More

    ನಾಪತ್ತೆಯಾಗಿದ್ದ ಐವರು ಭಾರತೀಯರನ್ನು ಸೇನೆಗೆ ಹಸ್ತಾಂತರಿಸಿದ ಚೀನಾ ಪೀಪಲ್ಸ್​ ಲಿಬರೇಷನ್​ ಆರ್ಮಿ

    ನವದೆಹಲಿ: ಈ ತಿಂಗಳ ಆರಂಭದಲ್ಲಿ ಚೀನಾ ಗಡಿ ಸಮೀಪದ ಹಳ್ಳಿಯಿಂದ ನಾಪತ್ತೆಯಾಗಿದ್ದ ಐವರು ಭಾರತೀಯರನ್ನು ಚೀನಾ ಪೀಪಲ್ಸ್​ ಲಿಬರೇಷನ್​ ಆರ್ಮಿ (ಪಿಎಲ್​ಎ) ಭಾರತೀಯ ಸೇನೆಗೆ ಶನಿವಾರ ಬೆಳಗ್ಗೆ ಹಸ್ತಾಂತರಿಸಿದೆ.

    ಹಸ್ತಾಂತರ ಪ್ರಕ್ರಿಯೆಯು ಚೀನಾ ಪ್ರದೇಶದದಲ್ಲಿ ನಡೆದಿದ್ದು, ಐವರು ಭಾರತೀಯ ಗಡಿಗೆ ಬರಲು ಸುಮಾರು ಒಂದು ಗಂಟೆಗಳಿಗೂ ಅಧಿಕ ಸಮಯ ತೆಗೆದುಕೊಂಡಿತು. ಕಿಬಿತು ಬಾರ್ಡರ್​ ಪೋಸ್ಟ್​ನಿಂದ ಭಾರತೀಯರು ಅರುಣಾಚಲ ಪ್ರದೇಶಕ್ಕೆ ಪ್ರವೇಶ ನೀಡಿದರು.

    ಶುಕ್ರವಾರವಷ್ಟೇ ಟ್ವೀಟ್​ ಮಾಡಿದ್ದ ಕೇಂದ್ರ ಸಚಿವ ಕಿರಣ್​ ರಿಜಿಜು, ಭಾರತೀಯರನ್ನು ಹಸ್ತಾಂತರಿಸುವುದಾಗಿ ಚೀನಾದ ಪಿಎಲ್​ಎ ಭಾರತೀಯ ಸೇನೆಗೆ ಖಚಿತಪಡಿಸಿದೆ. ಹಸ್ತಾಂತರ ಪ್ರಕ್ರಿಯೆಯು ನಾಳೆ ಯಾವುದೇ ಸಮಯದಲ್ಲಿ ನಡೆಯಲಿದೆ ಎಂದು ತಿಳಿಸಿದ್ದರು.

    ಇದನ್ನೂ ಓದಿ: ನಿಮಗಾಗಿ ಸೇಫ್ಟಿ ಪ್ಯಾಡ್​ ಖರೀದಿಸಬಹುದಾದ ಹುಡುಗನನ್ನು ಪಡೆಯಿರಿ, ಕಾಂಡೋಮ್​ ಕೊಳ್ಳುವವನಲ್ಲ..!

    ಸೆಪ್ಟೆಂಬರ್​ 1ರಿಂದಲೂ ನಾಪತ್ತೆಯಾಗಿದ್ದ ಐವರು ಭಾರತೀಯರು ಬೇಟೆಗಾರರು ಎಂದು ಸೇನೆ ತನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿತ್ತು. ಆದರೆ, ಕುಟುಂಬ ಮತ್ತು ಸ್ಥಳೀಯರು ಮಾತನಾಡಿ ಅವರು ಬೇಟೆಗಾರರಲ್ಲ, ಕೂಲಿ ಆಳುಗಳು ಎಂದಿದ್ದರು. ಇದೇ ವಾರದ ಆರಂಭದಲ್ಲಿ ಚೀನಾದಲ್ಲಿ ಇರುವುದಾಗಿ ಚೀನಾ ಆರ್ಮಿ ಮಾಹಿತಿ ನೀಡಿತ್ತು.

    ಸೆಪ್ಟೆಂಬರ್​ 2ರಂದು ತಮ್ಮ ಅಜಾಗರೂಕತೆಯಿಂದ ಅಪ್ಪರ್​ ಸಬನ್​ಸಿರಿಯಲ್ಲಿರುವ ಭಾರತೀಯ ಗಡಿ ನಿಯಂತ್ರಣಾ ರೇಖೆಯಿಂದ ನಾಪತ್ತೆಯಾಗಿದ್ದ ಐವರು ಭಾರತೀಯರನ್ನು ಇಂಡಿಯನ್​ ಆರ್ಮಿ ನಿರಂತರ ಶ್ರಮದಿಂದಾಗಿ ಪತ್ತೆ ಹಚ್ಚಿದೆ. ಹಾಟ್​ಲೈನ್​ ಮೂಲಕ ಚೀನಾ ಆರ್ಮಿ ಸೆಪ್ಟೆಂಬರ್​ 8 ರಂದು ಪ್ರತಿಕ್ರಿಯೆ ನೀಡಿದ್ದು, ನಾಪತ್ತೆಯಾದವರು ಚೀನಾ ಭಾಗದಲ್ಲಿರುವುದಾಗಿ ಖಚಿತಪಡಿಸಿದೆ ಎಂದು ಇಂಡಿಯನ್​ ಆರ್ಮಿ ಮುಂಚೆಯೇ ಟ್ವೀಟ್​ ಮಾಡಿತ್ತು.

    ಇದೀಗ ಐವರು ಭಾರತೀಯರು ಸ್ವದೇಶಕ್ಕೆ ಮರಳಿದ್ದಾರೆ. ಇಂದು ಬೆಳಗ್ಗೆ ನಡೆದ ಹಸ್ತಾಂತರ ಪ್ರಕ್ರಿಯೆಯಲ್ಲಿ ಚೀನಾ ಭಾರತೀಯರನ್ನು ಬಿಟ್ಟು ಕಳುಹಿಸಿದೆ ಎಂದು ಸೇನೆ ಖಚಿತಪಡಿಸಿದೆ. (ಏಜೆನ್ಸೀಸ್​)

    ಒಂದು ತಿಂಗಳಿನಿಂದ ನಡೆಯುತ್ತಿದೆ ಸರ್ಕಾರಿ ಶಾಲೆ; ಲಾಕ್​ಡೌನ್​ ಲೆಕ್ಕಕ್ಕೇ ಇಲ್ಲ; ಅಧಿಕಾರಿಗಳಿಗೂ ಗೊತ್ತಿಲ್ಲ….!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts