More

    ಮಕ್ಕಳ ಪ್ರತಿಭೆ ಪ್ರದರ್ಶನಕ್ಕೆ ಸೂಕ್ತ ವೇದಿಕೆ

    ಯಲಬುರ್ಗಾ: ಮಕ್ಕಳಲ್ಲಿರುವ ಸುಪ್ತ ಪ್ರತಿಭೆ ಅನಾವರಣಕ್ಕೆ ಪ್ರತಿಭಾ ಕಾರಂಜಿ ಉತ್ತಮ ವೇದಿಕೆಯಾಗಿದೆ ಎಂದು ಗ್ರಾಪಂ ಅಧ್ಯಕ್ಷೆ ರತ್ನಮ್ಮ ಮಲ್ಲಪ್ಪ ವಣಗೇರಿ ಹೇಳಿದರು.

    ಇದನ್ನೂ ಓದಿ: ನೃತ್ಯ ಶಾಲೆಯ ಮಕ್ಕಳಿಗೆ ಅಭಿನಂದನಾ ಕಾರ್ಯಕ್ರಮ

    ತಾಲೂಕಿನ ಬಂಡಿ ಗ್ರಾಮದ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಶಾಲಾ ಹಂತದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಪಠ್ಯೇತರ ಚಟುವಟಿಕೆ ಆಯೋಜಿಸುವುದರಿಂದ ಮಕ್ಕಳಲ್ಲಿ ಸ್ಪರ್ಧಾ ಮನೋಭಾವ, ಸಾಮರಸ್ಯತೆ ಬೆಳೆಯುತ್ತದೆ.

    ವಿದ್ಯಾರ್ಥಿಗಳ ಭೌತಿಕ ಬೆಳವಣಿಗೆಯಲ್ಲಿ ಇಂಥ ಕಾರ್ಯಕ್ರಮಗಳು ಪೂರಕವಾಗಿದ್ದು, ಕೇವಲ ಮೊಬೈಲ್‌ಗಳಿಗೆ ಸೀಮಿತಿಗೊಳಿಸದೇ ಸ್ಪರ್ಧೆಯಲ್ಲಿ ಭಾಗವಹಿಸುವಂಥ ಇಚ್ಛಾಶಕ್ತಿ ಬೆಳೆಸುವುದು ಅವಶ್ಯವಿದೆ ಎಂದರು.

    ಗ್ರಾಪಂ ಉಪಾಧ್ಯಕ್ಷೆ ಕಳಕಮ್ಮ ಹೊರಪೇಟಿ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ವೈ.ಜಿ.ಪಾಟೀಲ್, ಪ್ರಾಚಾರ್ಯ ಶರಣಯ್ಯ ಹಾಲಕೇರಿಮಠ, ಶೇಖರಯ್ಯ ಶಾಸ್ತ್ರಿ, ಗಣ್ಯರಾದ ಶರಣಪ್ಪ ಬದ್ರಗೌಡ್ರು, ಈರಪ್ಪ ಬದ್ರಗೌಡ್ರು, ದೊಡ್ಡಬಸಪ್ಪ ಬಾವಿಮನಿ, ಶಂಕ್ರಪ್ಪ ಕೊತಬಾಳ, ಬಸವರಾಜ ರೊಟ್ಟಿ, ಶ್ರೀಕಾಂತ ಹೊರಪೇಟೆ, ಶರಣಕುಮಾರ ಬಂಡಿ, ಗೂಳಪ್ಪ ನೆಲಗಣಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts