More

    ಭಾರತದ ಮೇಲೆ ದಾಳಿಗೆ ಯುದ್ಧೋಪಕರಣಗಳೊಂದಿಗೆ ಸಜ್ಜಾಗಿದೆ ಚೀನಾ

    ನವದೆಹಲಿ: ಲಡಾಖ್​ ಪ್ರದೇಶದ ಗಲ್ವಾನ್​ ಕಣಿವೆಯ ಮೂರು ಕಡೆ ಹಾಗೂ ಪ್ಯಾಂಗಾಂಗ್​ ತ್ಸೊ ಬಳಿ ಒಂದು ಕಡೆ ಸೈನ್ಯ ಜಮಾವಣೆ ಮಾಡಿ ಯುದ್ಧೋನ್ಮಾದದಲ್ಲಿರುವ ಚೀನಾ ಯುದ್ಧೋಪಕರಣಗಳನ್ನು ಕೂಡ ಸಜ್ಜುಗೊಳಿಸಿಕೊಂಡು ಭಾರತದ ಮೇಲೆ ದಾಳಿಗೆ ಸನ್ನದ್ಧವಾಗಿದೆ. ವಾಸ್ತವ ಗಡಿರೇಖೆ (ಎಲ್​ಎಸಿ) ಬಳಿಯ ಉಪಗ್ರಹ ಚಿತ್ರ ಈ ವಿಷಯವನ್ನು ಖಚಿತಪಡಿಸಿದೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.

    ಉಪಗ್ರಹ ಚಿತ್ರಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಚೀನಾ ಯಾವುದೇ ಕ್ಷಣದಲ್ಲಿ ಭಾರತದ ಪಾಳೆಯದ ಮೇಲೆ ದಾಳಿ ಮಾಡಲು ಅನುಕೂಲವಾಗುವಂತೆ ಭಾರಿ ಸಂಖ್ಯೆಯ ಯುದ್ಧೋಪಕರಣಗಳನ್ನು ಸಜ್ಜಗೊಳಿಸಿಕೊಂಡಿರುವುದು ತಿಳಿಯುತ್ತದೆ ಎಂದು ಹೇಳಿವೆ.

    ಯುದ್ಧೋಪಕರಣಗಳು ಗೋಚರಿಸದಂತೆ ಮರೆ ಮಾಡಿದ್ದರೂ ಕನಿಷ್ಠ 16 ಟ್ಯಾಂಕ್​ಗಳು ಸೇರಿ ಪದಾತಿ ದಳದ ದಾಳಿಗೆ ಸಹಕರಿಸುವ ಹಲವು ಉಪಕರಣಗಳು, ಫ್ಲಾಟ್​ಬೆಡ್​ ಟ್ರಕ್​ಗಳು, ಬಂಕರ್​ ನಿರ್ಮಾಣಕ್ಕೆ ಸಹಕರಿಸುವ ಎಕ್ಸ್​ಕವೇಟರ್​ಗಳು, ಡಂಪರ್​ ಟ್ರಕ್​ಗಳು ಸೇರಿ ಇನ್ನೂ ಹಲವು ಉಪಕರಣಗಳು ಉಪಗ್ರಹದ ಕಣ್ಣಿಗೆ ಕಾಣಿಸುತ್ತಿರುವುದಾಗಿ ತಿಳಿಸಿವೆ.

    ಇದನ್ನೂ ಓದಿ: ಭಾರತ-ಚೀನಾ ಗಡಿ ಘರ್ಷಣೆ: ಪ್ರಧಾನಿ ಮೋದಿಗೆ ಕರೆ ಮಾಡಿ ಡೊನಾಲ್ಡ್​ ಟ್ರಂಪ್​ ಚರ್ಚಿಸಿದ್ದೇನು?

    ಅಲ್ಲಲ್ಲಿ ಬಂಕರ್​ಗಳನ್ನು ನಿರ್ಮಿಸಲಾಗಿದ್ದು, ಮಷಿನ್​ಗನ್​ ಸಜ್ಜಿತ ಯೋಧರು ನಿರಂತರವಾಗಿ ಭಾರತದ ಗಡಿಯಲ್ಲಿನ ಯೋಧರ ಚಲನವಲನದ ಮೇಲೆ ನಿಗಾ ಇರಿಸಿರುವುದು ಕಂಡುಬರುತ್ತಿದೆ. ಇದನ್ನು ಗಮನಿಸಿದಾಗ ಯಾವುದೇ ಕ್ಷಣದಲ್ಲಿ ಭಾರತ ದಾಳಿ ಮಾಡಿದರೂ ಗಡಿಯನ್ನು ಸಮರ್ಥವಾಗಿ ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ಚೀನಾ ರಕ್ಷಣಾತ್ಮಕ ರಣತಂತ್ರ ಅನುಸರಿಸುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ ಎಂದು ಹೇಳಿವೆ.

    ಈ ಹಿನ್ನೆಲೆಯಲ್ಲಿ ಭಾರತ ಕೂಡ ಚೀನಾದ ದಾಳಿಯನ್ನು ಸಮರ್ಥವಾಗಿ ಹಿಮ್ಮೆಟ್ಟಿಸುವ ಮೂಲಕ ತನ್ನ ಗಡಿಯನ್ನು ಕಾಯ್ದುಕೊಳ್ಳಲು ಅನುವಾಗುವಂತೆ ಯೋಧರನ್ನು ಯುದ್ಧಸನ್ನದ್ಧ ಸ್ಥಿತಿಯಲ್ಲಿ ನಿಯೋಜನೆ ಮಾಡಿದೆ ಎಂದು ತಿಳಿಸಿವೆ.

    ಕಾಲಾಪಾನಿ ವಿಷಯವಾಗಿ ಮಾತುಕತೆಗೆ ಬನ್ನಿ, ನೇಪಾಳದ ಧಮ್ಕಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts