ಚಿಂಚೋಳಿ: ಮಿರಿಯಾಣ ಬಳಿ ಬುಧವಾರ ನಿಂತ ಲಾರಿಗೆ ದ್ವಿಚಕ್ರ ವಾಹನ ಡಿಕ್ಕಿ ಹೊಡೆದು ಸವಾರ ತೆಲಂಗಾಣದ ನಾಗರಕರ್ನೂಲ್ ನಿವಾಸಿ ಲಕ್ಷö್ಮಣ ನಾರಾಯಣ (40) ಮೃತಪಟ್ಟಿದ್ದಾನೆ.
ಚಿಂಚೋಳಿ ಮೂಲಕ ತಾಂಡೂರಿಗೆ ಬೈಕ್‌ನಲ್ಲಿ ಹೊರಟಿದ್ದಾಗ ಲಾರಿಗೆ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದ. ವಿಕಾರಾಬಾದ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಗುರುವಾರ ಕೊನೆಯುಸಿರೆಳೆದಿದ್ದಾನೆ. ಪಿಎಸ್‌ಐ ಎ.ಎಸ್. ಪಟೇಲ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಮಿರಿಯಾಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.