More

  ಅಣೆಕಟ್ಟೆ ಆತಂಕ ಬೇಡ ಎಂದ ಚೀನಾ; ಟಿಬೆಟ್​ನಲ್ಲಿ ಬೃಹತ್ ಡ್ಯಾಂ ನಿರ್ಮಾಣ ಕುರಿತು ಸ್ಪಷ್ಟನೆ

  ಬೀಜಿಂಗ್: ಬ್ರಹ್ಮಪುತ್ರ ನದಿಗೆ ಟಿಬೆಟ್​ನಲ್ಲಿ ಬೃಹತ್ ಅಣೆಕಟ್ಟೆ ನಿರ್ಮಾಣ ಯೋಜನೆ ಕೈಗೊಂಡಿರುವ ಚೀನಾ, ಈ ಕುರಿತು ಗುರುವಾರ ಸ್ಪಷ್ಟನೆ ನೀಡಿದೆ. ಈ ಯೋಜನೆ ಕುರಿತು ನೆರೆಯ ದೇಶಗಳು ಆತಂಕಪಡುವ ಅಗತ್ಯವಿಲ್ಲ. ಭಾರತ ಹಾಗೂ ಬಾಂಗ್ಲಾದೇಶದೊಂದಿಗೆ ಚೀನಾ ಉತ್ತಮ ಸಂಬಂಧ ಹೊಂದಿದೆ. ಅಣೆಕಟ್ಟೆ ಯೋಜನೆಗೆ ಸಂಬಂಧಿಸಿದ ಮಾಹಿತಿಯನ್ನು ಎರಡೂ ರಾಷ್ಟ್ರಕ್ಕೆ ಸೂಕ್ತ ಸಮಯದಲ್ಲಿ ನೀಡಲಾಗುವುದು. ನದಿ ತೀರದ ಪ್ರದೇಶದಲ್ಲಿ ಆತಂಕ ಪಡುವ ಅಗತ್ಯವಿಲ್ಲ ಎಂದು ಪವರ್ ಕಾಪೋರೇಷನ್ ಆಫ್ ಚೀನಾದ ಅಧ್ಯಕ್ಷ ಯಾಂಗ್ ಷಿಯಾಂಗ್ ತಿಳಿಸಿದ್ದಾರೆ.

  ಈ ಯೋಜನೆಯನ್ನು ವೈಜ್ಞಾನಿಕವಾಗಿ ನಿರ್ವಿುಸಲಾಗುತ್ತದೆ. ಎಲ್ಲ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ವಿದ್ಯುತ್ ಹಾಗೂ ನೀರಿನ ಉದ್ದೇಶಕ್ಕೆ ಮಾತ್ರ ಈ ಯೋಜನೆಯನ್ನು ಬಳಸಲಾಗುತ್ತದೆ. ಈ ವಿಚಾರದಲ್ಲಿ ಚೀನಾ ಜವಾಬ್ದಾರಿಯಿಂದ ವರ್ತಿಸಲಿದೆ. ನದಿಯ ಕೆಳಪಾತ್ರದ ಪ್ರದೇಶಗಳ ಹಿತವನ್ನು ಗಮನದಲ್ಲಿಟ್ಟುಕೊಂಡೇ ಯೋಜನೆ ತಯಾರಿಸಲಾಗಿದೆ ಎಂದು ಚೀನಾ ವಿದೇಶಾಂಗ ಸಚಿವರು ತಿಳಿಸಿದ್ದಾರೆ. ಬ್ರಹ್ಮಪುತ್ರಾ ನದಿ ಚೀನಾ, ಭಾರತ, ಬಾಂಗ್ಲಾದೇಶ ಮೂಲಕ ಹರಿದು ಬಂಗಾಳ ಕೊಲ್ಲಿಯನ್ನು ಸೇರುತ್ತದೆ. ಮೂರೂ ದೇಶಗಳಿಂದ 3800 ಕಿಮೀ ಉದ್ದವನ್ನು ಇದು ಹೊಂದಿದೆ. ಟಿಬೆಟ್​ನಲ್ಲಿ ಈ ನದಿಗೆ ಚೀನಾ ಬೃಹತ್ ಅಣೆಕಟ್ಟೆ ನಿರ್ಮಾಣ ಮಾಡುತ್ತಿರುವುದು ಭಾರತದ ಆತಂಕಕ್ಕೆ ಕಾರಣವಾಗಿದೆ. ಗಡಿ ತಂಟೆ ಬಳಿಕ ಈಗ ಮತ್ತೊಂದು ರೀತಿಯಲ್ಲಿ ಭಾರತಕ್ಕೆ ತೊಂದರೆ ಮಾಡಲು ಚೀನಾ ಮುಂದಾಗಿದೆ ಎಂಬ ಮಾತು ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ಚೀನಾ ಸ್ಪಷ್ಟನೆ ನೀಡಿದೆ.

  ಭಾರತದ ಪ್ರತಿಕ್ರಿಯೆ

  ಚೀನಾ ನಡೆಸುತ್ತಿರುವ ಯೋಜನೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಭಾರತದ ಹಿತಾಸಕ್ತಿಯನ್ನು ರಕ್ಷಿಸಲು ಚೀನಾ ಜತೆ ಮಾತುಕತೆ ನಡೆಸಲಾಗುವುದು ಎಂದು ವಿದೇಶಾಂಗ ಸಚಿವಾಲಯ ವಕ್ತಾರ ಅನುರಾಗ್ ಶ್ರೀವಾಸ್ತವ್ ಹೇಳಿದ್ದಾರೆ. ತಮ್ಮ ಯೋಜನೆಯಿಂದ ನದಿಯ ದಿಕ್ಕು ಬದಲಾಗುವುದಿಲ್ಲ. ಇದು ನೀರಾವರಿ ಮತ್ತು ವಿದ್ಯುತ್ ಯೋಜನೆ ಮಾತ್ರ ಎಂದು ಚೀನಾ ಹಲವು ಬಾರಿ ಹೇಳಿಕೊಂಡಿದೆ. ಆದರೆ ಭಾರತ ಈ ಯೋಜನೆಯನ್ನು ಗಮನಿಸುತ್ತಿದೆ. ಅಗತ್ಯವಾದಲ್ಲಿ ರಾಜತಾಂತ್ರಿಕ ಮಾರ್ಗದ ಮೂಲಕವೂ ಮಾತುಕತೆ ನಡೆಸಲಾಗು ವುದು. ಕೆಳ ಪ್ರದೇಶದಲ್ಲಿರುವ ಜನರಿಗೂ ನದಿಯ ಮೇಲೆ ಸಮಾನವಾದ ಹಕ್ಕಿದೆ. ಇಲ್ಲಿನ ಜನರ ಹಿತಾಸಕ್ತಿಯನ್ನು ಗಮನದಲ್ಲಿ ಟ್ಟುಕೊಂಡು ಸರ್ಕಾರ ಮುಂದಿನ ಕ್ರಮ ಕೈಗೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts