More

    ಬೆಳ್ಳಿ ಗೆದ್ದರೂ ಖುಷಿ ಪಡದೆ ಅಳುತ್ತಾ, ಕ್ಷಮೆ ಕೇಳಿದ ಕ್ರೀಡಾಪಟುಗಳು! 17 ವರ್ಷಗಳ ದಾಖಲೆ ಮುರಿದುಬಿತ್ತು!

    ಟೋಕಿಯೋ: ಜಪಾನ್​ನ ರಾಜಧಾನಿ ಟೋಕಿಯೋದಲ್ಲಿ ಒಲಿಂಪಿಕ್ಸ್​ ಕ್ರೀಡಾಕೂಟ ನಡೆಯುತ್ತಿದೆ. ಅಲ್ಲಿ ಜೋಡಿ ಆಟವೊಂದರಲ್ಲಿ ಬೆಳ್ಳಿ ಪದಕ ಗೆದ್ದ ಜೋಡಿಯೊಂದು, ಕಣ್ಣೀರು ಹಾಕುತ್ತಾ, ತಮ್ಮ ರಾಷ್ಟ್ರದ ಜನರಲ್ಲಿ ಕ್ಷಮೆ ಯಾಚಿಸಿದೆ. ಅಷ್ಟಕ್ಕೂ ಅದಕ್ಕೆಲ್ಲ ಕಾರಣವೇನೆಂದು ತಿಳಿಯಲು ಮುಂದೆ ಓದಿ.

    ಟೇಬಲ್​ ಟೆನ್ನಿಸ್​ ಚೀನಾದಲ್ಲಿ ಅತ್ಯಂತ ಪ್ರಸಿದ್ಧ ಆಟ. ಟೇಬಲ್ ಟೆನ್ನಿಸ್ ಅನ್ನು ಅಧಿಕೃತ ಒಲಿಂಪಿಕ್ ಸ್ಪರ್ಧೆಯಾಗಿ 1988ರ ಸಿಯೋಲ್ ಒಲಿಂಪಿಕ್ ಕ್ರೀಡಾಕೂಟದಲ್ಲಿ ಸೇರಿಸಿದಾಗಿನಿಂದ 2016ರ ರಿಯೊ ಒಲಿಂಪಿಕ್ ಕ್ರೀಡಾಕೂಟದವರೆಗೆ ಒಟ್ಟು 32 ಚಿನ್ನದ ಪದಕಗಳಲ್ಲಿ ಚೀನಾ ಬರೋಬ್ಬರಿ 28 ಚಿನ್ನದ ಪದಕಗಳನ್ನು ತನ್ನದಾಗಿಸಿಕೊಂಡಿದೆ. 2004ರಲ್ಲಿ ಒಮ್ಮೆ ಜೋಡಿ ಟೇಬಲ್ ಟೆನ್ನಿಸ್​ನಲ್ಲಿ ಚೀನಾ ಚಿನ್ನ ಮಿಸ್ ಮಾಡಿಕೊಂಡಿತ್ತು.

    ಅದಾದ ನಂತರ ಸತತ 17 ವರ್ಷಗಳ ಕಾಲ ಟೇಬಲ್ ಟೆನ್ನಿಸ್​ನಲ್ಲಿ ಚೀನಾ ಚಿನ್ನವನ್ನು ಗೆಲ್ಲುತ್ತಲೇ ಬಂದಿತ್ತು. ಆದರೆ ಈ ವರ್ಷ ದುರಾದೃಷ್ಟವೆಂಬಂತೆ ಟೇಬಲ್ ಟೆನ್ನಿಸ್ ಜೋಡಿ ಫೈನಲ್ಸ್​ನಲ್ಲಿ ಜಪಾನ್​ನ ಆಟಗಾರರು ಚೀನಾದ ಆಟಗಾರರನ್ನು ಸೋಲಿಸಿದ್ದಾರೆ. ಚೀನಾಕ್ಕೆ ಚಿನ್ನದ ಬದಲಾಗಿ ಬೆಳ್ಳಿ ಪದಕ ಸಿಕ್ಕಿದೆ.

    ಸೋತ ಚೀನಾದ ಕ್ರೀಡಾಪಟುಗಳಾದ ಕ್ಸು ಕ್ಸಿನ್ ಮತ್ತು ಲಿಯು ಶಿವೆನ್ ಈ ವಿಚಾರವಾಗಿ ದೇಶದ ಜನತೆಯಲ್ಲಿ ಕ್ಷಮೆ ಯಾಚಿಸಿದ್ದಾರೆ. ನಾವು ಮಾಡಿರುವ ತಪ್ಪಿಗೆ ನೀವು ಬೇಸರವಾಗಬೇಡಿ, ನಮ್ಮನ್ನು ಕ್ಷಮಿಸಿಬಿಡಿ ಎಂದು ಕೇಳಿಕೊಂಡಿದ್ದಾರೆ. (ಏಜೆನ್ಸೀಸ್)

    ರಾಜ್ಯದಲ್ಲಿಂದು 1,531 ಕರೊನಾ ಕೇಸ್; 19 ಜಿಲ್ಲೆಗಳಲ್ಲಿ ಮರಣ ಪ್ರಕರಣ ‘ಶೂನ್ಯ’

    2020ರಲ್ಲಿ ಎರಡೆರೆಡು ಬಾರಿ ಜನಿಸಿದ ನಟ ಮಿಲಿಂದ್ ಸೋಮನ್?!

    ಪಾಕಿಸ್ತಾನದ ಕರಾಚಿಯಲ್ಲಿ ಇಬ್ಬರು ಚೀನಾ ಪ್ರಜೆಗಳ ಮೇಲೆ ಗುಂಡಿನ ದಾಳಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts