More

    ಭಾರತವನ್ನು ಮಣಿಸುವ ಗುರಿ, ಭೂತಾನ್​ನೊಂದಿಗೆ ಚೀನಾ ಕಿತಾಪತಿ

    ನವದೆಹಲಿ: ಲಡಾಖ್​ನ ಪೂರ್ವಭಾಗದಲ್ಲಿ ಪ್ಯಾಂಗಾಂಗ್​ ತ್ಸೂ ಸರೋವರದ ಬಳಿಯ ತನ್ನ ಅತಿಕ್ರಮಣವನ್ನು ಒಪ್ಪುವಂತೆ ಭಾರತವನ್ನು ಮಣಿಸಲೇಬೇಕು ಎಂದು ಚೀನಾ ಹಟಕ್ಕೆ ಬಿದ್ದಿದೆ. ಇದಕ್ಕಾಗಿ ಅದು ಒಳದಾರಿಗಳನ್ನು ಹುಡುಕಲು ಆರಂಭಿಸಿದೆ.

    ಇದೀಗ ಅದಕ್ಕೆ ಸಿಕ್ಕಿರುವ ಒಂದು ಅವಕಾಶದಲ್ಲಿ ಪುಟಾಣಿ ರಾಷ್ಟ್ರ ಭೂತಾನ್​ನೊಂದಿಗೆ ಪೂರ್ವ, ಪಶ್ಚಿಮ ಮತ್ತು ಮಧ್ಯ ಭಾಗದಲ್ಲಿ ಗಡಿ ವಿವಾದ ಇದೆ. ಇದು ತುಂಬಾ ಹಿಂದಿನಿಂತಲೂ ಇರುವಂಥದ್ದು. ಅದನ್ನು ಇತ್ಯರ್ಥ ಪಡಿಸಿಕೊಳ್ಳಲು ಈಗ ಚೀನಾ ನಿರ್ಧರಿಸಿದೆ. ಹಾಗಾಗಿ ಇದರಲ್ಲಿ ಮೂರನೆಯವರು ಯಾರೂ ಮಧ್ಯಪ್ರವೇಶಿಸಬಾರದು ಎಂದು ಪರೋಕ್ಷವಾಗಿ ಭಾರತವನ್ನು ಉಲ್ಲೇಖಿಸಿ ಚೀನಾ ಹೇಳಿಕೆ ನೀಡಿದೆ.

    ಇದನ್ನೂ ಓದಿ: 100 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಮುಚ್ಚಿದ ಗಡಿ!

    ಭೂತಾನ್​ ಭಾರತದ ಅರುಣಾಚಲಪ್ರದೇಶದೊಂದಿಗೆ ಗಡಿ ಹಂಚಿಕೊಂಡಿದೆ. ಇದೇ ಅರುಣಾಚಲ ಪ್ರದೇಶವನ್ನು ದಕ್ಷಿಣ ಟಿಬೆಟ್​ನ ಭಾಗ ಎಂದು ಪ್ರತಿಪಾದಿಸುತ್ತಿರುವ ಚೀನಾ, ಈ ಭಾಗವನ್ನು ಲಪಟಾಯಿಸಲು ಲಗಾಯ್ತಿನಿಂದಲೂ ಪ್ರಯತ್ನಿಸುತ್ತಲೇ ಇದೆ. ಇದೀಗ ಭಾರತ ಮತ್ತು ಭೂತನ್​ ನಡುವೆ ಇರುವ ಸ್ನೇಹ ಮತ್ತು ಸೌಹಾರ್ದ ಸಂಬಂಧವನ್ನು ಹದಗೆಡಿಸಿಯಾದರೂ, ಪೂರ್ವ ಲಡಾಖ್​ನ ತನ್ನ ಅತಿಕ್ರಮಣವನ್ನು ಒಪ್ಪಿಕೊಳ್ಳುವಂತೆ ಭಾರತವನ್ನು ಮಣಿಸಬೇಕು ಎಂಬ ಪ್ರಯತ್ನವನ್ನು ಅದು ಆರಂಭಿಸಿದೆ.

    ಜೂನ್​ನಲ್ಲಿ ಭಾರತದ ಉಪಸ್ಥಿತಿಯಲ್ಲಿ ನಡೆದ ಬಹು ಆಯಾಮದ ವೇದಿಕೆಯ ಸಭೆಯಲ್ಲಿ ಕೂಡ ಚೀನಾ ಈ ವಿಷಯವನ್ನು ಪ್ರಸ್ತಾಪಿಸಿತ್ತು. ತಮ್ಮ ದೇಶದ ಪೂರ್ವಭಾಗದ ಗಡಿ ವಿಷಯವಾಗಿ ಭೂತಾನ್​ನೊಂದಿಗೆ ವಿವಾದ ಇದೆ ಎಂದು ಹೇಳಿತ್ತು. ತನ್ಮೂಲಕ ಅದು ಭಾರತ ಮತ್ತು ಭೂತಾನ್​ ನಡುವೆ 2006ರಲ್ಲಿ ಏರ್ಪಟ್ಟಿರುವ ಗಡಿ ಗುರುತಿಸುವ ಒಪ್ಪಂದವನ್ನೂ ಒಪ್ಪಲು ಅದು ನಿರಾಕರಿಸುವ ಸಾಧ್ಯತೆ ದಟ್ಟವಾಗಿದೆ.

    ಡಿಫೆನ್ಸ್​ ಸ್ಟ್ಯಾಂಡಿಂಗ್ ಕಮಿಟಿಯ 11 ಸಭೆಗಳಿಗೆ ಹಾಜರಾಗಿಲ್ಲ ರಾಹುಲ್ ಗಾಂಧಿ: ಆದರೂ ಸೇನೆಯನ್ನು ಟೀಕಿಸ್ತಿದ್ದಾರೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts