More

    ಮುಖ್ಯಶಿಕ್ಷಕನ ವಿರುದ್ಧ ಮಕ್ಕಳ ಪ್ರತಿಭಟನೆ

    ಬಾಗಲಕೋಟೆ: ಬಿಸಿಯೂಟ ಅಕ್ಕಿಯನ್ನು ಅಕ್ರಮ ಸಾಗಾಟ ಮಾಡಿದ ಆರೋಪದ ಮೇಲೆ ಅಮಾನತುಗೊಂಡಿದ್ದ ಮುಖ್ಯಶಿಕ್ಷಕ ಮತ್ತೆ ತಮ್ಮ ಶಾಲೆಗೆ ಬರುವುದು ಬೇಡ ಎಂದು ಆಗ್ರಹಿಸಿ ಬಿಟಿಡಿಎ ಪ್ರಾಥಮಿಕ ಶಾಲೆ ಮಕ್ಕಳು ತರಗತಿಗೆ ಹೋಗದೆ ಸೋಮವಾರ ಪ್ರತಿಭಟನೆ ನಡೆಸಿದರು.

    ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಸರ್ಕಾರಿ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಶರಣಪ್ಪ ಬೇವೂರ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

    ಮುಖ್ಯಶಿಕ್ಷಕ ಬಿಸಿಯೂಟದ ಅಕ್ಕಿಯನ್ನು ಅಕ್ರಮವಾಗಿ ಸಾಗಿಸಿದ್ದ ಆರೋಪದ ಮೇಲೆ ಅಮಾನತುಗೊಂಡಿದ್ದರು. ಈ ಬಗ್ಗೆ ಶರಣಪ್ಪ ಬೇವೂರ ಕೆಎಟಿ ಮೊರೆ ಹೋಗಿ ಅಲ್ಲಿನ ಆದೇಶದಂತೆ ಅಮಾನತು ರದ್ದುಪಡಿಸಿ ಅವರಿಗೆ ಶಾಲೆಗೆ ಮರಳಿ ನೇಮಿಸಲಾಗಿತ್ತು.

    ಆದರೆ, ಅಕ್ಕಿ ಸಾಗಿಸಿರುವ ಮುಖ್ಯ ಶಿಕ್ಷಕ ಬೇಡ ಎಂದು ಕೆಲ ದಿನಗಳ ಹಿಂದೆ ಒಂದಷ್ಟು ಪಾಲಕರು ಪ್ರತಿಭಟನೆ ನಡೆಸಿದ್ದರು. ಇದೀಗ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರವೇಶದ ದ್ವಾರದ ಬಳಿ ಪ್ರತಿಭಟನೆ ನಡೆಸಿದರು. ಮುಖಂಡರಾದ ಸಂಗಮೇಶ ದೊಡ್ಡಮನಿ, ಭರಮು ಪೂಜಾರಿ ಸಹ ಶಿಕ್ಷಕರು ಈ ಶಾಲೆಗೆ ಬೇಡವೇ ಬೇಡ ಎಂದು ಬಿಗಿಪಟ್ಟು ಹಿಡಿದಿದ್ದರು.

    ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನದವರೆಗೂ ಮಕ್ಕಳು ತರಗತಿಗೆ ಹೋಗದೆ ಮುಖ್ಯ ಶಿಕ್ಷಕ ಬೇಡ ಎಂದು ಘೋಷಣೆ ಕೂಗುತ್ತ ಧರಣಿ ನಡೆಸಿದರು. ಬಳಿಕ ಶಾಲೆಗೆ ಆಗಮಿಸಿದ ಡಿಡಿಪಿಐ ಬಿ.ಕೆ.ನಂದನೂರ, ವಿದ್ಯಾರ್ಥಿಗಳು ಹಾಗೂ ಮುಖಂಡರ ಜೊತೆ ಮಾತನಾಡಿದರು. ಶಿಕ್ಷಕರನ್ನ ಅಮಾನತು ಮಾಡಬೇಕು ಎಂದು ಬಿಗಿಪಟ್ಟು ಹಿಡಿದರು. ಆದರೆ, ನ್ಯಾಯಾಲಯದಿಂದ ಆದೇಶ ತಂದಿದ್ದರಿಂದ ಅವರನ್ನು ಮತ್ತೆ ಅಮಾನತು ಮಾಡಲು ಆಗಲ್ಲ ಎಂದು ಡಿಡಿಪಿಐ ಹೇಳಿದರು. ಬೇರೆ ಕಡೆಗೆ ವರ್ಗಾವಣೆಗೆ ಪಟ್ಟು ಹಿಡಿದರು. ಮುಖ್ಯ ಶಿಕ್ಷಕರನ್ನು ಕಡ್ಡಾಯ ರಜೆ ಮೇಲೆ ಕಳುಹಿಸಲಾಗುವುದು ಎಂದು ಡಿಡಿಪಿಐ ಭರವಸೆ ನೀಡಿದ್ದರಿಂದ ಪ್ರತಿಭಟನೆ ಕೈಬಿಟ್ಟರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts