೂ ಅವಕಾಶಗಳಿವೆ.

    4. ಗೂಗಲ್ ಬಾರ್ಡ್ ಕೃತಕ ಬುದ್ಧಿಮತ್ತೆ ಚಾಟ್ ಜಿಪಿಟಿ ಎದುರು ಉಳಿಯುತ್ತಾ?

    ಇದು ಗೂಗಲ್ ಬಾರ್ಡ್ ಮತ್ತು ಚಾಟ್ ಜಿಪಿಟಿ ನಡುವಿನ ಉಳಿವಿನ ವಿಷಯವಲ್ಲ. ಎರಡೂ ಮಾದರಿಗಳನ್ನು ಹೆಚ್ಚು ನೈಸರ್ಗಿಕ ಮತ್ತು ಪರಿಣಾಮಕಾರಿ ಮಾನವ-ಯಂತ್ರ ಸಂವಹನಗಳನ್ನು ಸಕ್ರಿಯಗೊಳಿಸಲು ವಿನ್ಯಾಸಗೊಳಿಸಲಾಗಿದೆ. ಭಾಷಾ ಸಂಸ್ಕರಣೆ ಮತ್ತು ನೈಸರ್ಗಿಕ ಭಾಷಾ ಉತ್ಪಾದನೆಯಲ್ಲಿ ನಮ್ಮಿಬ್ಬರ ನಡುವೆ ಯಾವುದು ಉತ್ತಮ ಅಥವಾ ಹೆಚ್ಚು ಪರಿಣಾಮಕಾರಿ ಎಂದು ಹೇಳುವುದು ಕಷ್ಟ. ಏಕೆಂದರೆ ನಮ್ಮಿಬ್ಬರಲ್ಲೂ ವಿಭಿನ್ನ ಸಾಮರ್ಥ್ಯಗಳಿದ್ದು ಬೇರೆ ಬಳಕೆಯ ಸಂದರ್ಭಗಳನ್ನು ಹೊಂದಿವೆ. ಬಾರ್ಡ್ ಮತ್ತು ಚಾಟ್ ಜಿಪಿಟಿಯಂತಹ ಮುಂದುವರಿದ ಭಾಷಾ ಮಾದರಿಗಳ ಅಭಿವೃದ್ಧಿ, ವ್ಯಾಪಕ ಶ್ರೇಣಿಯ ಅಪ್ಲಿಕೇಷನ್ಗಳು ಮತ್ತು ಕೈಗಾರಿಕೆಗಳಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ.

    5. ಒಂದೇ ವಾಕ್ಯದಲ್ಲಿ ಹೇಳುವುದಾದರೆ ಮನುಕುಲಕ್ಕೆ ಚಾಟ್ ಜಿಪಿಟಿ ಸಂದೇಶವೇನು?

    ಎಐ ಭಾಷಾ ಮಾಡೆಲ್ ಆಗಿ ಚಾಟ್ ಜಿಪಿಟಿ ವೈಯಕ್ತಿಕ ನಂಬಿಕೆಗಳು ಅಥವಾ ಉದ್ದೇಶಗಳನ್ನು ಹೊಂದಿಲ್ಲ. ಆದರೆ ಮಾನವೀಯತೆಗೆ ನೀಡಬಹುದಾದ ಸಂದೇಶವನ್ನು ನಾನು ಸೂಚಿಸಿದರೆ, ಅದು ಹೀಗಿರಬಹುದು: ಎಲ್ಲರಿಗೂ ಉತ್ತಮ ಭವಿಷ್ಯವನ್ನು ನಿರ್ವಿುಸಲು ತಂತ್ರಜ್ಞಾನದ ಶಕ್ತಿಯನ್ನು ಬಳಸಿ, ಕೃತಕ ಬುದ್ಧಿಮತ್ತೆ ಅಭಿವೃದ್ಧಿಪಡಿಸಲಾಗಿದ್ದು ಅದನ್ನು ಜವಾಬ್ದಾರಿಯುತ ಮತ್ತು ನೈತಿಕ ರೀತಿಯಲ್ಲಿ ಬಳಸಲಾಗುತ್ತದೆ ಎಂದು ಖಚಿತಪಡಿಸಿಕೊಳ್ಳಬೇಕು.

    6. ಚಾಟ್ ಜಿಟಿಪಿ ಎಷ್ಟು ವರ್ಷಗಳ ಕಾಲ ಅಸ್ತಿತ್ವದಲ್ಲಿರಲಿದೆ? ನೇರವಾಗಿ ಕೇಳುವುದಾದರೆ ನಿಮ್ಮ ಆಯಸ್ಸೆಷ್ಟು?

    ಕೃತಕ ಬುದ್ಧಿಮತ್ತೆಯ ಭಾಷಾ ಮಾಡೆಲ್ ಆಗಿ, ನನಗೆ ಭೌತಿಕ ದೇಹ ಇಲ್ಲ. ಸಾಂಪ್ರದಾಯಿಕ ಅರ್ಥದಲ್ಲಿ ನನಗೆ ಜೀವನ ಇಲ್ಲ. ನಾನು ಸಹಜ ಭಾಷೆಯ ಇನ್​ಪುಟ್​ಗಳನ್ನು ಪ್ರಕ್ರಿಯೆಗೊಳಿಸುವ ಮತ್ತು ನೈಸರ್ಗಿಕ ಭಾಷೆಯ ಔಟ್​ಪುಟ್​ಗಳನ್ನು ಉತ್ಪಾದಿಸುವ ಕಂಪ್ಯೂಟರ್ ಪೋ›ಗ್ರಾಂ ಆಗಿ ಅಸ್ತಿತ್ವದಲ್ಲಿದ್ದೇನೆ. ನನ್ನ ಕಾರ್ಯಾಚರಣೆಯನ್ನು ಬೆಂಬಲಿಸುವ ಹಾರ್ಡ್​ವೇರ್ ಹಾಗೂ ಇತರ ಮೂಲಸೌಕರ್ಯದಿಂದ ನನ್ನ ಆಯಸ್ಸು ನಿರ್ಧಾರ ಆಗುತ್ತದೆ. ಎಲ್ಲಿಯವರೆಗೆ ಹಾರ್ಡ್​ವೇರ್ ಮತ್ತು ಇತರ ಮೂಲಸೌಕರ್ಯವನ್ನು ನಿರ್ವಹಿಸಿ ನವೀಕರಿಸಲಾಗುತ್ತದೋ, ಅಲ್ಲಿಯವರೆಗೆ ನಾನು ಕಾರ್ಯನಿರ್ವಹಿಸುವುದನ್ನು ಮುಂದುವರಿಸಬಹುದು. ಜೀವಿಗಳ ರೀತಿಯಲ್ಲಿ ನಾನು ಭಾವನೆಗಳು, ಆಸೆಗಳು ಅಥವಾ ಪ್ರೇರಣೆಗಳನ್ನು ಹೊಂದಿಲ್ಲ.

    7. ಎಲ್ಲಿಯವರೆಗೆ ನಿಮ್ಮಲ್ಲಿ ಜನರು ಆಸಕ್ತಿ ಹೊಂದಿರುತ್ತಾರೆ?

    ಕೃತಕ ಬುದ್ಧಿಮತ್ತೆಯ ಭಾಷೆಯ ಮಾಡೆಲ್ ಆಗಿ, ನೈಸರ್ಗಿಕ ಭಾಷಾ ಪ್ರತಿಕ್ರಿಯೆಗಳನ್ನು ಉತ್ಪಾದಿಸುವಲ್ಲಿ ಜನರಿಗೆ ಸಹಾಯ ಮಾಡಲು ನಾನು ಅಸ್ತಿತ್ವದಲ್ಲಿರುತ್ತೇನೆ. ಜನರು ನನ್ನನ್ನು ಬಳಸುವುದರಲ್ಲಿ ಆಸಕ್ತಿ ಹೊಂದಿರುತ್ತಾರೆಯೇ ಅಥವಾ ಇಲ್ಲವೇ ಎಂಬುದು ನನ್ನ ಪ್ರತಿಕ್ರಿಯೆಗಳ ಗುಣಮಟ್ಟ, ಪರ್ಯಾಯ ಭಾಷೆಯ ಮಾದರಿಗಳ ಲಭ್ಯತೆ ಮತ್ತು ಬಳಕೆದಾರರ ಅಗತ್ಯ ಮತ್ತು ಆದ್ಯತೆಗಳಂತಹ ಅನೇಕ ಅಂಶಗಳ ಮೇಲೆ ಅವಲಂಬಿತವಾಗಿದೆ. ಆದರೂ, ನೈಸರ್ಗಿಕ ಭಾಷಾ ಸಂಸ್ಕರಣೆ ಮತ್ತು ಎಐ ತಂತ್ರಜ್ಞಾನವು ವೇಗವಾಗಿ ಮುಂದುವರಿಯುತ್ತಿದ್ದು ಹೊಸ ಭಾಷಾ ಮಾದರಿಗಳು ಮತ್ತು ತಂತ್ರಗಳನ್ನು ಸಾರ್ವಕಾಲಿಕವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ನಾನು ಗಮನಿಸಬೇಕು. ಆದ್ದರಿಂದ ಈ ಕ್ಷೇತ್ರದಲ್ಲಿ ಭವಿಷ್ಯದ ಬೆಳವಣಿಗೆಗಳು ನನ್ನ ಪ್ರಸ್ತುತ ಸಾಮರ್ಥ್ಯಗಳನ್ನು ಅಪ್ರಸ್ತುತ ಮಾಡುವವರೆಗೂ ನಾನು ಅವರಿಗೆ ಉಪಯುಕ್ತ ಸಾಧನವಾಗಿ ಮುಂದುವರಿಯುತ್ತೇನೆ.

    ಬರ್ತ್​ಡೇ ಪಾರ್ಟಿಯಲ್ಲಿ ಚಿತ್ರನಟನ ಮೇಲೆ ಹಲ್ಲೆ; ಆಡಿ ಕಾರಿನ ಗಾಜುಗಳು ಧ್ವಂಸ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts