More

    ಚಳ್ಳಕೆರೆಗೆ ಬಂದ ಸೂರಿಗಾಗಿ ಕೋಟಿ ಹೆಜ್ಜೆ

    ಚಳ್ಳಕೆರೆ: ಕೂಲಿ ಕಾರ್ಮಿಕರು ಸೇರಿ ಪ್ರತಿ ಬಡ ಕುಟುಂಬಕ್ಕೂ ವಸತಿ ಸೌಲಭ್ಯ ಕಲ್ಪಿಸಬೇಕು ಎಂದು ಸಿಪಿಐ ಸಂಘಟನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಸಾತಿ ಸುಂದರೇಶ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.

    ಸಿಪಿಐ ಸಂಘಟನೆಯಿಂದ ಸೂರಿಗಾಗಿ ಕೋಟಿ ಹೆಜ್ಜೆ ಎಂಬ ಪಾದಯಾತ್ರೆಯನ್ನು ಬಳ್ಳಾರಿಯಿಂದ ಆರಂಭಿಸಿ ಮೊಳಕಾಲ್ಮೂರು, ಕೂಡ್ಲಿಗಿ, ಕೊಟ್ಟೂರು, ಹರಪನಹಳ್ಳಿ, ದಾವಣಗೆರೆ, ಚನ್ನಗಿರಿ, ಹೊಳಲ್ಕೆರೆ ಚಿತ್ರದುರ್ಗ ಮಾರ್ಗವಾಗಿ ಶುಕ್ರವಾರ ನಗರಕ್ಕೆ ಆಗಮಿಸಿದ ಪಾದಯಾತ್ರೆಗೆ ಭವ್ಯ ಸ್ವಾಗತ ಕೋರಿದ ಬಳಿಕ ನಗರದ ಸರ್ಕಾರಿ ಮಾಧ್ಯಮಿಕ ಶಾಲಾ ಆವರಣದಲ್ಲಿ ನಡೆದ ಬೃಹತ್ ಸಭೆಯಲ್ಲಿ ಮಾತನಾಡಿದರು.

    ರಾಜ್ಯದಲ್ಲಿ 37 ಲಕ್ಷ ಕುಟುಂಬಗಳಿಗೆ ವಸತಿ ವ್ಯವಸ್ಥೆ ಇಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಸುಳ್ಳು ಲೆಕ್ಕ ಹೇಳಿದ್ದಾರೆ. ಒಂದೂವರೆ ಕೋಟಿ ಜನರಿಗೆ ವಸತಿ ಸೌಲಭ್ಯ ಇಲ್ಲದೆ ನಗರದಲ್ಲಿ ಕೊಳಚೆ ಪ್ರದೇಶದಲ್ಲಿ ಮತ್ತು ದೊಡ್ಡ ದೊಡ್ಡ ಕೊಳವೆಗಳಲ್ಲಿ ಜೀವನ ಮಾಡುತ್ತಿದ್ದಾರೆ.

    ಹಳ್ಳಿಗಳಲ್ಲಿ ಈಗಲೂ ಗುಡಿಸಲುಗಳಲ್ಲಿ ಜೀವನ ಕಟ್ಟಿಕೊಂಡಿದ್ದಾರೆ. ಒಂದು ಕುಟುಂಬದಲ್ಲಿ ಎರಡು ಮೂರು ಸಂಸಾರಗಳು ಜೀವನ ಮಾಡುವ ಪರಿಸ್ಥಿತಿ ಇದೆ. ಸ್ಥಳೀಯವಾಗಿ ಲಭ್ಯವಿರುವ ಸರ್ಕಾರಿ ಭೂಮಿಯನ್ನು ವಸತಿ ಯೋಜನೆಗೆ ನೀಡಬೇಕು ಎನ್ನುವ 1972ರ ಕರ್ನಾಟಕ ಭೂ ಕಾಯ್ದೆ ಜಾರಿ ಇದೆ. ಆದರೂ, ಸರ್ಕಾರ ಪ್ರತಿಯೊಬ್ಬರಿಗೂ ವಸತಿ ಸೌಲಭ್ಯಕ್ಕೆ ಮುಂದಾಗುತ್ತಿಲ್ಲ ಎಂದು ಆರೋಪ ಮಾಡಿದರು.

    ಸಿಪಿಐ ಸಂಘಟನೆ ಉಪಾಧ್ಯಕ್ಷ ಸಿ.ವೈ.ಶಿವರುದ್ರಪ್ಪ ಮಾತನಾಡಿ, ಹೆಚ್ಚುವರಿ ಭೂಮಿಯನ್ನು ಹಿಡುವಳಿ ಮಾಡಿಕೊಂಡಿರುವ ಜಮೀನ್ದಾರರಿಂದ ಹಿಂಪಡೆದು ಭೂರಹಿತ ಕುಟುಂಬ ಮತ್ತು ವಸತಿ ರಹಿತ ಫಲಾನುಭವಿಗಳಿಗೆ ನೀಡಬೇಕು ಎಂದು ಆಗ್ರಹಿಸಿದರು.

    ಸಂಘಟನೆಯ ಮುಖಂಡರಾದ ದೊಡ್ಡ ಉಳ್ಳಾರ್ತಿ ಕರಿಯಣ್ಣ, ಎಂ.ಸಿ. ಡೋಂಗ್ರೆ, ಡಾ.ಜನಾರ್ದನ , ರಾಮಚಂದ್ರಪ್ಪ, ಡಾ.ಸಿ.ಮಂಜುನಾಥ, ನಾಗಭೂಷಣ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts