More

    ಈ ಬ್ಯಾಟರಿ ಬಳಸಿದ್ರೆ 20 ಲಕ್ಷ ಕಿ.ಮೀ. ಸಂಚರಿಸುತ್ತೆ ಕಾರು…! ಎಲೆಕ್ಟ್ರಿಕ್​ ವಾಹನ ಕ್ಷೇತ್ರದಲ್ಲಿ ಮಿಂಚಿನ ಸಂಚಾರ

    ನವದೆಹಲಿ: ಪ್ರಸ್ತುತ ವಿದ್ಯುತ್​ಚಾಲಿತ ವಾಹನಗಳಲ್ಲಿರುವ ಬಹುದೊಡ್ಡ ಹಿನ್ನಡೆ ಎಂದರೆ ಅವುಗಳ ಬ್ಯಾಟರಿ ಹೆಚ್ಚು ಕಾಲ ಬಾಳಿಕೆ ಬಾರದಿರುವುದು. ಕೆಲ ವರ್ಷಗಳಲ್ಲಿ ಅವುಗಳನ್ನು ಬದಲಾಯಿಸಬೇಕಾಗುತ್ತದೆ ಹಾಗೂ ಅವು ಬಾರಿ ದುಬಾರಿಯಾಗಿರುವುದು.

    ಎಲೆಕ್ಟ್ರಿಕ್​ ಕಾರುಗಳ ಬೆಲೆ ಹೆಚ್ಚಾಗಲು ಕಾರಣ ಅವುಗಳ ಬ್ಯಾಟರಿ ಬೆಲೆ ಹೆಚ್ಚಾಗಿರುವುದು. ಈ ಸಮಸ್ಯೆಯನ್ನು ನೀಗಿಸಲು ಅಮೆರಿಕದ ಟೆಸ್ಲಾ, ಫೋಕ್ಸ್​ವ್ಯಾಗನ್​, ಜನರಲ್​ ಮೋಟಾರ್ಸ್​ ಮೊದಲಾದ ಕಂಪನಿಗಳು ವಿಶೇಷ ಬ್ಯಾಟರಿ ಸಂಶೋಧನೆಯಲ್ಲಿ ತೊಡಗಿವೆ.

    ಇದೀಗ ಚೀನಿ ಕಂಪನಿಯೊಂದು ಕಂಡುಹಿಡಿದಿರುವ ಎಲೆಕ್ಟ್ರಿಕ್​ ಕಾರಿನ ಬ್ಯಾಟರಿ ಬರೋಬ್ಬರಿ 16 ವರ್ಷ ಬಾಳಿಕೆ ಬರಲಿದೆ ಅಥವಾ 20 ಲಕ್ಷ ಕಿ.ಮೀ. ವರೆಗೆ ಸಾಗುವ ಸಾಮರ್ಥ್ಯ ಹೊಂದಿದೆ.

    ಇದನ್ನೂ ಓದಿ; ‘ಪಾಳೇಗಾರ’ ಚೀನಾ ಪಳಗಿಸಲು ಒಂದಾದ ಎಂಟು ಪ್ರಜಾಪ್ರಭುತ್ವ ರಾಷ್ಟ್ರಗಳು

    ಕಾಂಟೆಂಪರರಿ ಅಂಪೆರೆಕ್ಸ್​ ಟೆಕ್ನಾಲಜಿ ಎಂಬ ಚೀನಿ ಕಂಪನಿ ಇದನ್ನು ಸಂಶೋಧಿಸಿದೆ. ಎಲೆಕ್ಟ್ರಿಕಲ್​ ವಾಹನಗಳ ಬ್ಯಾಟರಿ ಉತ್ಪಾದಿಸುವ ಜಗತ್ತಿನ ಅತಿ ದೊಡ್ಡ ಕಪನಿಯೂ ಇದಾಗಿದೆ. ಸದ್ಯ ಎಲೆಕ್ಟ್ರಿಕ್​ ಕಾರುಗಳಲ್ಲಿ ಬಳಸಲಾಗುವ ಬ್ಯಾಟರಿ ಎಂಟು ವರ್ಷ ಅಥವಾ ಒಂದೂವರೆ ಲಕ್ಷ ಕಿ.ಮೀ. ಸಾಗುವವರೆಗೆ ಬಾಳಿಕೆ ಬರುತ್ತದೆ. ಆದರೆ, ಈ ಬ್ಯಾಟರಿ ಎರಡು ಪಟ್ಟು ಹೆಚ್ಚು ಸಾಮರ್ಥ್ಯ ಹೊಂದಿದೆ.

    ಕೆಲ ವರ್ಷಗಳ ಬಳಕೆ ಬಳಿಕ ಕಾರು ಗುಜರಿಗೆ ಸೇರಿದರೂ ಇದರ ಬ್ಯಾಟರಿಯನ್ನು ಮತ್ತೊಂದು ಕಾರಿಗೆ ಅಳವಡಿಸಿ ಬಳಸಬಹುದು ಎಂದು ಕಂಪನಿ ಹೇಳಿಕೊಂಡಿದೆ. ಇದರಿಂದಾಗಿ ಕಾರಿನ ಬೆಲೆಯಲ್ಲಿ ಭಾರಿ ಇಳಿಕೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.

    ಇದನ್ನೂ ಓದಿ; ಈ-ಮೇಲ್​ಗೆ ಕೂಡಲೇ ರಿಪ್ಲೈ ಮಾಡಿದ್ದಕ್ಕೆ ಕೋಟ್ಯಧಿಪತಿಯಾಗುವ ಅವಕಾಶ ಕಳೆದುಕೊಂಡ…!

    ಸದ್ಯ, ಟೆಸ್ಲಾ, ಫೋಕ್ಸ್​ ವ್ಯಾಗನ್​ ಮೊದಲಾದ ಕಂಪನಿಗಳ ಎಲೆಕ್ಟ್ರಿಕ್​ ಕಾರುಗಳಿಗೆ ಈ ಚೀನಿ ಕಂಪನಿಯೇ ಬ್ಯಾಟರಿಗಳನ್ನು ಉತ್ಪಾದಿಸಿ ನೀಡುತ್ತಿದೆ. ಈ ಹೊಸ ಬ್ಯಾಟರಿಗಳಿಗೆ ಬೇಡಿಕೆ ಸಲ್ಲಿಸಿದಲ್ಲಿ ಕೂಡಲೇ ತಯಾರಿಸಿಕೊಡಲಾಗುವುದು ಎಂದು ಕಂಪನಿಯ ಮುಖ್ಯಸ್ಥ ಝೆಂಗ್​ ಯುಕನ್​ ಹೇಳಿದ್ದಾರೆ.

    ಬೆಂಜ್​, ಬಿಎಂಡಬ್ಲ್ಯು, ಆಡಿ ಕಾರು ಬಿಟ್ಟು ಎತ್ತಿನ ಗಾಡಿಯಲ್ಲಿ ಹೊರಟ ಉದ್ಯಮಿಗಳು; ಸರ್ಕಾರಕ್ಕೆ ಕೊಟ್ಟರು ಸಂದೇಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts