More

    ಅಲಿಬಾಬಾ ಸರ್ವರ್‌ಗಳಿಂದ ಭಾರತೀಯ ಡೇಟಾ ಕಳವು, ಚೀನಾಕ್ಕೆ ರವಾನೆ!

    ನವದೆಹಲಿ: ಚೀನಾದ ಐಟಿ ದಿಗ್ಗಜ ಅಲಿಬಾಬಾ ಸಂಸ್ಥೆಯು ಭಾರತದಲ್ಲಿರುವ ಕನಿಷ್ಠ 72 ಸರ್ವರ್‌ಗಳಿಂದ ಭಾರತೀಯ ಬಳಕೆದಾರರ ದತ್ತಾಂಶಗಳನ್ನು ಚೀನಾಕ್ಕೆ ರವಾನಿಸುತ್ತಿದೆ ಎಂದು ಬೇಹುಗಾರಿಕೆ ಸಂಸ್ಥೆ ಮೂಲಗಳು ತಿಳಿಸಿವೆ.

    ಇದು ಚೀನಾದ ಅಧಿಕಾರಿಗಳ ವ್ಯವಸ್ಥಿತ ಸಂಚಾಗಿದೆ. ವ್ಯವಹಾರಗಳ ಒಪ್ಪಂದಗಳ ಮೌಲ್ಯಗಳನ್ನು ಉಲ್ಲಂಘಿಸಿ ಈ ರೀತಿ ಮಾಡಲಾಗುತ್ತಿದೆ. ಸಂಘ-ಸಂಸ್ಥೆಗಳಿಗೆ ಉಚಿತ ಟ್ರಯಲ್ ಅವಧಿಯನ್ನು ಈ ಸರ್ವರ್‌ಗಳು ನೀಡುತ್ತವೆ. ಅವುಗಳನ್ನು ಟ್ರ್ಯಾಪ್ ಮಾಡುವುದು ಅವುಗಳ ಹುನ್ನಾರವಾಗಿದೆ. ಒಮ್ಮೆ ಸಂಸ್ಥೆಗಳು ಸಂಪರ್ಕಕ್ಕೆ ಬಂದ ಮೇಲೆ ಅವುಗಳ ಎಲ್ಲ ಸೂಕ್ಷ್ಮ ಮಾಹಿತಿಗಳನ್ನು ಚೀನಾದಲ್ಲಿರುವ ಸರ್ವರ್‌ಗಳಿಗೆ ರವಾನಿಸಲಾಗುತ್ತದೆ. ಅಲಿಬಾಬಾ ಕ್ಲೌಡ್ ಡೇಟಾ ಸರ್ವರ್‌ಗಳು ತುಂಬಾ ಜನಪ್ರಿಯ. ಅವು ಐರೋಪ್ಯ ಸರ್ವರ್‌ಗಳಿಗಿಂತ ಅಗ್ಗವಾಗಿರುವುದೇ ಇದಕ್ಕೆ ಕಾರಣ. ಜೆನ್‌ಹುವಾ ಎಂಬ ಚೀನಾದ ಖಾಸಗಿ ತಂತ್ರಜ್ಞಾನ ಕಂಪನಿ ಭಾರತದ ಪ್ರಧಾನಿಯಿಂದ ಹಿಡಿದು 10,000ಕ್ಕೂ ಹೆಚ್ಚು ಗಣ್ಯರ ಡೇಟಾ ಮೇಲೆ ನಿಗಾ ಇಟ್ಟಿರುವ ಸ್ಫೋಟಕ ಮಾಹಿತಿ ಬಹಿರಂಗವಾಗಿರುವ ಬೆನ್ನಲ್ಲೇ ಈ ಅಂಶ ಬೆಳಕಿಗೆ ಬಂದಿದೆ. ಇದನ್ನೂ ಓದಿ: ‘ರಾಗಿಣಿ..ಸಿಂಹಿಣಿ ಇದ್ದ ಹಾಗೆ..ಎಲ್ಲವನ್ನೂ ಗೆದ್ದು ಬರುತ್ತಾಳೆ’

    ಚೀನಾದ ಕಂಪನಿಗಳು ಭಾರತದಲ್ಲಿ ಸೈಬರ್ ಬೇಹುಗಾರಿಕೆ ನಡೆಸುತ್ತಿರುವ ವಿಚಾರದಲ್ಲಿ ಶೀಘ್ರವೇ ತನಿಖೆ ನಡೆಸಲು ಕೇಂದ್ರ ಸರ್ಕಾರ ಯೋಚಿಸುತ್ತಿದೆ. ಶೆನ್‌ಜುನ್ ಸಂಗ್ರಹಿಸುತ್ತಿರುವ ಭಾರತೀಯರ ಡೇಟಾಗಳಿಂದ ದೇಶದ ಭದ್ರತೆ ಮೇಲೆ ಆಗಲಿರುವ ಪರಿಣಾಮದ ಗಹನತೆಯನ್ನು ಭಾರತೀಯ ಭದ್ರತಾ ಸಂಸ್ಥೆಗಳು ಅಂದಾಜು ಮಾಡುತ್ತಿವೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್‌ರ ಪರಿಶೀಲನೆಗಾಗಿ ವರದಿಯನ್ನು ತಯಾರಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

    ಈ ಮಧ್ಯೆ, ಪ್ಯಾಂಗಾಂಗ್ ಸರೋವರದ ಉತ್ತರ ದಂಡೆಯಲ್ಲಿ ಚೀನಾದ ಚಟುವಟಿಕೆಗಳು ಮುಂದುವರಿದಿವೆ. ದಕ್ಷಿಣ ದಂಡೆಯ ಸಮೀಪ ಹೊಸ ಪೋಸ್ಟ್‌ಗಳನ್ನು ಸೃಷ್ಟಿಸುತ್ತಿರುವುದೂ ಉಪಗ್ರಹ ಚಿತ್ರಗಳ ಮೂಲಕ ಸಾಬೀತಾಗಿದೆ. ಇಷ್ಟಾಗಿಯೂ ಆಗಸ್ಟ್ ಕೊನೆಯಲ್ಲಿ ನಡೆದ ವಿದ್ಯಮಾನಗಳಿಗೆ ಭಾರತವೇ ಹೊಣೆ ಎಂದು ಗೂಬೆ ಕೂರಿಸಲು ಚೀನಾ ಮುಂದಾಗಿದೆ. ಪೂರ್ವ ಲಡಾಖ್ ವಲಯದ ಎಲ್‌ಎಸಿಯಲ್ಲಿ ಯಥಾಸ್ಥಿತಿಯನ್ನು ಬದಲಾಯಿಸಲು ಚೀನಾ ಸೇನೆ ಆಗಸ್ಟ್ 29 ಮತ್ತು 30ರಂದು ಪ್ರಚೋದನಕಾರಿ ಚಟುವಟಿಕೆ ನಡೆಸಿತ್ತು. ಆದರೆ, ಎಲ್‌ಎಸಿಯಲ್ಲಿ ಭಾರತ ‘ನಿಸ್ಸಂಶಯವಾಗಿಯೂ ಕಾನೂನುಬಾಹಿರವಾಗಿ ಅತಿಕ್ರಮಣ ನಡೆಸಿತ್ತು’ ಎಂದು ಚೀನಾ ಸೋಮವಾರ ಆರೋಪಿಸಿದೆ. ಆದರೆ ಚೀನಾದ ಹೇಳಿಕೆಗೂ ಕೃತ್ಯಕ್ಕೂ ತಾಳಮೇಳ ಇಲ್ಲವೆನ್ನುವುದನ್ನು ಉಪಗ್ರಹಗಳಿಂದ ಲಭ್ಯವಾಗಿರುವ ಚಿತ್ರಗಳು ಸಾಬೀತು ಪಡಿಸಿವೆ. ಜೂನ್ 20ರಂದು ಗಲ್ವಾನ್ ಕಣಿವೆಯಲ್ಲಿ 20 ಭಾರತೀಯ ಸೈನಿಕರ ಸಾವಿಗೆ ಕಾರಣವಾದ ಭೀಷಣ ಕಾಳಗದ ನಂತರ ನಡೆದ ಮಿಲಿಟರಿ ಮಟ್ಟದ ಸಭೆಗಳಲ್ಲಿ ಮೂಡಿದ ಅಭಿಪ್ರಾಯದ ಹೊರತಾಗಿಯೂ 2020 ಏಪ್ರಿಲ್ ವೇಳೆಯ ಸ್ಥಾನಕ್ಕೆ ಚೀನಿ ಪಡೆಗಳು ಹಿಂದೆ ಸರಿದಿಲ್ಲ. ಇದನ್ನೂ ಓದಿ: ‘ಈಗಿದೆಲ್ಲ ಕಾಮನ್..ನಾವೂ ಕ್ಯಾಸಿನೋಕ್ಕೆ ಹೋಗಿದ್ವಿ, ಆದ್ರೆ…’ -ನಟ ದಿಗಂತ್​ ತಾಯಿ ಹೇಳಿದ್ದು ಹೀಗೆ

    ಆದರೆ ಈ ವರದಿಯನ್ನು ಚೀನಾ ಅಲ್ಲಗಳೆದಿದೆ. ಲಡಾಖ್‌ನ ಪ್ರಮುಖ ಸಂಘರ್ಷದ ಸ್ಥಳಗಳಲ್ಲಿ ಚೀನಿ ಪಡೆಗಳು ಫೈಬರ್ ಆಪ್ಟಿಕ್ ಕೇಬಲ್‌ಗಳನ್ನು ಸ್ಥಾಪಿಸುತ್ತಿವೆ ಎಂಬ ವರದಿಗಳನ್ನು ಚೀನಾದ ವಿದೇಶಾಂಗ ಸಚಿವಾಲಯ ನಿರಾಕರಿಸಿದೆ. ಉಭಯ ದೇಶಗಳು ರಾಜತಾಂತ್ರಿಕ ಮತ್ತು ಮಿಲಿಟರಿ ಅಧಿಕಾರಿಗಳ ಮೂಲಕ ಸಂವಹನವನ್ನು ಮುಂದುವರಿಸಲಿವೆ ಎಂದು ಸಚಿವಾಲಯದ ವಕ್ತಾರ ವಾಂಗ್ ವೆನ್‌ಬಿನ್ ಹೇಳಿದ್ದಾರೆ. ಪ್ಯಾಂಗಾಂಗ್ ಸರೋವರದ ದಕ್ಷಿಣ ದಂಡೆಯಲ್ಲಿ ಚೀನಿ ಪಡೆಗಳು ಫೈಬರ್ ಆಪ್ಟಿಕ್ ಕೇಬಲ್‌ ಸ್ಥಾಪಿಸುತ್ತಿರುವುದನ್ನು ಇಬ್ಬರು ಭಾರತೀಯ ಅಧಿಕಾರಿಗಳು ಗಮನಿಸಿದ್ದಾರೆಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿತ್ತು. ಪ್ಯಾಂಗಾಂಗ್ ಸರೋವರದ ಉತ್ತರ ದಂಡೆಯ ಮೇಲೆ ಕೂಡ ಕೇಬಲ್ ಸ್ಥಾಪಿಸಿರುವುದನ್ನು ಭಾರತದ ಬೇಹುಗಾರಿಕೆ ಪಡೆಗಳು ಒಂದು ತಿಂಗಳ ಹಿಂದೆ ಪತ್ತೆ ಮಾಡಿದ್ದವು.

    15ನೇ ಶತಮಾನದ ಶ್ರೀರಾಮ-ಸೀತಾ-ಲಕ್ಷ್ಮಣನ ವಿಗ್ರಹಗಳನ್ನು ಹಸ್ತಾಂತರಿಸಿದ ಯುಕೆ; ಯಾವಾಗ ಕಳವಾಗಿದ್ದವು ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts