More

    ಚೀನಾದಲ್ಲಿ ಕೊರೊನಾಗೆ ಜಿಂಜರ್​ ರೋಬೊ ಟ್ರೀಟ್​ಮೆಂಟ್​..!: ಕೊರೊನಾ ತಡೆಗೆ ಆಸ್ಪತ್ರೆಯಲ್ಲಿ ರೊಬೊಟ್​ಗಳ ಬಳಕೆ

    ಬೀಜಿಂಗ್​: ಚೀನಾದಲ್ಲಿ ಹುಟ್ಟಿದ ಡೆಡ್ಲಿ ಕೊರೊನಾ ವೈರಸ್​ಗೆ ಇನ್ನೂ ಔಷಧಿ ಕಂಡು ಹಿಡಿದಿಲ್ಲ. ಈಗಾಗಲೇ ಚೀನಾದಲ್ಲಿ 3,119 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಇದರಲ್ಲಿ ಚಿಕಿತ್ಸೆ ನೀಡುತ್ತಿರುವ ಡಾಕ್ಟರ್​​ಗಳು ಸೇರಿದ್ದಾರೆ. ವಿಶ್ವದಾದ್ಯಂತ 3,800ಕ್ಕೂ ಹೆಚ್ಚು ಮಂದಿ ಕೊರೊನಾದಿಂದ ಮೃತಪಟ್ಟಿದ್ದಾರೆ. ಸುಮಾರು 1 ಲಕ್ಷದ 10 ಸಾವಿರಕ್ಕೂ ಹೆಚ್ಚು ಜನರಿಗೆ ಸೋಂಕಿನಿಂದ ನರಳುತ್ತಿದ್ದಾರೆ.

    ಕೊರೊನಾ ವೈರಸ್ ಮಹಾಮಾರಿಯಿಂದ ಪಾರಾಗಲು ಚೀನಾ ಈಗ ರೊಬೋಟ್​ ತಂತ್ರಜ್ಞಾನದ ಮೊರೆಹೋಗಿದೆ. 5ಜಿ ಚಾಲಿತ ರೊಬೋಟ್​ಗಳ ಮೂಲಕ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ಶುರುಮಾಡಿದೆ. ವುಹಾನ್​ನ ವುಚಾಂಗ್ ಫೀಲ್ಡ್ ಆಸ್ಪತ್ರೆಯಲ್ಲಿ 6 ಇಂಟೆಲಿಜೆಂಟ್​ ರೊಬೋಟ್​ಗಳ ಮೂಲಕ ಶನಿವಾರದಿಂದ ಟ್ರೀಟ್​ಮೆಂಟ್ ಶುರುಮಾಡಲಾಗಿದೆ.

    ಈ ರೊಬೋಟ್​ಗಳು ಕೊರೊನಾ ಸೋಂಕಿತರ ಮೇಲೆ ತೀವ್ರ ನಿಗಾ ವಹಿಸುತ್ತಿವೆ. ವೈದ್ಯರ ಕೆಲಸದ ಒತ್ತಡವನ್ನ ಕಡಿಮೆ ಮಾಡಲು ಆರು ವಿಶೇಷ ರೊಬೋಟ್​ಗಳನ್ನು ಬಳಸಿಕೊಳ್ಳಲಾಗ್ತಿದೆ. ಈ ರೊಬೋಗಳು ರೋಗಿಗಳು ಮತ್ತು ವೈದ್ಯರ ನಡುವೆ ಸೋಂಕು ತಗುಲದಂತೆ ನಿಯಂತ್ರಿಸುವಲ್ಲಿ ಸಹಕಾರಿಯಾಗಲಿದೆ. ಹುಬೈ ಪ್ರಾಂತ್ಯದಲ್ಲಿ ಸುಮಾರು 3 ಸಾವಿರ ವೈದ್ಯಕೀಯ ಸಿಬ್ಬಂದಿ ಕೊರೊನಾ ವೈರಸ್ ಸೋಂಕಿನಿಂದ ಬಳಲುತ್ತಿದ್ದಾರೆ. ಹೀಗಾಗಿ ಈ ಬುದ್ಧಿವಂತ ರೊಬೋಗಳು ಆಸ್ಪತ್ರೆಯಲ್ಲಿ ರೋಗಿಗಳಿಗೆ ಊಟ, ತಿಂಡಿ ಕೊಡುವುದು, ಅವರ ದೇಹದ ತಾಪಮಾನ ಪರೀಕ್ಷೆ, ಆಸ್ಪತ್ರೆಯಲ್ಲಿ ಗಸ್ತು ತಿರುಗುವುದು ಸೇರಿ ಇನ್ನಿತರ ಡ್ಯೂಟಿ ಮೂಲಕ ಸೋಂಕು ನಿಯಂತ್ರಣಕ್ಕೆ ನೆರವಾಗಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ.

    ‘ಜಿಂಜರ್‘ ಎಂಬ ಹೆಸರಿನ ರೊಬೋ ಗುಂಪಿನೊಂದಿಗೆ ರೋಗಿಗಳ ಮುಂದೆ ಡ್ಯಾನ್ಸ್ ಮಾಡುತ್ತಿರುವ ಫೋಟೋ ಹಾಗೂ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ. ರೊಬೋ ಡ್ಯಾನ್ಸ್ ನೋಡಿ ರೋಗಿಗಳು ಕೂಡು ಫುಲ್ ಖುಷ್ ಆಗಿದ್ದಾರೆ. ಡಾಕ್ಟರ್ಸ್ ರಿಮೋಟ್ ಬಳಸಿ ರೊಬೋಗಳ ಮೂಲಕ ರೋಗಿಗಳ ಮಾಹಿತಿ ಪಡೆಯುತ್ತಿದ್ದಾರೆ.

    ಚೀನಾದ ಗಾಂಗ್ ಡಾಂಗ್ ಪ್ರಾಂತ್ಯದಲ್ಲೂ ಎರಡು ರೊಬೋಗಳನ್ನು ಕೊರೊನಾ ಸೋಂಕಿತರಿಗೆ ಔಷಧಿ ನೀಡುವುದು, ಅವರ ಹಾಸಿಗೆ ಮತ್ತು ಬೆಡ್ ಶೀಟ್​ ಬದಲಿಸುವುದು, ವೈದ್ಯಕೀಯ ತ್ಯಾಜ್ಯ ಸಂಗ್ರಹಕ್ಕೆ ಬಳಸಿಕೊಳ್ಳಲಾಗ್ತಿದೆ. ಚೀನಾದ ‘ಕ್ಲ್ವೌಡ್ ಮೈಂಡ್ಸ್’ ಎಂಬ ಟೆಕ್ ಕಂಪನಿ ಈ ಇಂಟೆಲಿಜೆಂಟ್ ರೊಬೋಗಳನ್ನು ಸೃಷ್ಟಿಸಿದೆ. 12 ರೊಬೋಟಿಕ್ ಸಾಧನಗಳನ್ನು ಆಸ್ಪತ್ರೆಗಳಿಗೆ ದಾನ ಮಾಡಿದೆ. ಕೊರೊನಾ ಮಹಾಮಾರಿಗೆ ಚಿಕಿತ್ಸೆ ನೀಡಲು ವುಹಾನ್​ನಲ್ಲಿ ಕೆಲವೇ ದಿನಗಳಲ್ಲಿ ಹೊಸ ಹೈಟೆಕ್ ಆಸ್ಪತ್ರೆಯನ್ನು ನಿರ್ಮಿಸಿದ್ದ ಚೀನಾ ಈಗ ಕೊರೊನಾ ಸೋಂಕಿತರಿಗಾಗಿ ರೊಬೋಗಳನ್ನು ಬಳಸಿಕೊಂಡಿರುವ ಅವರ ತಂತ್ರಜ್ಞಾನ ನೈಪುಣ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.(ಏಜನ್ಸೀಸ್)

    ಕೊರೊನಾ ವೈರಸ್ ಸೋಂಕಿನ ಭೀತಿಗೆ ಕರಗಿ ನೀರಾಯಿತು ಷೇರುಪೇಟೆ- ಒಂದೇ ದಿನ 1,941 ಅಂಶ ಕುಸಿದ ಸೆನ್ಸೆಕ್ಸ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts