More

    ಚೀನಾದ ಹುಬೈ ಪ್ರಾಂತ್ಯದಲ್ಲಿ ಏರುತ್ತಲೇ ಇದೆ ಕೊರೊನಾ ಸೋಂಕಿತರ ಸಂಖ್ಯೆ; ಇದುವರೆಗೆ ಮೃತಪಟ್ಟವರು 1600 ಮಂದಿ, ರೋಗ ನಿರ್ಣಯದ ವಿಧಾನ ತಿಳಿಸಿ ಎಂದ ಡಬ್ಲ್ಯೂಎಚ್​ಒ

    ಬೀಜಿಂಗ್​: ಚೀನಾದಲ್ಲಿ ಕೊರೊನಾ ವೈರಸ್​ (COVID-19) ಹತೋಟಿ ತುಂಬ ಕಷ್ಟವಾಗುತ್ತಿದ್ದು ಅತ್ಯಧಿಕ ಪ್ರಮಾಣದಲ್ಲಿ ವೈರಸ್ ಸೋಂಕು ತಗುಲಿರುವ ಹುಬೈ ಪ್ರಾಂತ್ಯದಲ್ಲಿ 139 ಮಂದಿ ಸಾವನ್ನಪ್ಪಿದ್ದಾಗಿ ಭಾನುವಾರ ವರದಿಯಾಗಿದೆ. ಅಲ್ಲಿಗೆ ಒಟ್ಟು ಸಾವಿನ ಸಂಖ್ಯೆ 1600ಕ್ಕೆ ಏರಿದೆ.

    ಹುಬೈ ಪ್ರಾಂತ್ಯದಲ್ಲಿ ಕೊರೊನಾ ವೈರಸ್​ ಬಗ್ಗೆ ಪ್ರತಿದಿನವೂ ಅಲ್ಲಿನ ಆರೋಗ್ಯ ಇಲಾಖೆ ಮಾಹಿತಿ ನೀಡುತ್ತಿದೆ. ಹುಬೈನಲ್ಲಿ ಸೋಂಕು ತಗುಲುವ ಪ್ರಮಾಣ ಗಣನೀಯವಾಗಿ ಕಡಿಮೆಯಾಗುತ್ತಿದೆ ಎಂದು ಇಲಾಖೆ ವರದಿ ನೀಡಿದ ಮೂರನೇ ದಿನ ಅಂದರೆ, ಭಾನುವಾರ ಸುಮಾರು 1834 ಜನರಿಗೆ ಹೊಸದಾಗಿ ಕೊರೊನಾ ವೈರಸ್​ ತಗುಲಿದ್ದಾಗಿ ಹೆಲ್ತ್​ ಕಮಿಷನ್​ ತಿಳಿಸಿದೆ.

    ಕೊರೊನಾ ವೈರಸ್​ ಮೊದಲು ಕಾಣಿಸಿಕೊಂಡಿದ್ದು ಚೀನಾದ ಹುಬೈ ಪ್ರಾಂತ್ಯದ ವುಹಾನ್​ನಲ್ಲಿ. ಡಿಸೆಂಬರ್​ನಲ್ಲಿ ಶುರುವಾದ ಈ ಮಾರಿ ಈಗ ವಿಶ್ವದಾದ್ಯಂತ ಹಲವು ದೇಶಗಳಿಗೆ ಕಾಲಿಟ್ಟಿದೆ. ಬರೀ ಚೀನಾ ಅಲ್ಲದೆ ಬೇರೆ ದೇಶಗಳಲ್ಲೂ ಹಲವರು ಮೃತಪಟ್ಟಿದ್ದಾರೆ. ಒಂದಷ್ಟು ಜನ ವೈರಸ್​ ಸೋಂಕಿತರು ಇದ್ದಾರೆ. ಒಟ್ಟಾರೆ ಸುಮಾರು 1662 ಮಂದಿ ಕೊರೊನಾಕ್ಕೆ ಬಲಿಯಾಗಿದ್ದಾಗಿ ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.  ಒಟ್ಟಾರೆ 68,000 ಜನರು ಕೊರೊನಾ ವೈರಸ್ ಪೀಡಿತರಾಗಿದ್ದಾರೆ ಎಂದು ಹೇಳಲಾಗಿದೆ.

    ಕೊರೊನಾ ವೈರಸ್​ ತಗುಲಿದೆ ಎಂದು ನಿರ್ಣಯಿಸಲಾಗುತ್ತಿರುವ ವಿಧಾನದ ಬಗ್ಗೆ ವಿವರಣೆ ನೀಡುವಂತೆ ಚೀನಾವನ್ನು ಕೇಳಲಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್​​ಒ) ಮುಖ್ಯಸ್ಥ ಟೆಡ್ರೊಸ್ ಅಧಾನಮ್ ಘೆಬ್ರೆಯೆಸಸ್ ತಿಳಿಸಿದ್ದಾರೆ. (ಪಿಟಿಐ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts