More

    ಶುಚಿತ್ವಕ್ಕೆ ಮೊದಲ ಆದ್ಯತೆ ನೀಡಿ

    ಚಳ್ಳಕೆರೆ: ನಗರದ 31 ವಾರ್ಡ್‌ಗಳ ಖಾಲಿ ಜಾಗದಲ್ಲಿ ಬೆಳೆದಿರುವ ಜಾಲಿ ಗಿಡಗಳ ತೆರವು, ರಾಜ ಕಾಲುವೆಗಳ ಶುಚಿತ್ವಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ಶಾಸಕ ಟಿ.ರಘುಮೂರ್ತಿ, ನಗರಸಭೆ ಅಧಿಕಾರಿಗಳಿಗೆ ಸೂಚಿಸಿದರು.

    ಕರೊನಾ ವೈರಸ್ ನಿಯಂತ್ರಣಕ್ಕೆ ಕೈಗೊಂಡಿರುವ ಸ್ವಚ್ಛತಾ ಕಾರ್ಯಕ್ಕೆ ಸ್ಪಂದಿಸಿ, ಐದು ದಿನಗಳ ಕಾಲ ಜೆಸಿಬಿ ಸೇವೆ ಒದಗಿಸಲು ಮುಂದಾದ ಜೆಸಿಬಿ ಮಾಲೀಕರ ಸಹಕಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

    ಜೆಸಿಬಿಗಳನ್ನು ಸಮರ್ಪಕವಾಗಿ ಬಳಸಿಕೊಂಡು ಪ್ರತಿ ವಾರ್ಡ್‌ಗಳಲ್ಲಿನ ಜಾಲಿ ಗಿಡ, ರಾಜ ಕಾಲುವೆಗಳ ತ್ಯಾಜ್ಯ ತೆರವಿನ ಜತೆಗೆ ಪ್ರತಿ ಸಮುದಾಯಗಳ ರುದ್ರಭೂಮಿ ಸ್ವಚ್ಛತೆ ಕೈಗೊಳ್ಳಬೇಕು ಎಂದು ಸೂಚಿಸಿದರು.

    ಎಲ್ಲ ವಾರ್ಡ್‌ನಲ್ಲೂ ಖಾಲಿ ನಿವೇಶನಗಳಿದ್ದು ಅಲ್ಲಿ ಜಾಲಿ ಬೆಳೆದು ಹಂದಿಗಳ ವಾಸಸ್ಥಾನವಾಗಿ ಮಾರ್ಪಟ್ಟಿವೆ. ಈ ಬಗ್ಗೆ ಮಾಲೀಕರಿಗೆ ಒಮ್ಮೆ ನೋಟಿಸ್ ಜಾರಿ ಮಾಡಿ ಬಳಿಕ ಸ್ವಚ್ಛತಾ ಕಾರ್ಯ ಕೈಗೊಳ್ಳಿ. ಮುಖ್ಯವಾಗಿ ಲಾಕ್‌ಡೌನ್ ನಿಯಮದಂತೆ ಕಾರ್ಯನಿರ್ವಹಿಸಿ. ಪೌರ ಕಾರ್ಮಿಕರಿಗೆ ಅಗತ್ಯ ಸೌಲಭ್ಯ ಒದಗಿಸಿ ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಎಂದು ಅಧಿಕಾರಿಗಳಿಗೆ ತಿಳಿಸಿದರು.

    ನಗರಸಭೆ ಸದಸ್ಯರಾದ ವೈ. ಪ್ರಕಾಶ್, ಕೆ.ವೀರಭದ್ರಯ್ಯ, ಬಿ.ಟಿ.ರಮೇಶ್ ಗೌಡ, ಮುಖಂಡರಾದ ಬೋರಣ್ಣ, ಓ.ಆಂಜನೇಯ, ಖಾದರ್, ತಹಸೀಲ್ದಾರ್ ಎಂ.ಮಲ್ಲಿಕಾರ್ಜುನ, ಪೌರಾಯುಕ್ತ ಪಿ.ಪಾಲಯ್ಯ, ಡಿವೈಎಸ್ಪಿ ರೋಷನ್ ಜಮೀರ್, ವೃತ್ತ ನಿರೀಕ್ಷಕ ಈ.ಆನಂದ್, ಜೆಸಿಬಿ ಮಾಲೀಕರಾದ ಜಗದೀಶ, ರಾಮಕೃಷ್ಣರೆಡ್ಡಿ, ಗೋಪನಹಳ್ಳಿ ರವಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts