More

    ಕರೊನಾ ವೈರಸ್​ ವಿರುದ್ಧ ಹೋರಾಟಕ್ಕೆ ಸಹಕಾರ: ಭಾರತಕ್ಕೆ 1,70,000 ಪಿಪಿಇ ಕಿಟ್​ಗಳನ್ನು ದಾನವಾಗಿ ನೀಡಿದ ಚೀನಾ

    ನವದೆಹಲಿ: ಕರೊನಾ ವಿರುದ್ಧ ಹೋರಾಟಕ್ಕೆ ನಾವು ಭಾರತಕ್ಕೆ ಏನೇ ಸಹಾಯ ಬೇಕಿದ್ದರೂ ನೀಡುತ್ತೇವೆ ಎಂದು ಹೇಳಿದ್ದ ಚೀನಾ ಅದರಂತೆ ನಡೆಯುತ್ತಿದೆ.

    ಕಳೆದ ನಾಲ್ಕೈದು ದಿನಗಳ ಹಿಂದೆ ಚೀನಾ 100ಕೋಟಿ ರೂಪಾಯಿ ಮೌಲ್ಯದ ವೈದ್ಯಕೀಯ ಉಪಕರಣಗಳನ್ನು ಭಾರತಕ್ಕೆ ನೀಡಿತ್ತು. ಈಗ ಚೀನಾ ಮತ್ತೊಂದು ಸಹಕಾರ ನೀಡಿದೆ. ಭಾರತದಲ್ಲಿ ಕರೊನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯಕೀಯ ಸಿಬ್ಬಂದಿಗಾಗಿ 1,70,000 ಪಿಪಿಇ(ವೈಯಕ್ತಿಕ ರಕ್ಷಣಾ ಸಾಧನಗಳು) ಕಿಟ್​ಗಳನ್ನು ದಾನವಾಗಿ ನೀಡಿದೆ.

    ಚೀನಾ ಸೋಮವಾರ 1,70,000 ಪಿಪಿಇ ಕಿಟ್​​ಗಳನ್ನು ನೀಡಿದೆ. ಹೆಚ್ಚುವರಿಯಾಗಿ 20,000 ದೇಶೀಯ ಕಿಟ್​ಗಳನ್ನು ಸೇರಿಸಿ ಒಟ್ಟು 1,90,000 ಕಿಟ್​ಗಳನ್ನು ವಿವಿಧ ಆಸ್ಪತ್ರೆಗಳಿಗೆ ವಿತರಿಸಲಾಗುವುದು ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಭಾರತದಲ್ಲಿ ಈಗಾಗಲೇ ಲಭ್ಯವಿರುವ 387,000 ಕಿಟ್​ಗಳ ಜತೆ ಈ 1,90,000 ಪಿಪಿಇ ಕಿಟ್​ಗಳು ಸೇರ್ಪಡೆಯಾಗಲಿವೆ ಎಂದು ಸಚಿವಾಲಯ ಮಾಹಿತಿ ನೀಡಿದೆ.

    ಭಾರತದಲ್ಲಿ ಮಾಸ್ಕ್​ಗಳು, ಪಿಪಿಇ ಕಿಟ್​ಗಳು ಅಗತ್ಯವಿರುವಷ್ಟು ಲಭ್ಯ ಇವೆಯಾ ಎಂಬ ಚರ್ಚೆ ಈಗಾಗಲೇ ಪ್ರಾರಂಭವಾಗಿತ್ತು. ಅದರ ಬೆನ್ನಲ್ಲೇ ಆರೋಗ್ಯ ಇಲಾಖೆ ಈ ಮಾಹಿತಿ ನೀಡಿದೆ.

    ಈ ಮಧ್ಯೆ ದೇಶದಲ್ಲೇ ತಯಾರು ಮಾಡಲಾದ 2,00,000 ಎನ್95 ಮಾಸ್ಕ್​ಗಳನ್ನು ವಿವಿಧ ಆಸ್ಪತ್ರೆಗಳಿಗೆ ಕಳಿಸಿಕೊಡಲಾಗಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts