More

    ಚೀನಾ ಕಂಪನಿಗಳ ವಿರುದ್ಧ ತಿರುಗಿಬಿದ್ದ ಪಾಕ್​ ಮುಸ್ಲಿಂ ಧರ್ಮಗುರು: ಕಾರಣ ‘ನಮಾಜ್’

    ಇಸ್ಲಮಾಬಾದ್​: ಪಾಕಿಸ್ತಾನದಲ್ಲಿರುವ ಚೀನಾ ಕಂಪನಿಗಳ ವಿರುದ್ಧ ಮುಸ್ಲಿಂ ಧರ್ಮಗುರುವೊಬ್ಬರು ಗಂಭೀರ ಆರೋಪ ಮಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದೆ.

    ಪಾಕ್​ನಲ್ಲಿರುವ ಚೀನಾದ ಕಂಪನಿಗಳು, ತಮ್ಮಲ್ಲಿ ಕೆಲಸ ಮಾಡುತ್ತಿರುವ ಪಾಕಿಸ್ತಾನದ ಉದ್ಯೋಗಿಗಳಿಗೆ ಕೆಲಸದ ಸಮಯದಲ್ಲಿ ನಮಾಜ್​ ಮಾಡದಂತೆ ತಡೆ ಒಡ್ಡುತ್ತಿವೆ ಎಂದು ಧರ್ಮಗುರು ಹೇಳಿದ್ದಾರೆ.  ಇಸ್ಲಾಂನ ಐದು ಆಧಾರ ಸ್ತಂಭಗಳಲ್ಲಿ ಒಂದಾದ ನಮಾಜ್​ನ್ನು ಯಾರೂ ನಿರ್ಲಕ್ಷ್ಯ ಮಾಡಲು ಸಾಧ್ಯವಿಲ್ಲ. ಚೀನಾ ಮೂಲದ ಕಂಪನಿಗಳು ಪಾಕ್​ಗೆ ಬಂದು, ಇಲ್ಲಿನ ನಿಯಮಗಳ ಮೇಲೆಯೇ ದಬ್ಬಾಳಿಕೆ ನಡೆಸುತ್ತಿವೆ ಎಂದು ಆರೋಪಿಸಿದ್ದಾರೆ.

    ನಮಾಜ್ ಮಾಡಲು ಅವಕಾಶ ಕೊಡದ ಚೀನಾ ಕಂಪನಿಗಳ ವಿರುದ್ಧ ಪಾಕಿಸ್ತಾನಿಗಳು ತಿರುಗಿಬೀಳಬೇಕು. ಇಲ್ಲಿನ ಕಾನೂನನ್ನು ಬದಲಿಸಲು ಬರಬೇಡಿ ಎಂದು ಅವರಿಗೆ ಖಡಕ್​ ಎಚ್ಚರಿಕೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

    ಚೀನಾ ಕಂಪನಿಗಳ ಮಾಲೀಕರು ತಮ್ಮಲ್ಲಿನ ಮುಸ್ಲಿಂ ಉದ್ಯೋಗಿಗಳಿಗೆ ಬೆದರಿಕೆ ಹಾಕುತ್ತಿದ್ದಾರೆ. ಡ್ಯೂಟಿ ಟೈಂನಲ್ಲಿ ನಮಾಜ್​ ಮಾಡಿದರೆ ಕೆಲಸದಿಂದ ತೆಗೆಯುತ್ತೇವೆಂದು ಹೆದರಿಸುತ್ತಿದ್ದಾರೆ. ಆದರೆ ಮುಸ್ಲಿಮರಿಗೆ ನಮಾಜ್​ ತುಂಬ ಪವಿತ್ರವಾದದ್ದು. ಯಾವ ಕಾರಣಕ್ಕೂ ಅದನ್ನು ನಾವು ನಿರ್ಲಕ್ಷಿಸಲು ಸಾಧ್ಯವೇ ಇಲ್ಲ. ಸಮಯಕ್ಕೆ ಸರಿಯಾಗಿ ನಮಾಜ್​ ಮಾಡಬೇಕು. ಅದು ನಮ್ಮ ಆತ್ಮಾಭಿಮಾನದ ಪ್ರಶ್ನೆ ಎಂದಿದ್ದಾರೆ. ಇದನ್ನೂ ಓದಿ: 10 ವರ್ಷದ ಮಗನ ಆತ್ಮಹತ್ಯೆಯಿಂದ ಶಾಕ್​ಗೆ ಒಳಗಾದ ತಾಯಿಯೂ ಸೂಸೈಡ್​ ಮಾಡಿಕೊಂಡರು…

    ಪಾಕಿಸ್ತಾನದೊಂದಿಗೆ ಚೀನಾ ಉತ್ತಮ ಸಂಬಂಧ ಕಾಯ್ದುಕೊಂಡು ಬಂದಿದೆ. ಪಾಕಿಸ್ತಾನ ಕೂಡ ಚೀನಾ ತನ್ನ ಸಾರ್ವಕಾಲಿಕ ಮಿತ್ರ ಎಂದು ಹೇಳಿಕೊಳ್ಳುತ್ತದೆ. ಈ ಮಧ್ಯೆ ಧರ್ಮಗುರುವಿನ ಈ ಮಾತುಗಳು ಅಚ್ಚರಿಗೆ ಕಾರಣವಾಗಿದೆ.(ಏಜೆನ್ಸೀಸ್​)

    ಇಂದೂ ರಾಜ್ಯಕ್ಕೆ ಶಾಕ್​ ಕೊಟ್ಟ ಕೊವಿಡ್​-19; 14 ಸಾವಿರದ ಗಡಿ ದಾಟಿದ ಸೋಂಕಿತರ ಸಂಖ್ಯೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts