More

    ಮಕ್ಕಳ ಉತ್ತಮ ಶಿಕ್ಷಣದಿಂದ ಭವ್ಯ ಭಾರತ ನಿರ್ಮಾಣ ಸಾಧ್ಯ

    ಸಂಡೂರು: ಸರ್ಕಾರಿ, ಅನುದಾನಿತ ಶಾಲೆಗಳ 9ಮತ್ತು 10ನೇ ವಿದ್ಯಾರ್ಥಿಗಳಿಗೆ ಪೌಷ್ಠಿಕ ಆಹಾರ ಯೋಜನೆ ಭಾಗವಾಗಿ ಬೇಯಿಸಿದ ಮೊಟ್ಟೆಗಳನ್ನು ಶಾಸಕ ಈ.ತುಕಾರಾಮ್ ವಿತರಿಸಿದರು.

    ಇದನ್ನೂ ಓದಿ: http://ಮಕ್ಕಳ ಉತ್ತಮ ಶಿಕ್ಷಣದಿಂದ ಭವ್ಯ ಭಾರತ ನಿರ್ಮಾಣ ಸಾಧ್ಯ

    ತಾಲೂಕಿನ ಕೃಷ್ಣಾನಗರ ಆದರ್ಶ ವಿದ್ಯಾಲಯದಲ್ಲಿ ಮಕ್ಕಳಿಗೆ ಮೊಟ್ಟೆ, ಬಾಳೆಹಣ್ಣು, ಶೇಂಗಾಚಿಕ್ಕಿಗಳನ್ನು ವಿತರಿಸಿ ಈಚೆಗೆ ಮಾತನಾಡಿ, ಸದರಿ ಯೋಜನೆಯಿಂದ ಮಕ್ಕಳ ಅಪೌಷ್ಟಿಕತೆ, ರಕ್ತಹೀನತೆ ಮತ್ತು ಬಹು ಪೋಷಾಕಾಂಶಗಳ ನ್ಯೂನತೆಗಳನ್ನು ನಿವಾರಿಸಬಹುದು.

    ಪೋಷಣ್ ಬಿ ಔರ್ ಪಡಾಯಿ ಬಿ ಎನ್ನಾತ್ತಾ ಅರೋಗ್ಯ ಮತ್ತು ಶಿಕ್ಷಣದಿಂದ ಕೂಡಿದ ಮಕ್ಕಳಿಂದಲೇ ಭವ್ಯ ಭಾರತ ನಿರ್ಮಾಣವಾಗುತ್ತದೆ ಎಂದು ಹೇಳಿದರು.

    ಬಿಇಒ ಡಾ.ಐ.ಆರ್.ಅಕ್ಕಿ ಮಾತನಾಡಿ, ಸದರಿ ಯೋಜನೆಯು ಅಂದಾಜು 280ಕೋ.ರೂ ಇದೆ. ರಾಜ್ಯದ 58ಲಕ್ಷ ವಿದ್ಯಾರ್ಥಿಗಳು ಯೋಜನೆಯ ಫಲಾನುಭವಿಗಳಾಗಿದ್ದಾರೆ. ತಾಲೂಕಿನ 9ಮತ್ತು10ನೇ ತರಗತಿ ವಿಭಾಗದಲ್ಲಿ 6,459 ಮಕ್ಕಳು ನೇರವಾಗಿ ಪ್ರಯೋಜನ ಪಡೆಯುತ್ತಾರೆ.

    ತಾಲೂಕಿನ 1ರಿಂದ 10ನೇ ತರಗತಿಯ 34ಸಾವಿರ ಮಕ್ಕಳು ಯೋಜನೆ ವ್ಯಾಪ್ತಿಗೆ ಒಳಪಡುತ್ತಾರೆ. 2023-24ನೇ ಸಾಲಿನ ಪ್ರತಿ ಮಗುವಿಗೆ 80ಮೊಟ್ಟೆಯನ್ನು ನೀಡಲು ಉದ್ದೇಶಿಸಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts