More

    ವಧು ವರರ ಬಟ್ಟೆ ಬಿಚ್ಚುವುದು ಇಲ್ಲಿನ ಸಂಪ್ರದಾಯ! ಈ ದೇಶದ ಯುವಜನತೆಗೆ ಮದುವೆಯೇ ಶಾಪವಂತೆ!

    ಬೀಜಿಂಗ್​: ಆಯಾ ಪ್ರದೇಶಗಳಲ್ಲಿ ಬೇರೆ ಬೇರೆ ರೀತಿಯ ಸಂಪ್ರದಾಯವಿರುವುದು ಸಾಮಾನ್ಯ. ಈ ಒಂದು ದೇಶದಲ್ಲಿಯೂ ವಿಭಿನ್ನ ರೀತಿಯ ಸಂಪ್ರದಾಯವಿದೆ. ಇಲ್ಲಿನ ಮದುವೆಯ ಸಂಪ್ರದಾಯಗಳು ಹೇಗಿವೆಂದರೆ, ಯುವಜನತೆ ಮದುವೆ ಎನ್ನುವ ಪದ ಕೇಳಿದರೇ ಭಯ ಪಡುತ್ತದೆಯಂತೆ.

    ಹೌದು! ನಾವೀಗ ಮಾತನಾಡುತ್ತಿರುವುದು ಚೀನಾ ಬಗ್ಗೆಯೇ. ಚೀನಾದಲ್ಲಿ ಮದುವೆ ಎಂದರೆ ಅಲ್ಲಿನ ಯುವಜನತೆಗೆ ಅದೊಂದು ರೀತಿಯ ಶಾಪವಿದ್ದಂತಂತೆ. ಏಕೆಂದರೆ ಅಷ್ಟೊಂದು ವಿಚಿತ್ರ ಸಂಪ್ರದಾಯಗಳನ್ನು ಅಲ್ಲಿನ ಜನರು ಪಾಲಿಸುತ್ತಾರೆ. ಮದುವೆಯಾಗುವ ನವದಂಪತಿಗೆ ಬಟ್ಟೆ ಬಿಚ್ಚಿಸುವುದು, ಬೆತ್ತಲೆ ದೇಹದ ಮೇಲೆ ಇಂಕ್​ ಚೆಲ್ಲುವುದು, ಸಾರ್ವಜನಿಕವಾಗಿ ಮುತ್ತು ಕೊಡಿಸುವುದು ಹೀಗೆ ತರೇವಾರಿ ಸಂಪ್ರದಾಯಗಳು ಅವರಲ್ಲಿವೆಯಂತೆ.

    ಇತ್ತೀಚೆಗೆ ಇಂತಹ ವಿಚಿತ್ರ ಸಂಪ್ರದಾಯಗಳಿಗೆ ಅಲ್ಲಿನ ಸರ್ಕಾರ ನಿಷೇಧ ಹೇರಿದೆ. ಯಾವುದೇ ಕಾರಣಕ್ಕೂ ಸ್ನೇಹಿತರು ಮತ್ತು ಕುಟುಂಬಸ್ಥರು ವಧು ವರರಿಗೆ ಒತ್ತಾಯ ಮಾಡುವಂತಿಲ್ಲ, ಬಟ್ಟೆ ಬಿಚ್ಚಿಸುವಂತಿಲ್ಲ ಎಂದು ಆದೇಶ ಹೊರಡಿಸಲಾಗಿದೆ.

    ಈ ಹಿಂದೆ 2018ರಲ್ಲಿ 24 ವರ್ಷ ಯುವಕನ ಮದುವೆಯಲ್ಲಿ ಸ್ನೇಹಿತರ ಆತನ ಬಟ್ಟೆ ಬಿಚ್ಚಿಸಿ ಬೆತ್ತಲೆಗೊಳಿಸಿದ್ದರು. ಅವರಿಂದ ತಪ್ಪಿಸಿಕೊಳ್ಳಲು ಓಡಿದ್ದ ವರ ಕಾರೊಂದಕ್ಕೆ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದ. ಅದಕ್ಕೂ ಹಿಂದೆ ವಧುವೊಬ್ಬಳು ಈ ವಿಚಿತ್ರ ಸಂಪ್ರದಾಯಗಳಿಂದಾಗಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದಳು. (ಏಜೆನ್ಸೀಸ್​)

    ಲಾರಿಗಳ ಮಧ್ಯೆ ಸಿಲುಕಿ ಅಪ್ಪಚ್ಚಿಯಾದ ಬೊಲೆರೊ ಕಾರು! ಸ್ಥಳದಲ್ಲೇ ಮೃತಪಟ್ಟ ಮಹಿಳೆ

    ಲಾಕ್‌ಡೌನ್‌ ಅವಧಿಯಲ್ಲಿನ ಬಡ್ಡಿ, ಚಕ್ರಬಡ್ಡಿ ಮನ್ನಾ ವಿವಾದ: ಸುಪ್ರೀಂ‌ಕೋರ್ಟ್‌ ಏನು ಹೇಳಿದೆ ನೋಡಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts